ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಪಲ್ ವಿಶ್ವದ ಅತಿ ದೊಡ್ಡ ಟೆಕ್ ಕಂಪನಿ

By Prasad
|
Google Oneindia Kannada News

Appla overtakes Microsoft as biggest Tech company
ಸಿಯಾಟಲ್, ಮೇ 27 : ಐಫೋನ್ ತಯಾರಿಸಿ ಜಾಗತಿಕ ಮಾರುಕಟ್ಟೆಯಲ್ಲಿ ಸಂಚಲನವೆಬ್ಬಿಸಿರುವ ಆಪಲ್ ಕಂಪನಿ, ಇತ್ತೀಚಿನ ಮಾರುಕಟ್ಟೆ ಮೌಲ್ಯ ಆಧರಿಸಿ, ಮೈಕ್ರೋಸಾಫ್ಟ್ ಕಂಪನಿಯನ್ನು ಹಿಂದಿಕ್ಕಿ ಜಗತ್ತಿನ ಅತಿದೊಡ್ಡ ಟೆಕ್ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ರಾಯ್ಟರ್ ಮಾಹಿತಿ ಪ್ರಕಾರ, ಬುಧವಾರ ನಾಸ್ಡಾಕ್ ನಲ್ಲಿ ಕ್ಯಾಲಿಫೋರ್ನಿಯಾ ಮೂಲದ ಆಪಲ್ ಕಂಪನಿಯ ಶೇರು ಬೆಲೆ ಶೇ.2.8ರಷ್ಟು ಹೆಚ್ಚಾಗಿದ್ದು, ಕಂಪನಿಯ ಒಟ್ಟಾರೆ ಆದಾಯ 229 ಬಿಲಿಯನ್ ಅಮೆರಿಕನ್ ಡಾಲರ್ ತಲುಪಿದೆ. ಇದೇ ಸಮಯದಲ್ಲಿ ಮೈಕ್ರೋಸಾಫ್ಟ್ ಕಂಪನಿಯ ಶೇರು ಬೆಲೆ ಕುಸಿತ ಕಂಡಿದ್ದು, ಆದಾಯ 219 ಡಾಲರ್ ಆಗಿದೆ. ದಿನದ ಕೊನೆಗೆ ಎರಡೂ ಕಂಪನಿಗಳ ಶೇರು ಬೆಲೆ ತುಸು ಕುಸಿತ ಕಂಡರೂ, ಆಪಲ್ ಕಂಪನಿ ಸ್ಪಷ್ಟವಾಗಿ ಮೈಕ್ರೋಸಾಫ್ಟ್ ಗಿಂತ ಮುನ್ನಡೆ ಸಾಧಿಸಿದೆ.

ಸರಿಯಾಗಿ ಹತ್ತು ವರ್ಷಗಳ ಹಿಂದೆ ಆಪಲ್ ಕಂಪನಿ ವ್ಯಾಪಾರವಿಲ್ಲದೆ ಬಣ್ಣ ಕಳೆದುಕೊಂಡಿತ್ತು. ಈಗ ಅದರ ಶೇರು ಬೆಲೆಗಳು ಹತ್ತು ವರ್ಷದಲ್ಲಿ ಹತ್ತರಷ್ಟು ಜಾಸ್ತಿಯಾಗಿದೆ. ಇದಕ್ಕೆ ಕಾರಣ, ಅತ್ಯಂತ ಸುಲಭವಾಗಿ ಬಳಸಬಹುದಾದ ಮತ್ತು ಆಕರ್ಷಕ ಎಲೆಕ್ಟ್ರಾನಿಕ್ ಉತ್ಪನ್ನಗಳಾದ ಐಪಾಡ್, ಐಪೋನ್ ಮತ್ತು ಮ್ಯಾಕ್ ಬುಕ್ ಲ್ಯಾಪ್ ಟಾಪ್. ಇವುಗಳ ತಯಾರಿಕೆಯಿಂದ ಗ್ರಾಹಕರನ್ನು ಸೆಳೆಯುವಲ್ಲಿ ಆಪಲ್ ಯಶಸ್ವಿಯಾಯಿತು. ಆದರೆ, ಕಳೆದ ಹತ್ತು ವರ್ಷಗಳಲ್ಲಿ ಮೈಕ್ರೋಸಾಫ್ಟ್ ಶೇರುಗಳು ಇಳಿಮುಖದಲ್ಲಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X