ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದುಬೈಗೆ ಮಾಂಸ ಸಪ್ಲೈ ಭಾರತ ಟಾಪ್

By Mahesh
|
Google Oneindia Kannada News

ದುಬೈ, ಮೇ.26: ಭಾರತ, ಅಸ್ಟ್ರೇಲಿಯಾ ಹಾಗೂ ಬ್ರೆಜಿಲ್ ದುಬೈಗೆ ಅತ್ಯಧಿಕ ಮಾಂಸ ಸರಬರಾಜು ಮಾಡುವ ದೇಶಗಳಾಗಿವೆ ಎಂದು ಕಳೆದ ವರ್ಷದ ಅಮದು ರಫ್ತು ಪ್ರಮಾಣದ ಆಧಾರದ ಮೇಲೆ, ಇಲ್ಲಿನ ವಿದೇಶಿ ವಹಿವಾಟು ಸಚಿವಾಲಯ ಹೇಳಿದೆ.

ಗಣರಾಜ್ಯಕ್ಕೆ ಸರಬರಾಜು ಮಾಡಿದ ಮಾಂಸದಲ್ಲಿ ಭಾರತದ ಪಾಲು ಶೇ.16.3 ರಷ್ಟಾಗಿದ್ದು ಬ್ರೆಜಿಲ್ ಮತ್ತು ಅಮೆರಿಕದ ಪಾಲು ಕ್ರಮವಾಗಿ ಶೇ. 13.9 ಹಾಗೂ ಶೇ.6.3 ರಷ್ಟಿದೆ. ಸಚಿವಾಲಯದ ಅಧ್ಯಯನದ ಪ್ರಕಾರ ವಿವಿಧ ದೇಶಗಳು ತಮ್ಮ ಗೋ ಮಾಂಸ ಬೇಡಿಕೆಯ ಶೇ. 52.4 ರಷ್ಟನ್ನು 5 ದೇಶಗಳಿಂದ ಪಡೆದುಕೊಂಡಿದ್ದು ಇದರಲ್ಲಿ ಹಾಲೆಂಡ್ ಮುಂಚೂಣಿಯಲ್ಲಿದ್ದು ಇದರ ಪಾಲು ಶೇ.13.1 ರಷ್ಟಿದೆ.

ಯುಎಇ ಗಣರಾಜ್ಯದ ಶೇ.87 ರಷ್ಟು ಶೀಥಲೀಕರಿಸಿದ ಮಾಂಸದ ಆಮದಿನಲ್ಲಿ ಭಾರತದ ಪಾಲು ಶೇ.55 ರಷ್ಟಿದ್ದು, ಬ್ರೆಜಿಲ್ ನ ಪಾಲು ಶೇ.25 ಹಾಗೂ ಆಸ್ಟ್ರೇಲಿಯಾದ ಪಾಲು ಶೇ.7 ಆಗಿದೆ. ಮಾಂಸದ ಸರಬರಾಜಿಗೆ ಇತರ ದೇಶಗಳತ್ತ ಗಮನ ಹರಿಸುತ್ತಿದ್ದು, ಅರಬ್ ಮತ್ತು ಆಫ್ರಿಕಾದ ದೇಶಗಳತ್ತ ಮುಖ ಮಾಡಿದೆ ಎಂದು ಸಚಿವಾಲಯದ ವರದಿ ಹೇಳಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X