ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕ ವೀಸಾ ಅರ್ಜಿ ಶುಲ್ಕ ಏರಿಕೆ

By Prasad
|
Google Oneindia Kannada News

US hikes VISA application fee
ಹೊಸದಿಲ್ಲಿ, ಮೇ 2: ಮುಂದಿನ ಜೂನ್ ನಾಲ್ಕರಿಂದ ಅನ್ವಯವಾಗುವಂತೆ ಅಮೆರಿಕ ತನ್ನ ವೀಸಾ ಅರ್ಜಿಗಳ ಶುಲ್ಕವನ್ನು ಹೆಚ್ಚಿಗೆ ಮಾಡಿದೆ. ಮಾಧ್ಯಮಗಳಿಗೆ ಬಿಡುಗಡೆ ಮಾಡಲಾಗಿರುವ ಹೇಳಿಕೆಯಲ್ಲಿ ಈ ವಿಷಯ ತಿಳಿಸಿರುವ ಅಮೆರಿಕಾದ ಸ್ಟೇಟ್ ಇಲಾಖೆ, ಹೆಚ್ಚುತ್ತಿರುವ ವೀಸಾ ಅರ್ಜಿಯ ಪರಿಷ್ಕರಣೆ ಖರ್ಚುಗಳನ್ನು ಸರಿದೂಗಿಸಲು ಬೆಲೆಗಳನ್ನು ಹೆಚ್ಚಿಸಲಾಗಿದೆ ಎಂದು ಸಮರ್ಥಿಸಿಕೊಂಡಿದೆ.

ನಾನ್ ಇಮಿಗ್ರೆಂಟ್ ವೀಸಾಗಳಿಗೆ ಜನವರಿ 1, 2008ರಿಂದ 131 ಡಾಲರ್ ಶುಲ್ಕ ವಿಧಿಸಲಾಗುತ್ತಿತ್ತು. ಆದರೆ ಅರ್ಜಿಗಳ ಪರಿಷ್ಕರಣೆ ಕೆಲಸ ಅತಿಯಾಗಿ, ಖರ್ಚು ವೆಚ್ಚ ಹೆಚ್ಚಾಗುತ್ತಿರುವುದರಿಂದ ಶುಲ್ಕ ಏರಿಸಲಾಗುತ್ತಿದೆ. ಬಿ 1, ಬಿ 2, ಪ್ರವಾಸಿ, ಬಿಸಿನೆಸ್, ಮತ್ತು ವಿದ್ಯಾರ್ಥಿ(F) ವೀಸಾಗಳಿಗೆ ಶುಲ್ಕವನ್ನು 140 ಡಾಲರ್ ಗಳಿಗೆ ಏರಿಸಲಾಗಿದೆ. ಪಿಟಿಷನ್ ಆಧಾರಿತ ವೀಸಾ ಅರ್ಜಿ ಶುಲ್ಕ 150 ಡಾಲರ್ ಗಳಾಗಲಿವೆ.

ಈ ವಿಭಾಗದಲ್ಲಿ 'ಹೆಚ್ ' ವೀಸಾವನ್ನು ತಾತ್ಕಾಲಿಕ ಕೆಲಸಗಾರರು ಮತ್ತು ವಿದ್ಯಾರ್ಥಿಗಳಿಗೆ, 'ಎಲ್ ' ವೀಸಾವನ್ನು ಅಂತರ ಕಂಪನಿ ನೌಕರರ ವರ್ಗಾವರ್ಗಿಗೆ , 'ಒ ' ವೀಸಾವನ್ನು ವಿಶೇಷ ಕೌಶಲ್ಯವುಳ್ಳವರಿಗೆ, 'ಪಿ ' ವೀಸಾವನ್ನು ಕ್ರೀಡಾಪಟುಗಳು ಮತ್ತು ಕಲಾವಿದರಿಗೆ, 'ಕ್ಯೂ ' ವೀಸಾವನ್ನು ಅಂತಾರಾಷ್ಟ್ರೀಯ ಸಂಸ್ಕೃತಿ ಮಿನಿಮಯದ ಕಲಾವಿದರಿಗೆ ಮತ್ತು 'ಆರ್ ' ವೀಸಾವನ್ನು ಧಾರ್ಮಿಕ ಕಾರ್ಯಕರ್ತರಿಗೆ ನೀಡಲಾಗುತ್ತಿದೆ.

ಅಮೆರಿಕ ನಾಗರಿಕರ ವೈವಾಹಿಕ ಸಂಗಾತಿಗಳಿಗೆ 'ಕೆ ' ನಮೂನೆಯ ವೀಸಾವನ್ನು ನೀಡಲಾಗುತ್ತಿದ್ದು, ಇದಕ್ಕೆ 350 ಡಾಲರ್ ಗಳ ಶುಲ್ಕ ನಿಗದಿಪಡಿಸಲಾಗಿದೆ. ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಹಾಗೂ ವಾಣಿಜ್ಯೋದ್ಯಮಿಗಳಿಗೆ 'ಇ ' ನಮೂನೆ ವೀಸಾ ನೀಡಲಾಗುತಿದ್ದು ಇದಕ್ಕೆ 390 ಡಾಲರ್ ಶುಲ್ಕ ನಿಗದಿಪಡಿಸಲಾಗಿದೆ ಎಂದು ಇಲಾಖೆ ಹೇಳಿದೆ. ಅಂತೂ ಅಮೆರಿಕಾದ ಫೆಡರಲ್ ಸರಕಾರ ಇದರಲ್ಲೂ ಹಣ ಮಾಡಲು ನಿಂತಂತಾಯಿತು!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X