ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗಳೂರು ದುರಂತ : ಬ್ಲ್ಯಾಕ್ ಬಾಕ್ಸ್ ಪತ್ತೆ

By Mrutyunjaya Kalmat
|
Google Oneindia Kannada News

Mangalore air crash black box found
ಮಂಗಳೂರು, ಮೇ. 25 : ಸತತ ಮೂರು ದಿನಗಳ ಕಾಲ ನಡೆಸಿದ ಅವಿರತ ಶೋಧದ ನಂತರ ಕೊನೆಗೂ ಮಹತ್ವದ ಬ್ಲ್ಯಾಕ್ ಬಾಕ್ಸ್ (digital flight data recorder) ಪತ್ತೆ ಹಚ್ಚುವಲ್ಲಿ ತನಿಖಾ ತಂಡ ಯಶಸ್ವಿಯಾಗಿದೆ. ಮಂಗಳವಾರ ಬೆಳಗ್ಗೆ ತನಿಖೆ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಬ್ಲ್ಯಾಕ್ ಬಾಕ್ಸ್ ಪತ್ತೆಯಾಗಿದೆ.

ಕಳೆದ ಶನಿವಾರ ಬೆಳಗ್ಗೆ ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣದ ಸಮೀಪ ಏರ್ ಇಂಡಿಯಾ ವಿಮಾನ ಅಪಘಾತಕ್ಕೆ ಒಳಗಾಗಿತ್ತು. ಅವಘಡದಲ್ಲಿ 158 ಮಂದಿ ಸಾವನ್ನಪ್ಪಿದ್ದರು. ಪವಾಡಸದೃಶ ರೀತಿಯಲ್ಲಿ 8 ಮಂದಿ ಬದುಕುಳಿದಿದ್ದರು. ಅಪಘಾತಕ್ಕೆ ಕಾರಣ ಸ್ಪಷ್ಟವಾಗಿ ತಿಳಿದು ಬಂದಿಲ್ಲ. ಆದರೆ, ವಿಮಾನದಲ್ಲಿರುವ ಬ್ಲ್ಯಾಕ್ ಬಾಕ್ಸ್ ನಲ್ಲಿ ಎಲ್ಲವೂ ದಾಖಲಾಗಿರುತ್ತೆ. ಹೀಗಾಗಿ ಅಪಘಾತದ ನಂತರ ಈ ಬ್ಲ್ಯಾಕ್ ಬಾಕ್ಸ್ ಗಾಗಿ ತೀವ್ರ ಹುಡುಕಾಟ ಆರಂಭವಾಗಿತ್ತು. ಮಂಗಳವಾರ ಬೆಳಗ್ಗೆ ಬ್ಲ್ಯಾಕ್ ಬಾಕ್ಸ್ ಪತ್ತೆಯಾಗಿದೆ.

ಏನಿದು ಬ್ಲ್ಯಾಕ್ ಬಾಕ್ಸ್

ವಿಮಾನದಲ್ಲಿ ಧ್ವನಿಗ್ರಹಣಕ್ಕೆಂದು ಬಳಸಲಾಗುವ ಎರಡು ಸಾಧನಗಳನ್ನೇ ತಾಂತ್ರಿಕ ಭಾಷೆಯಲ್ಲಿ ಬ್ಲ್ಯಾಕ್ ಬಾಕ್ಸ್ ಎನ್ನಲಾಗುತ್ತದೆ. ವಿಮಾನ ಅಪಘಾತವಾದಾಗ ಅದಕ್ಕೆ ಕಾರಣ ಪತ್ತೆ ಹಚ್ಚಲು ನೆರಲಾಗಲೆಂದೇ ಈ ರಿಕಾರ್ಡಿಂಗ್ ಸಾಧನವನ್ನು ಅವಲಂಬಿಸಲಾಗಿದೆ. ಪ್ರೈಟ್ ಟಾಡಾ ರೆಕಾರ್ಡರ್(ಎಫ್ ಡಿಆರ್) ಹಾಗೂ ಕಾಕ್ ಪಿಟ್ ವೈಸ್ ರೆಕಾರ್ಡರ್ (ಸಿವಿಆರ್) ಎಂದು ಎರಡು ವಿಧ. ಮೊದಲನೆಯದು ವಿಮಾನದ ಒಟ್ಟಾರೆ ಕಾರ್ಯ ಸಾಧನವನ್ನು ಗ್ರಹಿಸಿದರೆ, ಎರಡನೇ ಯಂತ್ರ ಎಂಜಿನ್ ಶಬ್ಧ ಹಾಗೂ ಅಲ್ಲಿನ ಇನ್ನಾವುದೇ ಶಬ್ಧಗಳನ್ನು ಸಿವಿಆರ್ ಗ್ರಹಿಸುತ್ತದೆ.

ವಿಡಿಯೋ: ಕೊನೆಗೂ ಸಿಕ್ತು ಬ್ಲಾಕ್ ಬಾಕ್ಸ್

ಎಫ್ ಡಿಆರ್ ನ್ನು ವಿಮಾನದ ಹಿಂಭಾಗದಲ್ಲಿ ಅಳವಡಿಸಲಾಗಿರುತ್ತದೆ. ಅಪಘಾತದಲ್ಲಿ ಕೊನೆಯಭಾಗ ಹೆಚ್ಚು ಹೊಡೆತ ತಿನ್ನುವ ಕಾರಣದಿಂದ ಅದನ್ನು ಹಿಂಭಾಗದಲ್ಲಿ ಅಳವಡಿಸಲಾಗಿರುತ್ತದೆ. ವಿಮಾನದ ಎಂಜಿನ್ ಗೆ ಜೋಡಿಸಲಾದ ಜನರೇಟರ್ ನಿಂದ ಬ್ಲ್ಯಾಕ್ ಬಾಕ್ಸ್ ಚಾರ್ಜ್ ಆಗುತ್ತದೆ. ವಿಮಾನದ ಗಾತ್ರ ಆಧರಿಸಿ ವೋಲ್ಟೇಜ್ ನಿರ್ಧಾರವಾಗಿರುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X