ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದ ಭವಿಷ್ಯ ಮಕ್ಕಳ ಕೈಯಲ್ಲಿ : ಕಲಾಂ

By Mrutyunjaya Kalmat
|
Google Oneindia Kannada News

APJ Abdul Kalam
ಕೂಡಲಸಂಗಮ, ಮೇ. 24 : ದೇಶದ ರಕ್ಷಣೆಗೆ ಆರ್ಥಿಕ ಭದ್ರತೆ ಬೇಕು. ಬಡತನ ನಿರ್ಮೂಲನೆಯಿಂದ ಸಾಮಾಜಿಕ ಅಭಿವೃದ್ಧಿ, ಶಿಕ್ಷಣದಿಂದಲೇ ಎಲ್ಲ ಸಮಸ್ಯೆಗಳಿಗೆ ಪರಿಹಾರ, ಮಕ್ಕಳ ಕೈಯಲ್ಲಿ ದೇಶದ ಭವಿಷ್ಯವಿದೆ. ಅದನ್ನು ರಕ್ಷಿಸುವ ಹೊಣೆ ಮಕ್ಕಳೇ ನೀವೇ ಹೊತ್ತುಕೊಳ್ಳಬೇಕು ಎಂದು ಮಾಜಿ ರಾಷ್ಟ್ರಪತಿ ಎಪಿಜೆ ಅಬ್ಧುಲ್ ಕಲಾಂ ಮಕ್ಕಳಿಗೆ ಹೇಳಿದ ನೀತಿ ಪಾಠವಿದೆ.

ಸಾವಯುವ ಕೃಷಿ ಮಿಷನ್ ವತಿಯಿಂದ ಶ್ರೀಕ್ಷೇತ್ರ ಕೂಡಲಸಂಗಮದಲ್ಲಿ ಭಾನುವಾರ ಆಯೋಜಿಸಿಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸುವ ಮುನ್ನ ಕಲಾಂ ಅವರ ಮಕ್ಕಳೊಂದಿಗೆ ಸಂವಾದ ನಡೆಸಿದರು. ದೇಶದ ರಕ್ಷಣೆಗೆ ಆರ್ಥಿಕ ಭದ್ರತೆ, ಬಡತನ ದೊಡ್ಡ ತೊಡಕಾಗಿದೆ. 2020 ರ ಒಳಗಾಗಿ ದೇಶದ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಮುಂದಿನ ದಿನಗಳಲ್ಲಿ ಭಾರತವೇ ಜಗತ್ತನ್ನು ಆಳಲಿದೆ. ಜಗತ್ತಿನ ಭವಿಷ್ಯ ದೇಶದ ಯುವಶಕ್ತಿ ಕೈಯಲ್ಲಿದೆ. ಸೂಕ್ತ ಮಾರ್ಗದರ್ಶನ ನೀಡಿ ಮುನ್ನಡೆಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಕಲಾಂ ಅಭಿಪ್ರಾಯಪಟ್ಟರು.

ಏನಾದರೂ ಆಗಿ ಎಲ್ಲರೂ ಮಾನವೀಯತೆ ಬೆಳೆಸಿಕೊಳ್ಳಿ. ಪ್ರಾಥಮಿಕ ಶಿಕ್ಷಕನಿಗಿಂತ ಅತ್ಯುನ್ನತವಾದ ಸೇವೆ ಇನ್ನೊಂದಿಲ್ಲ. ವ್ಯಕ್ತಿತ್ವ ರೂಪಿಸಿ, ಭವಿಷ್ಯ ರೂಪಿಸುವ ಶಕ್ತಿ ಶಿಕ್ಷಕರಲ್ಲಿದೆ. ನಾನೂ ಸಹ ಶಿಕ್ಷಕನೇ ಆಗಿದ್ದೆ ಎಂದು ಕಲಾಂ ಹೇಳಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X