ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಮಾನ ದುರಂತ, ವಿಮೆ ಕಂಪೆನಿಗಳಿಗೆ ಹೊಡೆತ

By Mahesh
|
Google Oneindia Kannada News

Mangalore air crash, private insures to hit
ಮುಂಬೈ, ಮೇ.24: ಮಂಗಳೂರಿನಲ್ಲಿ ಶನಿವಾರ ಮುಂಜಾನೆ ಅಪಘಾತಕ್ಕೀಡಾದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ದುರಂತದಲ್ಲಿ ರಿಲಯನ್ಸ್ ಸೇರಿದಂತೆ ಖಾಸಗಿ ವಿಮಾ ಕಂಪೆನಿಗಳಿಗೆ 450 ಕೋಟಿ ರೂಪಾಯಿ ಹೊರೆ ಬೀಳಲಿದೆ ಎಂದು ಹೇಳಲಾಗಿದೆ.

ಈ ಕಂಪೆನಿಗಳು ಏರ್ ಇಂಡಿಯಾದಿಂದ 110 ಕೋಟಿ ರೂಪಾಯಿ ವಿಮಾ ಪ್ರೀಮಿಯಮ್ ಆದಾಯ ಗಳಿಸಿದ್ದವು. ಈ ಹಿಂದೆ ರಾಷ್ಟ್ರೀಯ ವಿಮಾನ ಸಾರಿಗೆ ಸಂಸ್ಥೆಗೆ ಸರ್ಕಾರೀ ಸ್ವಾಮ್ಯದ ನ್ಯೂ ಇಂಡಿಯಾ ಅಶೂರೆನ್ಸ್ ಕಂಪೆನಿ ವಿಮಾ ರಕ್ಷೆ ಒದಗಿಸಿತ್ತು. ಇದೇ ಮೊದಲ ಬಾರಿಗೆ ಖಾಸಗಿ ವಿಮಾ ಕಂಪೆನಿಗಳು ವಿಮಾ ರಕ್ಷೆ ಒದಗಿಸಿದ್ದವು.

ರಿಲಯನ್ಸ್ ಜನರಲ್ ಹೊರತಾಗಿ, ಹೆಚ್ ಡಿಎಫ್ ಸಿ ಎರ್ಗೊ, ಇಫ್ಕೋ ಟೋಕಿಯೊ, ಮತ್ತು ಬಜಾಜ್ ಅಲಿಯನ್ಸ್ ಕೂಡ ಈ ವಿಮಾನಕ್ಕೆ ವಿಮಾ ರಕ್ಷೆ ಒದಗಿಸಿವೆ. ಸಾಮಾನ್ಯವಾಗಿ ದೊಡ್ಡ ಮೊತ್ತದ ವಿಮೆಗಳಿಗೆ ವಿಮಾ ಕಂಪೆನಿಗಳು ಮರು ವಿಮೆ ಮಾಡಿರುತ್ತವೆ. ಅದರಂತೆ ಈ ವಿಮಾನಕ್ಕೆ ಸುಮಿಟೊಮೊ ಮತ್ತಯ, ಐಸಿಐಸಿಐ ಲೋಬಾರ್ಡ್ ನಲ್ಲಿ ಮರು ವಿಮೆ ಮಾಡಿಸಲಾಗಿತ್ತು.

ವಿಮಾ ಉದ್ಯಮದ ಮೂಲಗಳ ಪ್ರಕಾರ ಏರ್ ಇಂಡಿಯಾ ತನ್ನ ವಿಮಾನಕ್ಕೆ ಹಾಗೂ ಪ್ರಯಾಣಿಕರಿಗೆ ತಾನು ಒದಗಿಸಿದ ಹೊಣೆಗಾರಿಕೆಗೆ ವಿಮಾ ಮೊತ್ತವನ್ನು ಕ್ಲೇಮ್ ಮಾಡಲಿದ್ದು ವಿಮಾ ಕಂಪೆನಿಗಳು ಹಾಗೂ ಮರು ವಿಮಾ ಕಂಪೆನಿಗಳು ಸುಮಾರು 395 ರಿಂದ 450 ಕೋಟಿ ರೂಪಾಯಿಗಳ ಹೊರೆ ಬೀಳಲಿದೆ. ಈ ದುರಂತದಿಂದ ವಿಮಾನಕ್ಕೆ 225 ಕೋಟಿ ರೂಪಾಯಿಗಳ ನಷ್ಟ ಆಗಿದೆ ಎನ್ನಲಾಗಿದೆ.

ವಿಮಾನದ ಪ್ರಯಾಣಿಕರ ಸ್ಥಿತಿ ಗತಿ ಆಧರಿಸಿ ಜೀವ ವಿಮಾ ಮೊತ್ತ ನೀಡಲಾಗಿದ್ದು ಇದು ಸುಮಾರು 180 ಕೋಟಿ ರೂಪಾಯಿಗಳಾಗಬಹುದು ಎನ್ನಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ ರಿಲಯನ್ಸ್ ಜನರಲ್ ನ ವಕ್ತಾರರು ಏರ್ ಇಂಡಿಯಾಗೆ ರಿಲಯನ್ಸ್ ವಿಮಾ ರಕ್ಷೆ ಒದಗಿಸಿದ್ದು, ವೈಯಕ್ತಿಕ ವಿಮಾ ಕ್ಲೇಮ್ ಗಳ ಬಗ್ಗೆ ನಿಯಮದನ್ವಯ ಮಾತನಾಡಲು ನಿರಾಕರಿಸಿದರು.

ಖಾಸಗಿ ಕಂಪೆನಿಗಳಲ್ಲದೆ ಭಾರತದ ಪ್ರಮುಖ ಮರು ವಿಮಾ ಕಂಪೆನಿ ಹಾಗೂ ವಿಶ್ವದ 5 ನೇ ಅತಿ ದೊಡ್ಡ ವಾಯುಸಾರಿಗೆ ಉದ್ಯಮದ ವಿಮಾ ಕಂಪೆನಿ ಜನರಲ್ ಇನ್ಸೂರೆನ್ಸ್ ಕಾರ್ಪೊರೇಷನ್ ಕೂಡ ವಿಮಾನ ದುರಂತದಿಂದ ನಷ್ಟ ಅನುಭವಿಸಿದೆ. ಈ ಕಂಪೆನಿ ಏರ್ ಇಂಡಿಯಾದ 39,000 ಕೋಟಿ ರೂಪಾಯಿಗಳ ವಿಮಾ ರಕ್ಷೆಯಲ್ಲಿ ಶೇ.14 ಪಾಲು ಮರು ವಿಮೆ ಮಾಡಿದ್ದು, ಮರುವಿಮೆಯಲ್ಲಿ ಐಸಿಐಸಿಐ ಲೋಂಬಾರ್ಡ್ ನ ಪಾಲು ಶೇ.3 ಆಗಿದೆ. ಈ ವಿಮಾನ ದುರಂತದಲ್ಲಿ ಜನರಲ್ ಇನ್ಸೂರೆನ್ಸ್ ನ ಹೊಣೆಗಾರಿಕೆ 6 ಮಿಲಿಯನ್ ಡಾಲರ್ (ಸುಮಾರು 27 ಕೋಟಿ ರೂ) ಆಗಿದೆ ಎಂದು ಕಂಪೆನಿಯ ವಕ್ತಾರರು ಹೇಳಿದರು.

ವಿಡಿಯೋಗಳು
:
* ಬೆಂಕಿ ಉಂಡೆಯಂತಾದ ವಿಮಾನ
* ಪುಟ್ಟ ರನ್ ವೇ ಜಿಗಿದ ಏರ್ ಇಂಡಿಯಾ ವಿಮಾನ
* ದುರಂತಕ್ಕೆ ಪೈಲಟ್ ತಪ್ಪು ಕಾರಣ?
* ಮಂಗಳೂರು ವಿಮಾನ ದುರಂತದಲ್ಲಿ 160 ಸಾವು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X