ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2011-14 ರೊಳಗೆ ನೂತನ ಪಠ್ಯಕ್ರಮ : ಕಾಗೇರಿ

By Mrutyunjaya Kalmat
|
Google Oneindia Kannada News

Vishweshwar Hegde Kageri
ಬೆಂಗಳೂರು, ಮೇ. 23 : ರಾಷ್ಟ್ರೀಯ ಪಠ್ಯಕ್ರಮದಂತೆ 2011 ರಿಂದ 2014 ರ ಅವಧಿಯಲ್ಲಿ 1 ರಿಂದ 10 ನೇ ತರಗತಿವರಗೆ ಹೊಸ ಪಠ್ಯಕ್ರಮ ಜಾರಿಯಾಗಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.

ಶಿಕ್ಷಕರ ಸದನದಲ್ಲಿ ಶುಕ್ರವಾರ ಆಯೋಜಿಸಿದ್ದ ರಾಷ್ಟ್ರೀಯ ಪಠ್ಯಕ್ರಮ ನೆಲೆಗಟ್ಟು 2005ರ ಸಮಾಲೋಚನೆ ಸಭೆಯಲ್ಲಿ ಮಾತನಾಡಿದ ಅವರು, ಹಂತಹಂತವಾಗಿ ಇದು ಅನುಷ್ಟಾನಗೊಳ್ಳಲಿದೆ ಎಂದರು. ರಾಷ್ಟ್ರೀಯ ಪಠ್ಯಕ್ರಮ ಮಾರ್ಗಸೂಚಿಯಂತೆ 2011-12 ರಲ್ಲಿ 1,3,5, 8ನೇ ತರಗತಿ, 2012-13 ರಲ್ಲಿ 2,4,6,9 ಹಾಗೂ 2014 ರಲ್ಲಿ 7, 10 ನೇ ತರಗತಿ ಪಠ್ಯಕ್ರಮದಲ್ಲಿ ಬದಲಾವಣೆಯಾಗಲಿದೆ ಎಂದು ಕಾಗೇರಿ ವಿವರಿಸಿದರು.

ಶಿಕ್ಷಣ ಕ್ಷೇತ್ರ ನಿಂತ ನಿರಾಗಬಾರದು ಎಂಬ ಕಾರಣಕ್ಕೆ 2005ರಲ್ಲಿ ಕೇಂದ್ರ ಸರಕಾರವು ರಾಷ್ಟ್ರೀಯ ಪಠ್ಯಕ್ರಮ ಮಾರ್ಗಸೂಚಿಸಿದೆ. ಆದರ ಅನುಷ್ಟಾನಕ್ಕೆ ಈಗ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ತಜ್ಞರೊಂದಿಗೆ ಸಮಾಲೋಚಿಸಿ ಪಠ್ಯಕ್ರಮದಲ್ಲಿ ಸುಧಾರಣೆ ಮಾಡಲಾಗುತ್ತಿದೆ ಎಂದು ಕಾಗೇರಿ ಹೇಳಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X