ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

500-1000 ರು ನೋಟನ್ನು ನಿಷೇಧಿಸಿ : ರಾಮ್ ದೇವ್

By Mrutyunjaya Kalmat
|
Google Oneindia Kannada News

Baba Ramdev
ಬೆಂಗಳೂರು, ಮೇ. 23 : ದೊಡ್ಡ ದೊಡ್ಡ ನೋಟುಗಳನ್ನು ಸರಕಾರ ಹಿಂದಕ್ಕೆ ಪಡೆದರೆ ದೇಶದಲ್ಲಿ ವ್ಯಾಪಿಸಿರುವ ಭ್ರಷ್ಟಾಚಾರವನ್ನು ಹೋಗಲಾಡಿಸಬಹುದು ಎಂದು ಪತಂಜಲಿ ಯೋಗ ಪೀಠದ ಬಾಬಾ ರಾಮ್ ದೇವ್ ಅಭಿಪ್ರಾಯಪಟ್ಟಿದ್ದಾರೆ.

ಇಂದಿನಿಂದ (ಭಾನುವಾರ) ಈ ತಿಂಗಳ 26ರವರೆಗೆ ನಗರದ ಅರಮನೆ ಮೈದಾನದಲ್ಲಿ ನಡೆಯಲಿರುವ ಯೋಗ ಶಿಬಿರದ ಕುರಿತು ಮಾಹಿತಿ ನೀಡಲು ಕರೆದ ಪತ್ರಿಕೋಗೋಷ್ಠಿಯಲ್ಲಿ ಅವರ ಮಾತನಾಡುತ್ತಿದ್ದರು. ದೇಶದಲ್ಲಿ ಹೆಚ್ಚುತ್ತಿರುವ ಭ್ರಷ್ಟಾಚಾರಕ್ಕೆ ಕಪ್ಪು ಹಣದ ಚಲಾವಣೆ ಕಾರಣವಾಗಿದೆ. ಲಕ್ಷಾಂತರ ಕೋಟಿ ರುಪಾಯಿ ಹಣವನ್ನು ವಿದೇಶಿ ಬ್ಯಾಂಕುಗಳಲ್ಲಿ ಠೇವಣಿ ಇಡಲಾಗುತ್ತಿದೆ. ಬೃಹತ್ ಮೊತ್ತದ ನೋಟುಗಳನ್ನು ಹಿಂದಕ್ಕೆ ಪಡೆದರೆ 5-10 ರುಪಾಯಿಗಳ ಸಣ್ಣ ನೋಟಿನ ದೊಡ್ಡ ಮೂಟೆಗಳನ್ನು ಹೊತ್ತೊಯ್ಯುವುದು ಕಷ್ಟವಾಗಿ ಎಲ್ಲವೂ ಸರಿಯಾಗುತ್ತಿದೆ. ಕಳ್ಳರು ಕೂಡ ಸಣ್ಣ ನೋಟು ಹೊರಲಾರದೆ ಪರದಾಡಬೇಕಾಗುತ್ತದೆ ಎಂದರು.

ದೇಶದವನ್ನು ಭ್ರಷ್ಟಾಚಾರ ಮುಕ್ತ ಮಾಡುವುದು ನನ್ನ ಗುರಿ. ಇದೇ ಕಾರಣಕ್ಕೆ ಪತಂಜಲಿ ಯೋಗ ಸಮಿತಿ ಆಶ್ರಯದಲ್ಲಿ ಭಾರತ್ ಸ್ವಾಭಿಮಾನ್ ಹೆಸರಿನಲ್ಲಿ ಆಂದೋಲನ ಆರಂಭವಾಗುತ್ತಿದೆ. ಪ್ರತಿ ಜಿಲ್ಲೆಗೆ ಸಂಚರಿಸಿ, ಸದಸ್ಯರನ್ನು ಕಲೆ ಹಾಕಿ ಹೊಸ ಭಾರತ ನಿರ್ಮಾಣಕ್ಕೆ ಮುಂದಾಗಲಿದ್ದೇವೆ. ಇನ್ನೆರಡು ವರ್ಷಗಳಲ್ಲಿ ಭಾರತಕ್ಕೆ ಹೊಸ ದೃಷ್ಟಿಕೋನ ನೀಡುವ ಉದ್ದೇಶ ನಮ್ಮದು ಎಂದು ರಾಮ್ ದೇವ್ ಹೇಳಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X