ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಮಾನ ದುರಂತ : ಸಿಕ್ತು ಬ್ಲ್ಕಾಕ್ ಬಾಕ್ಸ್

By Mrutyunjaya Kalmat
|
Google Oneindia Kannada News

Air India plane crash
ಮಂಗಳೂರು, ಮೇ. 23 : ಇಲ್ಲಿನ ಬಜ್ಪೆ ವಿಮಾನ ನಿಲ್ದಾಣದ ಸಮೀಪ ಅಪಘಾತಕ್ಕೀಡಾದ ಏರ್ ಇಂಡಿಯಾದ ವಿಮಾನದ ಬ್ಲ್ಕ್ಯಾಕ್ ಬಾಕ್ಸ್(ಪ್ಲೈಟ್ ಡಾಟಾ ರಿಕಾರ್ಡರ್) ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ದುಬೈಯಿಂದ ಮಂಗಳೂರು ಬರುತ್ತಿದ್ದ ವಿಮಾನ ಇಳಿಯುವ ಸಮಯದಲ್ಲಿ ಅಪಘಾತಕ್ಕೆ ಈಡಾಗಿ 158 ಮಂದಿ ಸಾವನ್ನಪ್ಪಿದ್ದು, 8 ಜನ ಬದುಕುಳಿದಿರುವ ಘಟನೆ ಶನಿವಾರ ನಡೆದಿದೆ. ಅಪಘಾತಕ್ಕೆ ಈಡಾದ ವಿಮಾನ ತುಂಡು ತುಂಡು ಆಗಿದ್ದು, ಪ್ರಯಾಣಿಕರೆಲ್ಲಾ ಸುಟ್ಟು ಕರಕಲಾಗಿದ್ದಾರೆ. ಅವರ ದೇಹವನ್ನು ಗುರುತಿಸಲು ಸಾಧ್ಯವಾಗದಷ್ಟು ಮೃತದೇಹಗಳು ಸುಟ್ಟಿವೆ.

ಆದರೆ, ಅಪಘಾತಕ್ಕೆ ಸ್ಪಷ್ಟವಾಗಿ ಕಾರಣ ತಿಳಿದಿಲ್ಲ. ಪೈಲೆಟ್ ನ ನಿರ್ಲಕ್ಷ್ಯ ಎಂದು ಹೇಳುತ್ತಿದ್ದರೂ ಅದು ಅಧಿಕೃತವಾಗಿಲ್ಲ. ಹೀಗಾಗಿ ವಿಮಾನದಲ್ಲಿರುವ ಬ್ಲ್ಯಾಕ್ ಬಾಕ್ಸ್ ಹುಡುಕಾಟ ತೀವ್ರಗೊಂಡಿತ್ತು. ಇಂದು ಮಧ್ಯಾಹ್ನ ಬ್ಲ್ಯಾಕ್ ಬಾಕ್ಸ್ ದೊರೆಕಿದ್ದು, ಹೈದರಾಬಾದ್ ನ ಡಿಜಿಸಿಎ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಅಪಘಾತಕ್ಕೆ ಮುಂಚೆ ಎರ್ ಟ್ರಾಫಿಕ್ ಕಂಟ್ರೋಲ್ ಮತ್ತು ಪೈಲೆಟ್ ಮಧ್ಯೆ ನಡೆದ ಸಂಭಾಷಣೆ ರಿಕಾರ್ಡ್ ಆಗಿರುತ್ತದೆ. ಇದರ ತನಿಖೆ ನಡೆಸಿದರೆ, ಅಪಘಾತಕ್ಕೆ ಕಾರಣವೇನೆಂಬುದು ಸ್ಪಷ್ಟವಾಗಿ ತಿಳಿಯಲಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X