ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಮಾನ ದುರಂತ : ಮಂಗಳೂರಿಗೆ ತಜ್ಞರ ತಂಡ

By Mrutyunjaya Kalmat
|
Google Oneindia Kannada News

Air India plane crash
ಮಂಗಳೂರು, ಮೇ. 23 : ಶನಿವಾರ ಬೆಳಗ್ಗೆ ಇಲ್ಲಿನ ಬಜ್ಪೆ ವಿಮಾನ ನಿಲ್ದಾಣದ ಸಮೀಪದ ನಡೆದ ಘನಘೋರ ವಿಮಾನ(ಬಿ737-800) ದುರಂತದಲ್ಲಿ ಮೃತಪಟ್ಟವರ ದೇಹಗಳನ್ನು ಗುರುತಿಸಲು ಡಿಎನ್ಎ ಪರೀಕ್ಷೆಗಾಗಿ ಹೈದರಾಬಾದ್ ನಿಂದ ವಿಧಿ ವಿಜ್ಞಾನ ಪ್ರಯೋಗಾಲಯದ ವಿಶೇಷ ತಜ್ಞರ ತಂಡ ಮಂಗಳೂರಿಗೆ ಆಗಮಿಸಿದೆ. ವಿಮಾನ ದುರಂತದ ತನಖೆಗೆ ನಡೆಸಲು ಅಮೆರಿಕದ ತಜ್ಞರ ತಂಡವನ್ನು ಭಾರತ ಸರಕಾರ ಕರೆಸಿಕೊಂಡಿದೆ. ಜೊತೆಗೆ ವಿಮಾನದಲ್ಲಿರುವ ಬ್ಲ್ಯಾಕ್ ಬ್ಲಾಕ್ಸ್ ಶೋಧ ಕಾರ್ಯ ಮುಂದುವರೆದಿದೆ.

ಶನಿವಾರ ನಡೆದ ವಿಮಾನ ದುರಂತದಲ್ಲಿ 158 ಮಂದಿ ಸಾವನ್ನಪ್ಪಿದ್ದು, 8 ಜನರು ಪವಾಡದ ರೀತಿಯಲ್ಲಿ ಬದುಕುಳಿದಿದ್ದಾರೆ. ಮೃತಪಟ್ಟವರಲ್ಲಿ 115 ಮೃತದೇಹಗಳನ್ನು ಈಗಾಗಲೇ ಪತ್ತೆ ಹಚ್ಚಲಾಗಿದೆ. ಉಳಿದ 48 ದೇಹಗಳ ಗುರುತಿಗಾಗಿ ಡಿಎನ್ಎ ಪರೀಕ್ಷೆಯನ್ನು ವಿಧಿವಿಜ್ಞಾನ ತಜ್ಞರ ತಂಡ ಪ್ರಯೋಗ ಆರಂಭಿಸಿದೆ. ಮೃತದೇಹಗಳು ಸುಟ್ಟು ಕರಕಲಾಗಿದ್ದು, ಮಾಂಸದ ಮುದ್ದೆಗಳಾಗಿವೆ. ಗುರುತು ಹಿಡಿಯದಷ್ಟು ಸುಟ್ಟು ಹೋಗಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಗೋಪಾಲ್ ಹೊಸೂರು ತಿಳಿಸಿದ್ದಾರೆ. ದುರಂತ ಸ್ಥಳದಲ್ಲಿ ಬ್ಲ್ಯಾಕ್ ಬಾಕ್ಸ್ ಗಾಗಿ ಹುಡುಕಾಟ ಆರಂಭವಾಗಿದೆ ಎಂದು ಅವರು ವಿವರಿಸಿದರು,

ಮಂಗಳೂರಿನಲ್ಲಿ ನಡೆದ ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ನಿರ್ಧರಿಸಿರುವ ಕೇಂದ್ರ ಸರಕಾರ, ಅಮೆರಿಕದ ತಜ್ಞರ ತಂಡವನ್ನು (US National Transportation Safety Board) ಕರೆಸಿಕೊಂಡಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X