ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೆನ್ ಲಾಕ್ ಆಸ್ಪತ್ರೆಯಲ್ಲಿ ಮುಗಿಲು ಮುಟ್ಟಿದ ಆಕ್ರಂದನ

By Rajendra
|
Google Oneindia Kannada News

Air tragedy in Mangalore
ಮಂಗಳೂರು, ಮೇ.22: ಏರ್ ಇಂಡಿಯಾ ವಿಮಾನ ದುರಂತದಲ್ಲಿ ಮೃತಪಟ್ಟವರ ದೇಹಗಳನ್ನು ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಯಲ್ಲಿ ಇಡಲಾಗಿದೆ. ಮೃತರ ಸಂಬಂಧಿಕರು ಆಸ್ಪತ್ರೆಗೆ ಆಗಮಿಸಿದ್ದು ವೆನ್ ಲಾಕ್ ಆಸ್ಪತ್ರೆಯಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.

ಬಹುತೇಕ ದೇಹಗಳು ಸುಟ್ಟು ಕರಕಲಾಗಿರುವ ಕಾರಣ ಗುರುತಿಸುವುದು ಕಷ್ಟಕರವಾಗಿ ಪರಿಣಮಿಸಿದೆ. ಹನ್ನೆರಡು ಶವಗಳನ್ನ್ನು ಶವಾಗಾರದಲ್ಲಿ ಇಡಲಾಗಿದ್ದು ಉಳಿದ ಶವಗಳನ್ನು ಆಸ್ಪತ್ರೆಯ ಆವರಣದ ಗುಡಾರಗಳಲ್ಲಿ ಇಡಲಾಗಿದೆ. ಘಟನಾ ಸ್ಥಳದಿಂದ ಆಂಬುಲೆನ್ಸ್ ವಾಹನ ಆಸ್ಪತ್ರೆಗೆ ಆಗಮಿಸುತ್ತಿದ್ದಂತೆ ಸಂಬಂಧಿಕರು ಸುತ್ತುವರಿದು ತಮ್ಮ ಪ್ರೀತಿಪಾತ್ರರಿಗಾಗಿ ಹುಡುಕುವ ಮನಕಲಕುವ ದೃಶ್ಯ ಸಾಮಾನ್ಯವಾಗಿತ್ತು.

ಮಂಗಳೂರಿನ ಕೆಎಂಸಿ ಆಸ್ಪತ್ರೆ, ಎಸ್ ಸಿಎಸ್ ಆಸ್ಪತ್ರೆ, ಕೊಲಾಕೊ ಆಸ್ಪತ್ರೆ ಹಾಗೂ ಎಜೆ ಆಸ್ಪತ್ರೆಗಳಲ್ಲಿ ಮೃತರ ಶವಗಳನ್ನು ಇಡಲಾಗಿದೆ. ವೆನ್ ಲಾಕ್ ಆಸ್ಪತ್ರೆಗೆ ಕೇಂದ್ರ ನಾಗರೀಕ ವಿಮಾನ ಯಾನ ಸಚಿವ ಪ್ರಪುಲ್ ಪಟೇಲ್ ಭೇಟಿ ನೀಡಿ ಮೃತ ಸಂಬಂಧಿಕರಿಗೆ ಸಾಂತ್ವನ ಹೇಳಿದರು. ಕೇರಳ ಗೃಹ ಸಚಿವ ಕೊಡಿಯೇರಿ ಬಾಲಕೃಷ್ಣನ್ ಅವರು ಆಸ್ಪತ್ರೆಗೆ ಭೇಟಿ ನೀಡಿದ್ದರು. ಮೃತರ ಕುಟುಂಬಕ್ಕೆ ಕೇರಳ ಸರಕಾರ ಸಹ ಶೀಘ್ರದಲ್ಲೆ ಪರಿಹಾರ ಧನ ಪ್ರಕಟಿಸಲಿದೆ ಎಂದು ಅವರು ತಿಳಿಸಿದರು.

ವೆನ್ ಲಾಕ್ ಆಸ್ಪತ್ರೆಯಲ್ಲಿ ಗುರುತು ಹಿಡಿಯಲಾದ ಶವಗಳ ವಿವರ:
ಸಿ ಎಲ್ ಹಕೀಮ್ (35), ಕಾಸರಗೋಡು
ಅರುಣ್ ಕುಮಾರ್ ಶೆಟ್ಟಿ (32), ಕುಂದಾಪುರ
ಅಬ್ದುಲ್ ಜಿಬ್ರಾನ್ (25), ಮಂಗಳೂರು
ಇಗ್ನಾಟಿಯಸ್ ಡಿಸೋಜ (45), ಶಾಂತಿನಗರ,ಮಂಗಳೂರು
ಅಕ್ಷಯ್ (17), ಕದ್ರಿ ಟೋಲ್ ಗೇಟ್, ಮಂಗಳೂರು
ರಶದ್ (8 ತಿಂಗಳು), ಮಂಗಳೂರು
ಮಹೇಶ್ ಶೆಟ್ಟಿ, ಕಾರ್ಕಳ
ಸಪ್ದರ್ ಅಲಿ(28), ಉಡುಪಿ
ರಾಮ ಸತೀಶ್ ಶೆಟ್ಟಿ, ಮಂಗಳೂರು
ಕೆ ಎಂ ಅಬ್ದುಲ್ಲ (65), ಕಾಸರಗೋಡು
ನಜಿಯಾ ಅಪ್ರೀನ್(23), ಉತ್ತರ ಕನ್ನಡ
ಮೊಹಮ್ಮದ್ ಎ (4)
ಪ್ರವೀಣ್ ಕುಮಾರ್ ಎಂ ಶಿರ್ವ, ಉಡುಪಿ
ನವೀನ್ ಫರ್ನಾಂಡೀಸ್ (32), ಮಂಗಳೂರು
ಮೊಹಮದ್ ಅಶ್ರಫ್ (24), ಕಾಸರಗೋಡು
ಮಹಿಮ್ ಮೊಹಮ್ಮದ್ ಪಲ್ಲಿ (52), ಕಾಸರಗೋಡು
ಅಬ್ದುಲ್ ನಜೀರ್ (20), ಕಾಸರಗೋಡು
ಅಬ್ದುಲ್ ಹರೀಶ್ (29), ಕಾಸರಗೋಡು
ಅಸ್ತನ್ ಸಲ್ಡಾನಾ(5)
ಡೆನ್ನಿಸ್ ಸಲ್ಡಾನ(37), ಕಾರ್ಕಳ
ಮಹೇಶ್ ಶೆಟ್ಟಿ, ದಕ್ಷಿಣ ಕನ್ನಡ
ಶಶಿಕಾಂತ್ ಪೂಂಜಾ (42), ಮಂಗಳೂರು
ಮಣಿರೇಖಾ ಪೂಂಜಾ(40)
ಹರ್ಷಿಣಿ ಪೂಂಜಾ
ಮೊಹಮ್ಮದ್ ಉಸ್ಮಾನ್ (40), ದಕ್ಷಿಣ ಕನ್ನಡ
ಮಂತೂರ್ ಹುಸ್ಸೇನ್, ಸುಳ್ಯ
ರಾಜನ್ ಪಿ (35), ಕಾಸರಗೋಡು
ಅಬ್ದುಲ್ ಪಣತ್ತೂರ್(54), ಕೇರಳ
ಅಬ್ದುಲ್ ಸಮದ್ (52), ಕಣ್ಣೂರು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X