ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇ.21 ಭಯೋತ್ಪಾದನಾ ವಿರೋಧಿ ದಿನ ಆಚರಣೆ

By Mahesh
|
Google Oneindia Kannada News

Rajiv Gandhi
ಬೆಂಗಳೂರು, ಮೇ.21: ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಅವರ ದೂರದೃಷ್ಟಿ, ದೂರ ಸಂಪರ್ಕ ಕ್ರಾಂತಿ ಯುವ ಪೀಳಿಗೆಗೆ ಮಾದರಿ, ದೀನ ದಲಿತರ ಪರವಾಗಿ ಅಪಾರ ಕಾಳಜಿ ಹೊಂದಿದ್ದರು ಎಂದು ರಾಜೀವ್ ಗಾಂಧಿ ಅವರ 19ನೇ ಪುಣ್ಯತಿಥಿ ಆಚರಣೆ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಆರ್ ವಿ ದೇಶಪಾಂಡೆ ಹೇಳಿದರು.

ಇಂದು ದೇಶದ ಹಳ್ಳಿ ಹಳ್ಳಿಗಳಲ್ಲೂ ಎಸ್ ಟಿಡಿ ಬೂತ್ ಕಾಣಿಸಿಕೊಂಡು, ಜನರು ಸುಲಭವಾಗಿ ದೂರದ ಊರಿನ ಸಂಬಂಧಿಕರಿಗೆ ಸ್ನೇಹಿತರಿಗೆ ಕರೆ ಮಾಡುತ್ತಿದ್ದಾರೆ ಎಂದರೆ ಅದಕ್ಕೆ ರಾಜೀವ್ ಅವರ ದೂರ ಸಂಪರ್ಕ ಕ್ರಾಂತಿ ಕಾರಣ. ಮತದಾನದ ಚಲಾವಣೆಗೆ ಬೇಕಿದ್ದ ವಯೋಮಿತಿಯನ್ನು 21ರಿಂದ 18 ವರ್ಷಕ್ಕೆ ಇಳಿಸಿದ್ದು ಕೂಡ ರಾಜೀವ್ ಅವರ ಸಾಧನೆ ಎಂದು ದೇಶಪಾಂಡೆ ಕೊಂಡಾಂಡಿದರು.

ಸರ್ಕಾರಿ ನೌಕರರಿಗೆ ಪ್ರತಿಜ್ಞಾವಿಧಿ: ಮೇ .21 ನ್ನು 'ಭಯೋತ್ಪಾದನಾ ವಿರೋಧಿ ದಿನ' ವೆಂದು ಆಚರಿಸಲಾಗುತ್ತಿದೆ. ಅದರಂತೆ ಅಂದು ಬೆಳಿಗ್ಗೆ ವಿಧಾನ ಸೌಧದ ಸಮ್ಮೇಳನ ಸಭಾಂಗಣದಲ್ಲಿ (ಕೊಠಡಿ ಸಂಖ್ಯೆ 334) ಭಯೋತ್ಪಾದನಾ ವಿರೋಧಿ ದಿನದ ಪ್ರತಿಜ್ಞಾವಚನ ಭೋಧಿಸಲಾಯಿತು. ನವದೆಹಲಿಯಲ್ಲಿ ಕೇಂದ್ರ ಗೃಹಸಚಿವ ಪಿ ಚಿದಂಬರಂ ಅವರು ಸರ್ಕಾರಿ ನೌಕರರು, ಸರ್ಕಾರಿ ವಲಯದ ಇತರೆ ನೌಕರರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

1991ರ ಮೇ.21ರಂದು ತಮಿಳುನಾಡಿನ ಶ್ರೀಪೆರಂಬದೂರ್ ನಲ್ಲಿ ರಾಜೀವ್ ಗಾಂಧಿ ಅವರನ್ನು ಅತ್ಮಹತ್ಯಾ ಮಾನವ ಬಾಂಬ್ ಮೂಲಕ ಎಲ್ ಟಿಟಿಇ ಸಂಘಟನೆ ಹತ್ಯೆಗೈದಿತ್ತು. ರಾಜೀವ್ ಹತ್ಯೆಯಾದ ದಿನವನ್ನು ಭಯೋತ್ಪದನಾ ವಿರೋಧಿ ದಿನ ಎಂದು ಆಚರಿಸಿ, ಉಗ್ರರ ವಿರುದ್ಧ ಪ್ರತಿಜ್ಞೆ ಕೈಗೊಳ್ಳಲಾಗುತ್ತದೆ. ಭಯೋತ್ಪಾದನೆ, ಹಿಂಸೆ ಮುಕ್ತ ರಾಷ್ಟ್ರೀಯ ಭಾವೈಕ್ಯತೆಗಾಗಿ ಈ ದಿನವನ್ನು ಆಚರಿಸಲಾಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X