ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನಾಥ ಹೆಣ್ಣುಮಕ್ಕಳಿಗೆ ಈ ವಿಷಯ ಮುಟ್ಟಿಸಿರಿ

By Shami
|
Google Oneindia Kannada News

Admission open for poor girls in Akkamahadevi Seva Samaja
ಬೆಂಗಳೂರು, ಮೇ. 21 : ಶ್ರೀ ಅಕ್ಕಮಹಾದೇವಿ ಸೇವಾ ಸಮಾಜವು ಬೆಂಗಳೂರಿನ ಅಕ್ಕಿಪೇಟೆ, ಕುಮಾರಪಾರ್ಕ್, ರಾಜಾಜಿನಗರ ಮತ್ತು ರಾಜರಾಜೇಶ್ವರಿನಗರದಲ್ಲಿ ನಡೆಸುತ್ತಿರುವ ಹೆಣ್ಣು ಮಕ್ಕಳ ಅನಾಥಾಲಯಗಳಿಗೆ ಸೇರಲು 5ನೇ ತರಗತಿಯಿಂದ 10ನೇ ತರಗತಿಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಅನಾಥ ಮತ್ತು ಬಡ ವಿದ್ಯಾರ್ಥಿನಿಯರಿಂದ ಅರ್ಜಿ ಆಹ್ವಾನಿಸಿದೆ. ಅನಾಥಾಲಯಗಳಲ್ಲಿ ಉಚಿತ ಊಟ, ವಸತಿ, ಸಮವಸ್ತ್ರ ಮತ್ತು ಪಠ್ಯಪುಸ್ತಕಗಳನ್ನು ನೀಡಲಾಗುವುದು.

ಅರ್ಜಿ ಫಾರಂಗಳನ್ನು ಗೌ: ಕಾರ್ಯದರ್ಶಿನಿ, ಶ್ರೀ ಅಕ್ಕಮಹಾದೇವಿ ಸೇವಾ ಸಮಾಜ, ನಂ.20 ರಿಸರ್ ವಾಯರ್ ರಸ್ತೆ, 2ನೇ ಬ್ಲಾಕ್, ಕುಮಾರ ಪಾರ್ಕ್ ಪಶ್ವಿಮ ಬಡಾವಣೆ, ಬೆಂಗಳೂರು 560 020 ಇವರಿಂದ ಮುಖತಃ ಅಥವಾ ಅಂಚೆ ಮೂಲಕ ಪಡೆಯಬಹುದು ದೂರವಾಣಿ: 080-2356 8643.

ಭರ್ತಿಮಾಡಿದ ಅರ್ಜಿಗಳನ್ನು ದಿನಾಂಕ: 25.05.2010ರ ಒಳಗೆ ಕಳುಹಿಸುವುದು. ಅರ್ಜಿ ಕಳುಹಿಸಿದ ವಿದ್ಯಾರ್ಥಿನಿಯರನ್ನು ದಿನಾಂಕ: 26.05.2010 ರಂದು ಮಧ್ಯಾಹ್ನ 2 ಗಂಟೆಗೆ ಕುಮಾರ ಪಾರ್ಕ್‌ನಲ್ಲಿರುವ ಸಮಾಜದಲ್ಲಿ ಸಂದರ್ಶಿಸಲಾಗುವುದು ಎಂದು ಅಕ್ಕಮಹಾದೇವಿ ಸೇವಾ ಸಮಾಜ (ರಿ)ನಂ. 18, ಅಕ್ಕಿಪೇಟೆ ಮುಖ್ಯ ರಸ್ತೆ ಇವರ ಪತ್ರಿಕಾ ಪ್ರಕಟಣೆ ತಿಳಿಸಿದೆ.

ದಟ್ಸ್ ಕನ್ನಡ ಓದುಗ ಬಳಗಕ್ಕೆ ಅನಾಥ ಹೆಣ್ಣುಮಕ್ಕಳ ಪರಿಚಯ ಅಥವಾ ಸುಳಿವು ಇದ್ದರೆ ಈ ಶಾಲೆಗೆ ಅವರನ್ನು ಶಿಫಾರಸ್ಸು ಮಾಡುವುದು-ಸಂಪಾದಕ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X