ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೂಡಲಸಂಗಮದಲ್ಲಿ ರೈತನೇ ಮಹಾರಾಜ

By Mahesh
|
Google Oneindia Kannada News

Organic Farmers Meet at Kudalasangama
ಬೆಂಗಳೂರು, ಮೇ.20: ಸಾವಯವ ಕೃಷಿ ಮಿಷನ್ ವತಿಯಿಂದ ಮೇ.23 ರಂದು ಕೂಡಲಸಂಗಮದಲ್ಲಿ ಸಾವಯವ ಕೃಷಿಕರ ಬೃಹತ್ ಸಮಾವೇಶ ಮತ್ತು ಸಾವಯವ ಕೃಷಿ ವಸ್ತು ಪ್ರದರ್ಶನವನ್ನು ಆಯೋಜಿಸಲಾಗಿದೆ. "ಕೃಷಿ ಪರಮೋಚ್ಚ ಕಾಯಕ ಮತ್ತು ಕೃಷಿಕನೊಬ್ಬ ಕಾಯಕ ಯೋಗಿ" ಎಂಬುದನ್ನು ಬಿಂಬಿಸುವುದು ಇದರ ಉದ್ದೇಶವಾಗಿದೆ ಎಂದು ಸಾವಯವ ಕೃಷಿ ಮಿಷನ್‌ನ ಅಧ್ಯಕ್ಷ ಆನಂದ್ ಅವರು ತಿಳಿಸಿದರು.

ರಾಜ್ಯದ ಶ್ರೀಮಂತ ಕೃಷಿ ವೈವಿಧ್ಯತೆ, ಸಾವಯವ ಪರಿಕರಗಳು, ಸಂಪ್ರದಾಯಕ ಸಲಕರಣೆಗಳನ್ನು, ದೇಸಿ ಪಶು ತಳಿಗಳನ್ನು, ದೇಸಿ ಬೀಜಗಳನ್ನು ಪ್ರದರ್ಶಿಸುವ ಮತ್ತು ರೈತರ ಯಶೋಗಾಥೆಗಳನ್ನು ತಿಳಿಸುವ ಉದ್ದೇಶ ಹೊಂದಲಾಗಿದೆ. ರಾಜ್ಯದ ಎಲ್ಲ ತಾಲ್ಲೂಕುಗಳಿಂದ ಸುಮಾರು 2ಲಕ್ಷಕ್ಕೂ ಹೆಚ್ಚು ಕೃಷಿಕರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ, ಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪ, ಕೇಂದ್ರ ಸಚಿವ ಜೈರಾಂ ರಮೇಶ್, ರಾಜ್ಯದ ಕೃಷಿ ಸಚಿವ ಎಸ್.ಎ. ರವೀಂದ್ರನಾಥ್ ಅವರು ಪಾಲ್ಗೊಳ್ಳಲಿದ್ದಾರೆ.

500 ಸಾವಯವ ಕೃಷಿ ಕುಟುಂಬಗಳನ್ನು ಈಗಾಗಲೇ ಆಯ್ಕೆ ಮಾಡಲಾಗಿದ್ದು ಈ ರೈತರನ್ನು ತೇರು ಮೆರವಣಿಗೆಯಲ್ಲಿ ಬಸವಣ್ಣನವರ ಐಕ್ಯ ಸ್ಥಳ ಕೂಡಲಸಂಗಮದಿಂದ ಸಂಜೆ 4 ಗಂಟೆಯಿಂದ ಕರೆತರಲಿದ್ದು ಸಂಜೆ 6 ಗಂಟೆಗೆ ಸಭಾ ಕಾರ್ಯಕ್ರಮವಿದೆ ಎಂದು ತಿಳಿಸಿದರು.

ಆಯ್ಕೆ ಮಾಡಲಾಗಿರುವ ಸಾವಯವ ಕೃಷಿಕರು 5 ಎಕರೆ ಒಳಗೆ ಜಮೀನು ಹೊಂದಿ ಸ್ವತ: ಕೃಷಿಕರಾಗಿದ್ದು, ಮಳೆಯಾಶ್ರಿತ ಬೇಸಾಯ ಅವಲಂಬಿಸಿದವರಾಗಿರಬೇಕು. ಜೊತೆಗೆ ಅವರ ಮಕ್ಕಳು ಸಹಾ ಕೃಷಿಯನ್ನು ಅವಲಂಬಿಸಿರಬೇಕು. ಇದರಲ್ಲಿ 83 ಪರಿಶಿಷ್ಟ ಜಾತಿ 32 ಪರಿಶಿಷ್ಟ ಪಂಗಡ ಸೇರಿದ ರೈತರನ್ನು ಆಯ್ಕೆ ಮಾಡಲಾಗಿದೆ ಎಂದರು.

ರಾಜ್ಯದಲ್ಲಿ ಈಗ ಪ್ರತಿ ತಾಲ್ಲೂಕಿನಲ್ಲಿ 3 ಹೆಕ್ಟೇರ್ ಸಾವಯವ ಕೃಷಿ ಜಮೀನಿದ್ದು ಒಟ್ಟಾರೆ 70,000 ಹೆಕ್ಟೇರ್‌ನಲ್ಲಿ ಸಾವಯವ ಕೃಷಿಯನ್ನು ಜರುಗಿಸಲಾಗುತ್ತಿದೆ. ರಾಜ್ಯಾದ್ಯಂತ 40 ಔಟ್‌ಲೆಟ್‌ಗಳನ್ನು ತೆರೆದಿದ್ದು ಅಲ್ಲಿ ರೈತರು ನೇರವಾಗಿ ತಮ್ಮ ಸಾವಯವ ಕೃಷಿ ಉತ್ಪನ್ನಗಳ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ಈ ಸಂದರ್ಭದಲ್ಲಿ ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X