ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಳೆಮನೆ ರಂಗಾಯಣದ ಹೊಸ ಸೂತ್ರಧಾರ

By Mahesh
|
Google Oneindia Kannada News

Dr. lingadevaru Halemane
ಮೈಸೂರು, ಮೇ.19: ರಂಗಾಯಣ ಎಂಬ ಸ್ವಾಯತ್ತ ಸಾಂಸ್ಕೃತಿಕ ಸಂಸ್ಥೆಗೆ ಅಂತೂ ನಿರ್ದೇಶಕರ ನೇಮಕ ಆಗಿದೆ. ನಾಟಕಕಾರ, ರಂಗ ನಿರ್ದೇಶಕ ಲಿಂಗದೇವರು ಹಳೆಮನೆ ಅವರನ್ನು ಮುಂದಿನ ಮೂರು ವರ್ಷದ ಅವಧಿಗೆ ನಿರ್ದೇಶಕರನ್ನಾಗಿ ನೇಮಿಸಿ ಮಂಗಳವಾರ ಸಂಜೆ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ರಂಗಾಯಣದ ನಿರ್ವಹಣೆಯ ಹೊಣೆ ರಂಗ ಸಮಾಜ ಎಂಬ ನೋಂದಾಯಿತ ಸಂಘದ ಮೇಲಿರುತ್ತದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ರಂಗ ಸಮಾಜದ ಅಧ್ಯಕ್ಷರಾಗಿರುತ್ತಾರೆ. ಸದ್ಯ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇದರ ಅಧ್ಯಕ್ಷ. ನಿರ್ದೇಶಕರ ಅನುಪಸ್ಥಿತಿಯಲ್ಲಿ ಸರ್ಕಾರದ ಪರವಾಗಿ ಕಾತ ಚಿಕ್ಕಣ್ಣ ಅವರ ರಂಗಾಯಣದ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು.

ಹಲವು ತಿಂಗಳಿಂದ ರಂಗಾಯಣದ ಅಂಗಳದಲ್ಲಿ ತೇಲುತ್ತಿದ್ದ ಅಂತೆ ಕಂತೆಗಳಿಗೆ, 2 ವರ್ಷದ 'ಅಧಿ ಕಾರಸ್ಥರ ಪರ್ವ'ಕ್ಕೆ ತೆರೆ ಬಿದ್ದಿದೆ. ತುರ್ತು ಸಭೆಯ ಆಹ್ವಾನದ ಮೇರೆಗೆ ಮಂಗಳವಾರ ಬೆಳಗ್ಗೆ ಸಭೆ ಸೇರಿದ 'ರಂಗ ಸಮಾಜ'ದ ಸದಸ್ಯರು ಹಳಮನೆ ಅವರ ಹೆಸರನ್ನು ನಿರ್ದೇಶಕ ಸ್ಥಾನಕ್ಕೆ ಶಿಫಾರಸು ಮಾಡಿದರು. ಪ್ರಕ್ರಿಯೆ ಪೂರ್ಣಗೊಳಿಸಿದ ಕನ್ನಡ ಮತ್ತು ಸಂಸ್ಕೃತಿ ಸಚಿವಾಲಯ ಸಂಜೆ ಅಧಿಕೃತ ಆದೇಶ ಪ್ರಕಟಿಸಿತು. ಗುರುವಾರ (ಮೇ .20) ಬೆಳಗ್ಗೆ 11ಕ್ಕೆ ಹಳಮನೆ ನೂತನ ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.

ವ್ಯಕ್ತಿ ಪರಿಚಯ: ಬಹುರೂಪಿ ಪ್ರತಿಭೆ ಲಿಂಗದೇವರು

ನೈಪಥ್ಯಕ್ಕೆ ಜಯಶ್ರೀ: ಕಳೆದ ಜೂನ್‌ನಲ್ಲಿ ನಿರ್ದೇಶಕರಾಗಿದ್ದ ರಂಗಕರ್ಮಿ ಬಿ.ಜಯಶ್ರೀ ರಂಗಾಯಣದ ಪರಿಸರಕ್ಕೆ ಒಗ್ಗಿಕೊಳ್ಳುವುದರೊಳಗೆ ವಿವಾದಗಳು ಆವರಿಸಿ,ಆರೋಪ-ಪ್ರತ್ಯಾರೋಪದ 'ನಾಟಕ 'ನಡೆದು, ರಾಜೀನಾಮೆ ನೀಡಿ ತೆರಳಿದ್ದರು.

ನವೆಂಬರ್ 24ರಂದು ಹಳೆಮನೆ ನೇಮಕದ ಮಾತು ಕೇಳಿ ಬಂದಿತ್ತು. ರಂಗಾಯಣದ ನಿರ್ವಹಣೆ ಹೊಣೆ ಹೊತ್ತಿರುವ 'ರಂಗ ಸಮಾಜ'ದ ಸಭೆಯ ಅನುಮೋದನೆ ಪಡೆಯಲಿಲ್ಲ ಎನ್ನುವ ತಾಂತ್ರಿಕ ಕಾರಣಕ್ಕೆ ಆದೇಶದ ಹಂತದಲ್ಲಿ ತಡೆ ಬಿದ್ದಿತ್ತು. ಈಗ, ಕನ್ನಡ ಮತ್ತು ಸಂಸ್ಕೃತಿ ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸ್ಪಷ್ಟ ಸೂಚನೆ ಹಿನ್ನೆಲೆಯಲ್ಲಿ ನೇಮಕ ಪ್ರಕ್ರಿಯೆಗೆ 'ತುರ್ತು' ಚಾಲನೆ ದೊರಯಿತು ಎಂದು ವಿಶ್ವಸನೀಯ ಮೂಲಗಳು
ತಿಳಿಸಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X