ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫುಟ್ಬಾಲ್ ವಿಶ್ವಕಪ್ ಮೇಲೆ ಅಲ್ ಖೈದಾ ನೆರಳು

By Mahesh
|
Google Oneindia Kannada News

FIFA World Cup
ಬಾಗ್ದಾದ್, ಮೇ. 18: ಜಾಗತಿಕ ಫುಟ್ಬಾಲ್ ಸಮರಕ್ಕೆ ಸರ್ವ ಸಿದ್ಧತೆಯಾಗುತ್ತಿರುವ ಬೆನ್ನಲ್ಲೇ,ಭಯೋತ್ಪಾದನೆ ಹಿನ್ನೆಲೆಯಲ್ಲಿ ಇರಾಕ್ ಮೂಲದ ಅಧಿಕಾರಿಯೊಬ್ಬನನ್ನು ಬಂಧಿಸಲಾಗಿದೆ. ಬಂಧಿತ ವ್ಯಕ್ತಿ ಅಲ್ ಖೈದಾ ಸದಸ್ಯನಾಗಿದ್ದು, ದಕ್ಷಿಣ ಆಫ್ರಿಕಾದಲ್ಲಿ ಜೂನ್11 ರಿಂದ ಆರಂಭವಾಗಲಿರುವ ಫೀಫಾ ಫುಟ್ಬಾಲ್ ವಿಶ್ವಕಪ್ 2010 ರಲ್ಲಿ ಉಗ್ರರ ದಾಳಿ ನಡೆಸಲು ಸಂಚು ರೂಪಿಸಿದ್ದನು ಎನ್ನಲಾಗಿದೆ.

ನಜಫ್ ಹಾಗೂ ಕರ್ಬಾಲಾದಲ್ಲಿನ ಪ್ರಾರ್ಥನಾ ಸ್ಥಳಗಳ ಮೇಲೆ ಬಾಂಬ್ ದಾಳಿ ನಡೆಸುವ ಸಂಚು ರೂಪಿಸಲಾಗಿತ್ತು. ದಕ್ಷಿಣ ಆಫ್ರಿಕಾದಲ್ಲಿ ಉಗ್ರಗಾಮಿ ಚಟುವಟಿಕೆ ಉದ್ದೀಪನಗೊಳಿಸಲು ಈತನನ್ನು ಸ್ವತಃ ಒಸಾಮಾ ಬಿನ್ ಲಾಡೆನ್ ನ ಬಲಗೈ ಬಂಟ ಅಯ್ಮಾನ್ ಅಲ್ ಜವಹಿರಿ ಗೊತ್ತು ಮಾಡಿದ್ದನ್ನು ಎಂದು ಬಾಗ್ದಾದ್ ನ ಸುರಕ್ಷತಾ ಇಲಾಖೆ ವಕ್ತಾರ ಖಾಸಿಂ ಅಲ್ ಮೌಸವಿ ಹೇಳಿದ್ದಾರೆ.

ನೈಜಿರಿಯಾ ಮೂಲದ ಇನ್ನೊಬ್ಬ ಶಂಕಿತನನ್ನು ಬಂಧಿಸಲಾಗಿದೆಯಾದರೂ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ. ಈ ಬಗ್ಗೆ ತನಿಖೆ ಮುಂದುವರೆಸಲಾಗಿದೆ. ಫುಟ್ಬಾಲ್ ವಿಶ್ವಕಪ್ ಭದ್ರತೆಗಾಗಿ ಸುಮಾರು 41ಸಾವಿರಪೊಲೀಸರು ಹಾಗೂ ಮಿಲಿಟರಿ ಸೈನಿಕರನ್ನು ನಿಯೋಜಿಸಲಾಗಿದೆ. ಸುರಕ್ಷತೆ ವಿಷಯದಲ್ಲಿ ಯಾವುದೇ ರಾಜಿಯಿಲ್ಲ ಎಂದು ಬೃಹತ್ ಪರೇಡ್ ನಂತರ ದಕ್ಷಿಣ ಆಫ್ರಿಕಾದ ಪೊಲೀಸ್ ಇಲಾಖೆ ಸಚಿವ ನಾಥಿ ಥೆತ್ವಾ ಹೇಳಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X