ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮಾತುಕತೆ ನಡೆಸೋಣ ಬನ್ನಿ ನಕ್ಸಲರೆ! : ಚಿದಂಬರಂ
ನವದೆಹಲಿ, ಮೇ. 18 : ಸೋಮವಾರವಷ್ಟೆ ದಂತೇವಾಡದಲ್ಲಿ ಭೀಕರ ಹತ್ಯಾಕಾಂಡ ನಡೆಸುವ ಮೂಲಕ ಅಟ್ಟಹಾಸವನ್ನು ಮೆರೆದಿರುವ ನಕ್ಸಲರನ್ನು ಕೇಂದ್ರ ಸರಕಾರ ಮತ್ತೊಮ್ಮೆ ಮಾತುಕತೆ ಕರೆದಿದೆ. ನಾಲ್ಕು ರಾಜ್ಯಗಳಲ್ಲಿ ನಕ್ಸಲರು ನೀಡಿರುವ ಬಂದ್ ಕರೆಯನ್ನು ಸ್ಥಗಿತಗೊಳಿಸಿ, ಹಿಂಸಾಚಾರವನ್ನು ಕೈಬಿಟ್ಟು ಮಾತುಕತೆ ಬನ್ನಿ ಎಂದು ಕೇಂದ್ರದ ಗೃಹ ಸಚಿವ ಪಿ ಚಿದಂಬರಂ ಅಧಿಕೃತ ಆಹ್ವಾನ ನೀಡಿದ್ದಾರೆ.
ನರಮೇಧದ ನಂತರ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರನ್ನು ಭೇಟಿ ಮಾಡಿ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಕ್ಸಲರು ಕೈಗೊಂಡಿರುವ 72 ಗಂಟೆಗಳ ಬಂದ್ ನ್ನು ಕೈಬಿಟ್ಟು ಶಾಂತಿ ಮಾತುಕತೆಗೆ ಬರಬೇಕು. ಸರಕಾರ ನಕ್ಸಲರೊಂದಿಗೆ ಮಾತುಕತೆ ನಡೆಸಲು ಸಿದ್ಧವಿದೆ ಎಂದು ಸ್ಪಷ್ಟಪಡಿಸಿದರು.
ನಕ್ಸಲರ ವಿರುದ್ದ ಆಪರೇಷನ್ ಗ್ರೀನ್ ಹಂಟ್ ಮುಂದುವರೆಸುವುದಾಗಲಿ ಅಥವಾ ವೈಮಾನಿಕ ದಾಳಿ ನಡೆಸುವ ಉದ್ದೇಶ ಸರಕಾರಕ್ಕೆ ಇಲ್ಲ. ನಕ್ಸಲರ ಸಮಸ್ಯೆಯನ್ನು ಪರಿಹಾರ ಹುಡುಕಲು ಸರಕಾರ ಸಿದ್ಧವಿದೆ. ಹಿಂಸಾಚಾರವನ್ನು ಕೈಬಿಟ್ಟು ಮಾತುಕತೆಗೆ ಬರಬೇಕು ಎಂದು ಚಿದಂಬರಂ ಹೇಳಿದ್ದಾರೆ.