ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇವೇಗೌಡರಿಗೆ ಹುಟ್ಟುಹಬ್ಬದ ಶುಭಾಶಯಗಳು

By Mrutyunjaya Kalmat
|
Google Oneindia Kannada News

HD Devegowda
ಬೆಂಗಳೂರು, ಮೇ. 18 : ಕನ್ನಡನಾಡಿನ ಹಿರಿಯ ನಾಗರಿಕ, ಪಳಗಿದ ರಾಜಕಾರಣಿ, ಮಾಜಿ ಪ್ರಧಾನ ಮಂತ್ರಿ ಮತ್ತು ಮಣ್ಣಿನ ಮಗರೆಂದೇ ಪ್ರಸಿದ್ಧಿಯಾಗಿರುವ ದೇವೇಗೌಡರಿಗೆ ಇವತ್ತಿಗೆ 78 ಸಂವತ್ಸರಗಳು ತುಂಬಿ ಬಂದವು. ಹರದನಹಳ್ಳಿ ದೊಡ್ಡೇಗೌಡ ದೇವೇಗೌಡರಿಗೆ ಹುಟ್ಟುಹಬ್ಬದ ಶುಭಾಶಯಗಳು.

ದೇವೇಗೌಡರ ಸಖತ್ ಆರೋಗ್ಯದ ಗುಟ್ಟು ಯಾವ್ದು ಗೊತ್ತಾ?
ಕುಗ್ರಾಮ ಹರದನಹಳ್ಳಿಯನ್ನು, ತಾಲೂಕು ಹೊಳೆನರಸೀಪುರವನ್ನು, ರಾಜ್ಯ ಕರ್ನಾಟಕವನ್ನು, ಜಿಲ್ಲೆ ಹಾಸನವನ್ನು ಮತ್ತು ಇಡೀ ಭಾರತದೇಶವನ್ನು ಮುನ್ನಡೆಸುವ ಕಾಯಕದಲ್ಲಿ ಅವರ ಪಾತ್ರ ಮತ್ತು ಶ್ರಮ ಅಪಾರವಾದದ್ದು. ವಿಶೇಷವಾಗಿ ಕರ್ನಾಟಕ ರಾಜ್ಯದ ಸಾಮಾಜಿಕ, ರಾಜಕೀಯ ಕ್ಷೇತ್ರಗಳಲ್ಲಿ ಅವರ ದಣಿವರಿಯದ ಆಸಕ್ತಿ ಮತ್ತು ಹೋರಾಟದ ಛಲಕ್ಕೆ ಸರಿಸಾಟಿಯೇಯಿಲ್ಲ.

ಹುಟ್ಟುಹಬ್ಬದ ದಿನ ಪ್ರಾಸಂಗಿಕವಾಗಿ ವಯಸ್ಸಿನ ಮಾತು ಬರುತ್ತದೆಯೇ ವಿನಾ, ದೇವೇಗೌಡರಿಗೆ ವೃದ್ಧಾಪ್ಯ ಎನ್ನುವುದೇಯಿಲ್ಲ. ವಯಸ್ಸು ಎಪ್ಪತ್ತೆಂಟಾದರೂ ಹದಿನೆಂಟು ವರ್ಷದ ಮೊಮ್ಮಗನನ್ನು ಮೀರಿಸುವಷ್ಟು ಚಟುವಟಿಕೆ ಅವರ ಶಕ್ತಿಯ ಮೂಲದ್ರವ್ಯ. ಅವರಿಗೆ ಇನ್ನಷ್ಟು ಆಯುರಾರೋಗ್ಯ ಲಭಿಸಲಿ ಎಂದು ಹಾರೈಸುತ್ತೇವೆ. ಬರಲಿರುವ ದಿನಗಳಲ್ಲಿ ಹಿರೀಕರಾದ ದೇವೇಗೌಡರ ಅನುಭವದ ಬುತ್ತಿ ನಾಡಿನ ಅಭ್ಯುದಯಕ್ಕೆ, ಎಲ್ಲ ವರ್ಗದ ಪ್ರಜೆಗಳ ಕ್ಷೇಮಕ್ಕೆ ಮಾರ್ಗದರ್ಶಿಯಾಗಲಿ ಎಂದು ನಿರೀಕ್ಷಿಸುತ್ತೇವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X