ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಬಿಎಂಪಿ 24/7 ಸೇವೆ ಮೇಯರ್ ಅಭಯ

By Mrutyunjaya Kalmat
|
Google Oneindia Kannada News

BBMP 24/7 service to tackle Monsoon
ಬೆಂಗಳೂರು, ಮೇ. 18 : ನಗರದಲ್ಲಿ ಮುಂಗಾರು ಮಳೆಯ ಅನಾಹುತಗಳನ್ನು ತಪ್ಪಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಸಮಗ್ರವಾದ ಕ್ರಿಯಾಯೋಜನೆ ರೂಪಿಸಿದೆ. ಸಾರ್ವಜನಿಕರು ಯಾವುದೇ ಕಾರಣಕ್ಕೂ ಭಯಪಡುವ ಅಗತ್ಯವಿಲ್ಲ ಎಂದು ಮೇಯರ್ ಎಸ್ ಕೆ ನಟರಾಜ್ ಭರವಸೆ ನೀಡಿದ್ದಾರೆ.

ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪಾಲಿಕೆಯ 198 ವಾರ್ಡ್ ಗಳಲ್ಲಿ ಸಾರ್ವಜನಿಕರ ಕುಂದುಕೊರತೆಗಳನ್ನು ನಿವಾರಿಸಲು ಎಲ್ಲ ವಲಯಗಳಲ್ಲೂ 24 ಗಂಟೆ ಸೇವೆಯ ಪೂರ್ಣಕಾಲಿಕ ನಿಯಂತ್ರಣ ಕೊಠಡಿ, ನಾಗರಿಕ ಸೇವಾ ಸೌಲಭ್ಯ, ಸಂಪರ್ಕ ಬಂಧು, ತುರ್ತು ಪರಿಹಾರ ಪಡೆಗಳ ನಿಯೋಜನೆ ಮಾಡಲಾಗಿದೆ ಎಂದರು.

ಅತಿಸೂಕ್ಷ್ಮ ಪ್ರದೇಶಗಳಲ್ಲಿ ಸಂಭವಿಸಬಹುದಾದ ಅನಾಹುತಗಳ ನಿಯಂತ್ರಣಕ್ಕೆ ಸೂಚನಾಫಲಕ ಅಳವಡಿಸುವುದು. ಪ್ರವಾಹ ನಿಯಂತ್ರಣದಲ್ಲಿ ಕರ್ತವ್ಯ ನಿರ್ವಹಿಸುವ ಪಾಲಿಕೆ ಅಧಿಕಾರಿಗಳ ಸಿಬ್ಬಂದಿಗೆ ಸೂಕ್ತ ಮಾರ್ಗದರ್ಶನದ ನೀಡುವುದು. ಎಲ್ಲ ವಲಯ ಮಟ್ಟದಲ್ಲಿ ಅಗತ್ಯವಾದ ಪರಿಹಾರ ಸಾಮಗ್ರಿಗಳನ್ನು ಮುಂಚಿತವಾಗಿ ಸಂಗ್ರಹಿಸಿಟ್ಟುಕೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಮಳೆಗಾಲದಲ್ಲಿ ಎದುರಾಗುವ ಅವಘಡಗಳನ್ನು ತಪ್ಪಿಸಲು 10 ಪ್ರಹಾರ ದಳಗಳನ್ನು ನಿಯೋಜಿಸಲಾಗಿದೆ. ಪ್ರತಿ ವಾರ್ಡಿನಲ್ಲಿ ಒಂದು ಟ್ರ್ಯಾಕ್ಟರ್ ಮತ್ತು 10 ಮಂದಿ ಸಿಬ್ಬಂದಿಗಳ ಸರ್ವಸನ್ನದ್ದರಾಗಿರುವಂತೆ ಸೂಚಿಸಲಾಗಿದೆ. ಇದರ ಜೊತೆಗೆ ಅವಶ್ಯಕತೆ ಬಿದ್ದರೆ ಹೊರಗುತ್ತಿಗೆಯಿಂದ ಸಿಬ್ಬಿಂದಿ ನೇಮಕ ಮಾಡಿಕೊಳ್ಳಲು ಕಾರ್ಯಪಾಲಕ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಳಿಗೆ ತಿಳಿಸಲಾಗಿದೆ ಎಂದು ನಟರಾಜ್ ವಿವರಿಸಿದರು.

ಸಾರ್ವಜನಿಕರು ಕುಂದುಕೊರತೆಗಳಿಗೆ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳ ವಿವರ:

* ಕೇಂದ್ರ ಕಚೇರಿ-(080) 22221188, 22975595, 22100031, 32333435
* ಆರೋಗ್ಯ ನಿಯಂತ್ರಣ ಕಚೇರಿ- 22975585
* ಪೂರ್ವ ವಲಯ- 22979803
* ಪಶ್ಚಿಮ ವಲಯ- 23561692
* ದಕ್ಷಿಣ ವಲಯ- 26566362
* ರಾಜರಾಜೇಶ್ವರಿ ನಗರ ವಲಯ- 28600954
* ಬೊಮ್ಮನಹಳ್ಳಿ ವಲಯ- 25735642
* ಮಹದೇವಪುರ ವಲಯ- 28512301
* ಬ್ಯಾಟರಾಯನಪುರ ವಲಯ- 23638667
* ದಾಸರಹಳ್ಳಿ ವಲಯ- 28394909

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X