ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾತ್ರಿ ಎಷ್ಟು ಹೊತ್ತಿನವರೆಗೆ ಪಬ್ ತೆಗೆದಿರಬೇಕು?

By Shami
|
Google Oneindia Kannada News

Till what time pubs should be open?
ಬೆಂಗಳೂರು, ಮೇ. 17 : ಅಬಕಾರಿ ಇಲಾಖೆಯ ಸದರಿ ನಿಯಮಾವಳಿಗಳ ಪ್ರಕಾರ ಬೆಂಗಳೂರಿನ ಪಬ್, ಬಾರ್, ರೆಸ್ಟೋರೆಂಟುಗಳು ರಾತ್ರಿ 11.30ಕ್ಕೆ ತಮ್ಮ ಕಾರ್ಯಕಲಾಪಗಳನ್ನು ಮುಗಿಸಿ ಹೋಟೆಲು, ವೈನ್ ಶಾಪಿಗೆ ಬೀಗ ಜಡಿಯಬೇಕು. ಆನಂತರ ಮದ್ಯ ಮಾರಾಟ ಮಾಡುವುದು ಕಾನೂನಿಗೆ ವಿರುದ್ಧ ಮತ್ತು ಶಿಕ್ಷಾರ್ಹ ಅಪರಾಧ.

ಇದು ಹಳೆಯ ಬೆಂಗಳೂರಿನ ಸಮಾಚಾರವಾಯಿತು. ಬೆಂಗಳೂರು ಈಗ ಮಹಾನಗರ, ವಿಶ್ವವ್ಯಾಪಾರ, ನೂತನ ಜೀವನಶೈಲಿ, ಆಧುನಿಕ ತಂತ್ರಜ್ಞಾನ ಚಟುವಟಿಕೆಗಳನ್ನು ಮೈತುಂಬಿಕೊಂಡಿರುವ ನಗರ. ವಿಶ್ವ ಪ್ರವಾಸಿಗರು ನಿತ್ಯ ಬಂದು ಹೋಗಿ ಮಾಡುವ ನಗರವಾದ್ದರಿಂದ ಬೇಕೆನೆಸಿದಾಗ ಒಂದು ಪಿಂಟು ಬೀರು ಸಿಗದಿದ್ದರೆ ಇದನ್ನು ಬೆಂಗಳೂರು ಎಂದು ಕರೆಯುತ್ತಾರಾ? ಛೆ.

ಬೇಕೆನಿಸಿದವರಿಗೆ ಬೇಕಾದಾಗ ಮದ್ಯ ಸಿಗುವಂತಾಗಬೇಕು, ಮದ್ಯ ಸಮಾರಾಧನೆ ಸರಿರಾತ್ರಿ 2ರ ತನಕ ಲಭ್ಯವಿರಬೇಕು ಎಂಬ ಒಂದು ಚಳವಳಿ ನಗರದಲ್ಲಿ ಸದ್ದಿಲ್ಲದೆ ಆರಂಭವಾಗಿದೆ. ತಾರಾ ಹೋಟೆಲುಗಳಲ್ಲಿ Open the corck till 2 AM ಚಳವಳಿ ಶುರುವಾಗುತ್ತಿದೆ. ಇದಕ್ಕೆ ಮುಖ್ಯಮಂತ್ರಿ, ಅಬಕಾರಿ ಮಂತ್ರಿ ಯಸ್ ಎಂದಿದ್ದಾರೆ. ಕಾನೂನು ಮತ್ತು ಶಿಸ್ತು ಪಾಲನೆಗೆ ಇದು ಅಡ್ಡಿಯಾಗದಿದ್ದಲ್ಲಿ ನಮ್ಮ ಅಭ್ಯಂತರವೇನೂ ಇಲ್ಲ ಎಂದು ಕಮಿಷನರ್ ಶಂಕರ ಬಿದರಿ ಹೇಳಿದ್ದಾರೆ.

ಪಬ್ ಸಂಸ್ಕೃತಿಯನ್ನು 11.30ರ ನಂತರವೂ ವಿಸ್ತರಿಸುವುದಕ್ಕೆ ಸಾರ್ವಜನಿಕರ ಅಭಿಪ್ರಾಯಗಳನ್ನು ಸರಕಾರವಾಗಲೀ ಅಥವಾ ಪೊಲೀಸ್ ಇಲಾಖೆಯಾಗಲೀ ಆಹ್ವಾನಿಸಿಲ್ಲ. ಈಗ ನಮ್ಮ ಮುಂದಿರುವ ಪ್ರಶ್ನೆ ಏನೆಂದರೆ ಪಬ್ಬುಗಳನ್ನು 2 ಗಂಟೆವರೆಗೆ ತೆರೆಯುವುದಾದರೆ ಅದು ಶ್ರೀಮಂತರಿಗೆ ಮತ್ತು ಪಂಚತಾರಾ ಹೋಟೆಲು ಬಳಸುವವರಿಗೆ ಮಾತ್ರ ಸೀಮಿತವಾಗಬೇಕಾ ಅಥವಾ ಸಮಸ್ತ ಬೆಂಗಳೂರು ನಾಗರಿಕರೂ ಈ ಸೌಲಭ್ಯ ವಿಸ್ತರಣೆ ಆಗಬೇಕಾ ಎನ್ನುವುದು. ಸದ್ಯದಲ್ಲೆ ಬೆಂಗಳೂರನ್ನು ಆವರಿಸಿಕೊಳ್ಳಲಿರುವ ಹೊಸಬಗೆಯ ಮದ್ಯರಾತ್ರಿ ಸಂಸ್ಕೃತಿಯ ಬಗ್ಗೆ ನಿಮ್ಮ ಒಲವು ನಿಲವುಗಳನ್ನು ಚರ್ಚಿಸಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X