ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಜ್ಲಾನ್ ಷಾ ಹಾಕಿ: ಭಾರತ ಜಂಟಿ ಚಾಂಪಿಯನ್

By Mahesh
|
Google Oneindia Kannada News

India, S Korea share Azlan Shah Cup 2010
ಇಪೋ, ಮೇ 17 : ಭಾರತ ತಂಡ ಭಾನುವಾರ ( ಮೇ 16) ಮುಕ್ತಾಯಗೊಂಡ ಅಜ್ಲಾನ್ ಷಾ ಹಾಕಿ ಟೂರ್ನಿಯಲ್ಲಿ ಜಂಟಿ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ದಕ್ಷಿಣ ಕೊರಿಯಾದ ವಿರುದ್ದ ನಡೆಯ ಬೇಕಾಗಿದ್ದ ಫೈನಲ್ ಪಂದ್ಯ ಮಳೆಯಿಂದ ರದ್ದಾದ ಕಾರಣ ಉಭಯ ತಂಡಗಳನ್ನು ಜಂಟಿ ವಿಜೇತರೆಂದು ಘೋಷಿಸಲಾಯಿತು.

ಪಂದ್ಯ ಆರಂಭವಾದ ಆರನೇ ನಿಮಿಷದಲ್ಲಿ ಭಾರೀ ಮಳೆ ಸುರಿದು ಟರ್ಫ್ ಸಂಪೂರ್ಣ ಒದ್ದೆಯಾದ ಕಾರಣ ರೆಫರಿ ಪಂದ್ಯವನ್ನು ರದ್ದುಗೊಳಿಸಲು ತೀರ್ಮಾನಿಸಿದರು. ಅಜ್ಲಾನ್ ಷಾ ಹಾಕಿ ಕಪ್ ಇತಿಹಾಸದಲ್ಲಿ ಫೈನಲ್ ಪಂದ್ಯ ರದ್ದಾಗುತ್ತಿರುವುದು ಇದೇ ಮೊದಲು. ಲೀಗ್ ನಲ್ಲಿ ತಮಗೆ ಹೆಚ್ಚಿನ ಅಂಕ ಬಂದಿರುವುದರಿಂದ ಮತ್ತು ಲೀಗ್ ಪಂದ್ಯದಲ್ಲಿ ಕೊರಿಯಾ ತಂಡವನ್ನು ಸೋಲಿಸಿರುವುದರಿಂದ ತಮಗೆ ಪ್ರಶಸ್ತಿ ನೀಡಬೇಕೆನ್ನುವ ಭಾರತೀಯ ಹಾಕಿ ಮಂಡಳಿಯ ಮನವಿಯನ್ನು ಎಫ್ಐಎಚ್ ಮಂಡಳಿ ತಿರಸ್ಕರಿಸಿತು.

ಹಾಲಿ ಚಾಂಪಿಯನ್ ಕೂಡ ಆಗಿರುವ ಭಾರತ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಳ್ಳುವ ಮೂಲಕ ಐದನೇ ಬಾರಿ ಚಾಂಪಿಯನ್ ಆಗಿ ಉಳಿಯಿತು. ಭಾರತ ಈ ಹಿಂದೆ 1985 , 1991, 1995, 2009ರಲ್ಲಿ ಚಾಂಪಿಯನ್ ಆಗಿತ್ತು. ಭಾರತದ ಡಿಫೆನ್ಡರ್ ಸರ್ದಾರ್ ಸಿಂಗ್ 'ಟೂರ್ನಿ ಶ್ರೇಷ್ಠ' ಪ್ರಶಸ್ತಿಯನ್ನು ಗಳಿಸಿದರು. ಚಾಂಪಿಯನ್ ಪಟ್ಟ ಉಳಿಸಿಕೊಂಡಿರುವ ಭಾರತ ತಂಡವನ್ನು ಕ್ರೀಡಾ ಸಚಿವ ಎಂಎಸ್ ಗಿಲ್ ಅಭಿನಂದಿಸಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X