ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಸ್ಪತ್ರೆಗಳಿಂದ ಮಕ್ಕಳ ಅಕ್ರಮ ಮಾರಾಟ

By Prasad
|
Google Oneindia Kannada News

Newborn baby
ಬೆಂಗಳೂರು, ಮೇ 17 : ಹೆತ್ತ ತಾಯಿಗೆ ಬೇಡವಾದ ಅಥವಾ ತಾಯಿ ಪ್ರೀತಿಯಿಂದ ವಂಚಿತವಾದ ಹಸುಗೂಸುಗಳನ್ನು ಕೆಲ ಆಸ್ಪತ್ರೆಗಳು ಅಕ್ರಮವಾಗಿ ಮಾರಾಟ ಮಾಡುತ್ತಿರುವ ಸಂಗತಿ ಬೆಳಕಿಗೆ ಬಂದಿದೆ.

ಅಕ್ರಮ ಸಂಬಂಧದಿಂದಾಗಲಿ, ಇನ್ನಾವುದೋ ಕಾರಣದಿಂದಾಗಿ ಹೆತ್ತಮ್ಮನಿಗೆ ಬೇಡವಾದ ಮಗುವನ್ನು ಆಸ್ಪತ್ರೆ ದತ್ತು ಸಂಘಟನಾ ಸಂಸ್ಥೆಗೆ ನೀಡಬೇಕು. ಮಕ್ಕಳಾಗದ ಪಾಲಕರು ಈ ಸಂಸ್ಥೆಯಿಂದ ಮಕ್ಕಳನ್ನು ದತ್ತು ಪಡೆಯಬಹುದು. ಆದರೆ ಇತ್ತೀಚಿನ ದಿನಗಳಲ್ಲಿ ಈ ಸಂಸ್ಥೆಗೆ ಪರಿತ್ಯಕ್ತ ಮಕ್ಕಳು ಬರುವುದೇ ನಿಂತಿದೆ.

ಮಕ್ಕಳನ್ನು ಅಕ್ರಮವಾಗಿ ಆಸ್ಪತ್ರೆಗಳೇ ಪಾಲಕರಿಗೆ ಹೆಚ್ಚಿನ ಹಣಕ್ಕಾಗಿ ಮಾರಾಟ ಮಾಡುತ್ತಿರುವ ಬಗ್ಗೆ ಕರ್ನಾಟಕ ಮಕ್ಕಳ ಹಿತರಕ್ಷಣಾ ಆಯೋಗಕ್ಕೆ ದೂರುಗಳು ಬಂದಿವೆ. ಹಿಂದೂ ದತ್ತು ಮತ್ತು ಪಾಲನಾ ಕಾಯ್ದೆ, 1956ರ ಅಡಿಯಲ್ಲಿ ನಿಯಮಗಳನ್ನು ಪಾಲಿಸದಿರುವ ಆಸ್ಪತ್ರೆಗಳ ಮೇಲೆ ಕ್ರಮ ಜರುಗಿಸಬೇಕೆಂದು ದತ್ತು ಸಂಘಟನಾ ಸಂಸ್ಥೆ ಸರಕಾರವನ್ನು ಕೇಳಿಕೊಂಡಿದೆ.

ಆಸ್ಪತ್ರೆ ಮಾತ್ರವಲ್ಲ, ಆಸ್ಪತ್ರೆಯಿಂದ ನೇರವಾಗಿ ಮಗುವನ್ನು ಕೊಳ್ಳುವ ಪಾಲಕರು ಕೂಡ ಮಗುವನ್ನು ಅಪಹರಿಸಿದ ಆರೋಪಕ್ಕೆ ಗುರಿಯಾಗುತ್ತಾರೆ. ಕುಟುಂಬದಲ್ಲಿ ಆಂತರಿಕವಾಗಿ ದತ್ತು ಪಡೆಯುವಾಗಲೂ ಕೂಡ ಮಕ್ಕಳ ಕಲ್ಯಾಣ ಸಮಿತಿಯಿಂದ ಅನುಮತಿ ಪಡೆಯದೆ ದತ್ತು ನೀಡುವಂತಿಲ್ಲ.

ಬೆಂಗಳೂರಿನಲ್ಲಿ ಮಾತ್ರವಲ್ಲ ಉಡುಪಿಯಲ್ಲಿಯೂ ಇಂಥ ಪ್ರಕರಣಗಳು ಜರುಗಿವೆ. ದತ್ತು ಸ್ವೀಕರಣಾ ಪ್ರಕ್ರಿಯೆ ಕೂಡ ಅತ್ಯಂತ ಸುದೀರ್ಘವಾಗಿರುವುದು ಪಾಲಕರು ಮತ್ತು ಆಸ್ಪತ್ರೆಗಳು ಕಳ್ಳದಾರಿ ಹಿಡಿಯಲು ಪ್ರೋತ್ಸಾಹಿಸುತ್ತಿವೆ. ಒಂದು ಮಗು ದತ್ತು ಸ್ವೀಕಾರಕ್ಕೆ ಅರ್ಹವಾಗಲು ಕನಿಷ್ಠ ಎರಡು ವರ್ಷಗಳೇ ಬೇಕು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X