ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಳೆ ಎಲೆಕ್ಟ್ರಾನಿಕ್ ವಸ್ತುಗಳ ಅಮದಿಗೆ ನಿರ್ಬಂಧ

By Mahesh
|
Google Oneindia Kannada News

Govt curbs import of used e-goods through charity route
ನವದೆಹಲಿ, ಮೇ.17: ವಿದೇಶಗಳಿಂದ ದೇಶಕ್ಕೆ ದಾನದ ರೂಪದಲ್ಲಿ ಬರುವ ಕಂಪ್ಯೂಟರ್, ಲ್ಯಾಪ್ ಟಾಪ್ ಮತ್ತು ಇತರ ಎಲೆಕ್ಟ್ರಾನಿಕ್ ಉಪಕರಣಗಳ ಮೇಲೆ ಸರ್ಕಾರ ನಿರ್ಬಂಧ ಹೇರಿದೆ. ಈ ತನಕ ಸರ್ಕಾರಿ ಶಾಲೆಗಳಿಗೆ, ದತ್ತಿ ಆಸ್ಪತ್ರೆಗಳಿಗೆ, ಗ್ರಂಥಾಲಯಗಳಿಗೆ ಮತ್ತು ಇತರ ಸೇವಾ ಸಂಸ್ಥೆಗಳಿಗೆ ಹಳೆಯ ಕಂಪ್ಯೂಟರ್ ಹಾಗೂ ಇತರ ವಸ್ತುಗಳನ್ನು ದಾನ, ಕೊಡುಗೆಯ ರೂಪದಲ್ಲಿ ಆಮದು ಮಾಡಿಕೊಳ್ಳಲು ಅವಕಾಶವಿತ್ತು.

ದೇಶದಲ್ಲಿ ಹೆಚ್ಚುತ್ತಿರುವ ಎಲೆಕ್ಟ್ರಾನಿಕ್ ತ್ಯಾಜ್ಯ(ಇ-ತ್ಯಾಜ್ಯ)ದ ಸಮಸ್ಯೆಯಿಂದ ಹಾಗೂ ಆರೋಗ್ಯದ ಹಿತದೃಷ್ಟಿಯಿಂದ ಸರ್ಕಾರ ಇದೀಗ ಈ ವಸ್ತುಗಳ ಮೇಲೆ ಸಂಪೂರ್ಣ ನಿಷೇಧ ಹೇರಿಲ್ಲವಾದರೂ, ನಿರ್ಬಂಧ ಹೇರಿದೆ. ಈ ಆಮದಿನ ಕುರಿತು ವಿದೇಶಿ ವ್ಯಾಪಾರದ ಪ್ರಧಾನ ನಿರ್ದೇಶನಾಲಯ (DGFT) ನಿರ್ಬಂಧ ಹೇರಿದ್ದು ಪ್ರತಿ ಅಮದನ್ನೂ ಪರಿಶೀಲಿಸಿ ನಂತರ ಅನುಮತಿ ನೀಡಲಿದೆ.

ಒಂದು ಅಂದಾಜಿನ ಪ್ರಕಾರ 2009ರ ಮೊದಲ ಆರು ತಿಂಗಳಿನಲ್ಲಿ ಸುಮಾರು 600 ಟನ್ ಗಳಷ್ಟು ಇ-ತ್ಯಾಜ್ಯ ದೇಶಕ್ಕೆ ದಾನದ ರೂಪದಲ್ಲಿ ಬಂದಿದೆ. ಇದರಲ್ಲಿ ಶೇ.70ರಷ್ಟು ಅಮೆರಿಕಾದಿಂದಲೇ ಬಂದಿದ್ದು ಇದನ್ನು ಶಾಲೆಗಳಿಗೆ ದಾನದ ರೂಪದಲ್ಲಿ ನೀಡಲಾಗಿದೆ. ಸರ್ಕಾರೇತರ ಸಂಸ್ಥೆಗಳ ಪ್ರಕಾರ ಮುಂದುವರಿದ ದೇಶಗಳು ನಿರುಪಯುಕ್ತ ಪದಾಥಗಳನ್ನೂ ಇದರಲ್ಲಿ ಸೇರಿಸಿ ಕಳಿಸುತ್ತಿರುವುದರಿಂದ ಜನರ ಆರೋಗ್ಯಕ್ಕೆ ಧಕ್ಕೆಯಾಗುವ ಸಂಭವವಿದೆ.

ಈ ರೀತಿಯ ತ್ಯಾಜ್ಯ ರೂಪದ ದಾನ ವ್ಯವಸ್ಥೆಗೆ ಕಡಿವಾಣ ಹಾಕಲು ಕೇಂದ್ರ ಪರಿಸರ ಸಚಿವಾಲಯ ಇ- ತ್ಯಾಜ್ಯದ ನಿರ್ವಹಣೆಯ ಕರಡು ಕಾಯ್ದೆ 2010 ನ್ನು ಸಿದ್ಧಪಡಿಸಿದೆ. ಉಪಯೋಗಿಸಿದ ಕಂಪ್ಯೂಟರ್, ಇತರ ಉಪಕರಣಗಳನ್ನು ಈ ರೀತಿ ದಾನದ ಹೆಸರಿನಲ್ಲಿ ತಂದೊಗೆಯುವುದಕ್ಕೆ ತಮ್ಮ ವೈಯಕ್ತಿಕ ವಿರೋಧವಿದೆ.ಇದು ಪರಿಸರಕ್ಕೆ ಮತ್ತು ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಇತ್ತೀಚೆಗೆ ರಾಜ್ಯಸಭೆಯಲ್ಲಿ ಪರಿಸರ ಸಚಿವ ಜೈ ರಾಮ್ ರಮೇಶ್ ಅವರು ಹೇಳಿದ್ದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X