ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಪುಸ್ತಕ ಮಳಿಗೆ ಕ್ಲಿಕ್ ಆಗೋದು ಗ್ಯಾರಂಟಿ

By Mahesh
|
Google Oneindia Kannada News

Bangalore gets a mall exclusively on school books
ಬೆಂಗಳೂರು, ಮೇ.17: ಇನ್ಮುಂದೆ ಅವಿನ್ಯೂ ರಸ್ತೆಯಲ್ಲಿ ಸಂಚಾರ ದಟ್ಟಣೆ ಸರಾಗವಾಗಬಹುದು.ಹೇಗೆ ಅಂತೀರಾ. ಅಲ್ಲೇನೂ ವಾಹನ ಸಂಚಾರಕ್ಕೆ ನಿರ್ಬಂಧ ಹೇರಿಲ್ಲ.ಮೇ ತಿಂಗಳು ಮುಗಿಯುತ್ತಿದ್ದಂತೆ ಪೋಷಕರು, ಮಕ್ಕಳು ಅವಿನ್ಯೂ ರಸ್ತೆ ಎಂಬ ಕಿಷ್ಕಿಂದೆಗೆ ಮುಗಿಬೀಳುತ್ತಿದ್ದದ್ದೂ ಸಾಮಾನ್ಯ ಸಂಗತಿ. ಆದರೆ, ಇದಕ್ಕೆ ಪರ್ಯಾಯ ಮಾರ್ಗಎಂಬಂತೆ ಮಕ್ಕಳಿಗೆ ಅಗತ್ಯವಿರುವ ಪುಸ್ತಕಗಳ ಪ್ರತ್ಯೇಕ ಮಳಿಗೆ ನಗರದಲ್ಲಿ ಆರಂಭವಾಗಿದೆ. ವೈದ್ಯಕೀಯ ಶಿಕ್ಷಣ ಸಚಿವ ರಾಮಚಂದ್ರೇಗೌಡ ಅವರು ಭಾನುವಾರ ಈ ವಿನೂತನ ಮಳಿಗೆಯನ್ನು ಉದ್ಘಾಟಿಸಿ ಮಾತನಾಡುತ್ತಾ, ವಿಶಾಲವಾದ ಮಳಿಗೆ ಹಾಗೂ ವೈವಿಧ್ಯಮಯ ಪುಸ್ತಕಗಳ ಉಪಯೋಗ ಎಲ್ಲರಿಗೂ ಲಭ್ಯವಾಗಲಿ, ಈ ಮಳಿಗೆ ಇನ್ನಷ್ಟು ವಿಸ್ತರಿಸಲಿ ಎಂದು ಹರಿಸಿದರು.

ಬಸವೇಶ್ವರನಗರದಲ್ಲಿರುವ ಈ Children Book Mall ನಲ್ಲಿ ವಿವಿಧ ಪ್ರಕಾಶಕರ ಸುಮಾರು 5ಸಾವಿರಕ್ಕೂ ಅಧಿಕ ಪುಸ್ತಕಗಳಿವೆ.ಸುಮಾರು 8 ಸಾವಿರ ಚ.ಅ ವಿಸ್ತೀರ್ಣ ಹೊಂದಿರುವ ಈ ಮಳಿಗೆಯ ನಾಲ್ಕು ಅಂತಸ್ತು ವಿದ್ಯಾರ್ಥಿಗಳ, ಮಕ್ಕಳ ಪುಸ್ತಕಗಳಿಗೆ ಮೀಸಲು ಎಂಬುದು ವಿಶೇಷ. ಈ ಮಳಿಗೆಯಲ್ಲಿ ಬರೀ ಪುಸ್ತಕಗಳಲ್ಲದೆ, ಎಸ್ಸೆಸೆಲ್ಸಿ ಗೈಡ್ ಗಳು, ಉತ್ತಮ ಶ್ರೇಯಾಂಕ ಪಡೆದ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳ ಪ್ರತಿ, ಮನೆಗೆಲಸ ಮಾಡುವ ವಿಧಾನ ಹೀಗೆ ಹತ್ತು ಹಲವು ಬಗೆಯ ಉಪಯುಕ್ತ ಹೊತ್ತಿಗೆಗಳನ್ನು ಇಲ್ಲಿ ಕಾಣಬಹುದು ಎನ್ನುತ್ತಾರೆ ಈ ಮಳಿಗೆಯ ವ್ಯವಸ್ಥಾಪಕ ನಿರ್ದೇಶಕ ಎ ಆರ್ ಸ್ವಾಮಿ.

ಸಿಬಿಎಸ್ ಇ ಪುಸ್ತಕಗಳು ಲಭ್ಯ: ರಾಜ್ಯ ಸರ್ಕಾರದ ಪಠ್ಯಕ್ರಮಕ್ಕೆ ಅನುಗುಣವಾದ ಪುಸ್ತಕಗಳಲ್ಲದೆ, ಕೇಂದ್ರ ಪಠ್ಯಕ್ರಮದ ಸಿಬಿಎಸ್ಇ, ಐಸಿಎಸ್ಇ ಪುಸ್ತಕಗಳು ಇಲ್ಲಿ ಲಭ್ಯವಿದೆ. ಸುಮಾರು 25 ವರ್ಷಗಳಿಂದ ಪುಸ್ತಕ ಪ್ರಕಾಶನ ಮಾಡಿ ಅನುಭವವಿದೆ. ಆಲ್ಲದೆ, ಸರಿಯಾದ ಸಮಯಕ್ಕೆ ಪುಸ್ತಕ ಸಿಗದೇ ಎಷ್ಟೋ ಬಾರಿ ಮಕ್ಕಳು ಪಾಡು ಪಡುವುದು ನೋಡಿದ್ದೀವಿ. ಇದು ಸಾರ್ವತ್ರಿಕ ಸಮಸ್ಯೆಯಾಗಿ ಬಿಟ್ಟಿದೆ. ಮಕ್ಕಳು, ಪೋಷಕರಿಗೆ ಪುಸ್ತಕ ಲಭ್ಯತೆ ಸಮಸ್ಯೆ ನೀಗಿಸುವ ಸಲುವಾಗಿ ಈ ಪುಸ್ತಕ ಮಳಿಗೆ ಆರಂಭಿಸಿದೆವು ಎಂದು ಎಆರ್ ಸ್ವಾಮಿ ಹೇಳಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X