• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಜ್ಲಾನ್ ಷಾ ಹಾಕಿ: ಭಾರತ -ಕೊರಿಯಾ ಫೈನಲ್

By Mahesh
|

ಕೌಲಾಲಂಪುರ, ಮೇ.16: ಮಿಂಚಿನ ಆಟವಾಡಿದ ಧನಂಜಯ್ ಮಹಾದಿಕ್ ಹ್ಯಾಟ್ರಿಕ್ ಗೋಲು ಬಾರಿಸುವುದರೊಂದಿಗೆ ಭಾರತೀಯ ಆಟಗಾರರು ಈಜಿಪ್ಟ್ ತಂಡವನ್ನು ಸುಲಭವಾಗಿ ಸದೆಬಡಿದು ಸುಲ್ತಾನ್ ಅಜ್ಲಾನ್ ಷಾ ಕಪ್ ಹಾಕಿ ಚಾಂಪಿಯನ್‌ಷಿಪ್‌ನಲ್ಲಿ ಸತತ ಮೂರನೇ ಬಾರಿಗೆ ಫೈನಲ್‌ಗೆ ಲಗ್ಗೆ ಹಾಕಿದ್ದಾರೆ. ಭಾರತ ತಂಡ ಆರನೇ ಬಾರಿಗೆ ಫೈನಲ್ ಪ್ರವೇಶಿಸಿದ್ದು, ಕೊರಿಯಾ ವಿರುದ್ಧ ಭಾನುವಾರ ಪ್ರಶಸ್ತಿಗಾಗಿ ಸೆಣಸಲಿದೆ.

ಹಾಲಿ ಚಾಂಪಿಯನ್ ಭಾರತ ತಂಡ ಶನಿವಾರ ನಡೆದ ತನ್ನ ಕೊನೆಯ ಪಂದ್ಯದಲ್ಲಿ ಈಜಿಪ್ಟ್ ತಂಡದ ವಿರುದ್ಧ 7-1 ಗೋಲುಗಳಿಂದ ಜಯಭೇರಿ ಬಾರಿಸಿತು. ಇದರೊಂದಿಗೆ ನಾಲ್ಕು ಬಾರಿಯ ಚಾಂಪಿಯನ್ (1985, 1991, 1995,2009). ಕೊರಿಯಾ ಇದುವರೆಗೆ 1996ರಲ್ಲಿ ಮಾತ್ರ ಪ್ರಶಸ್ತಿ ಗೆಲ್ಲುವಲ್ಲಿ ಸಫಲವಾಗಿದೆ.

ಈಜಿಪ್ಟ್ ವಿರುದ್ಧ ಗೆಲ್ಲಲೇಬೇಕಾದ ಸ್ಥಿತಿಯಲ್ಲಿದ್ದ ಭಾರತೀಯ ಅಟಗಾರರು ಪಂದ್ಯದುದ್ದಕ್ಕೂ ಆಕ್ರಮಣಕಾರಿ ಆಟ ಪ್ರದರ್ಶಿಸಿ ಸುಲಭವಾಗಿಯೇ ಎದುರಾಳಿ ತಂಡದ ಸವಾಲನ್ನು ಹತ್ತಿಕ್ಕಿದರು. ಭಾರತ ತಂಡದ ಗೆಲುವಿನಲ್ಲಿ ವಿಜೃಂಭಿಸಿದ ಮಹಾದಿಕ್ 33, 40 ಮತ್ತು 43 ನೇ ನಿಮಿಷಗಳಲ್ಲಿ ಕ್ರಮವಾಗಿ ಗೋಲು ಬಾರಿಸಿ ಹ್ಯಾಟ್ರಿಕ್ ಸಾಧನೆ ಮಾಡಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X