ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೆಟ್ರೋಯೇತರ ನಗರಗಳತ್ತ ಹಿಂದಿ ಪತ್ರಿಕೆಗಳ ಕಣ್ಣು

By Mahesh
|
Google Oneindia Kannada News

Dainik Bhaskar
ಮುಂಬೈ,ಮೇ.16:ಪ್ರಸಾರ ಸಂಖ್ಯೆ ವೃದ್ದಿಸಿಕೊಳ್ಳಲು ದೇಶದ ಪ್ರಮುಖ ಹಿಂದಿ ದಿನಪತ್ರಿಕೆಗಳು ಮೆಟ್ರೋಯೇತರ ನಗರಗಳಲ್ಲಿ ಆವೃತ್ತಿಗಳನ್ನು ಹೊರತರಲು ಮುಂದಾಗಿವೆ. ದೇಶದ ಎರಡನೇ ಅತೀ ದೊಡ್ಡ ಹಿಂದಿ ದಿನಪತ್ರಿಕೆ ದೈನಿಕ್ ಭಾಸ್ಕರ್ ಜಾರ್ಖಂಡ್ ನ ರಾಂಚಿಯಲ್ಲಿ ಆವೃತ್ತಿ ಹೊರತರಲು ಮುಂದಾಗಿದೆ.

ಇದು ಹಾಗೂ ಹಿಂದುಸ್ಥಾನ್ ಮೀಡಿಯಾ ವೆಂಚರ್‍ಸ್ ಮೆಟ್ರೋಯೇತರ ನಗರಗಳಲ್ಲಿ, ಹೆಚ್ಚು ಜಾಹೀರಾತು ಆದಾಯವಿರುವ ನಗರಗಳಲ್ಲಿ ಆವೃತ್ತಿ ಹೊರತರಲು ನಿರ್ಧರಿಸಿವೆ. ಹಿಂದುಸ್ಥಾನ್ ಮೀಡಿಯಾ ಉತ್ತರ ಪ್ರದೇಶದ ಘೋರಖ್ ಪುರದಲ್ಲಿ ಆವೃತ್ತಿ ತರಲು ಮುಂದಾಗಿದ್ದು ದೈನಿಕ್ ಭಾಸ್ಕರ್ ಜಾರ್ಖಂಡ್, ಬಿಹಾರ ಮತ್ತು ಜಮ್ಮುವಿನಲ್ಲಿ ಆವೃತ್ತಿ ಹೊರತರಲು ಯೋಜಿಸಿದೆ.

ಪ್ರಮುಖ ನಗರಗಳಲ್ಲಿ ಉತ್ತಮ ಬೆಳವಣಿಗೆ ಅವಕಾಶವಿದ್ದು ಭವಿಷ್ಯದ ವ್ಯವಹಾರ ಹಾಗೂ ಬೆಳವಣಿಗೆಗೆ ಮುಖ್ಯವಾಗಿದೆ ಎಂದು ಪ್ರಮುಖ ಸಮೀಕ್ಷಾ ಸಂಸ್ಥೆ ಅರ್ನ್ಸ್‌ಟ್ ಟಂಡ್ ಯಂಗ್ ಹೇಳಿದೆ. ದೇಶದ ದ್ವಿತೀಯ ಮತ್ತು ತೃತೀಯ ನಗರಗಳಲ್ಲಿ ಉತ್ತಮ ಬಳಕೆ ಇದ್ದು ಈ ಪ್ರದೇಶಗಳನ್ನು ಇನ್ನೂ ಕಂಪೆನಿಗಳು ಸಮರ್ಥವಾಗಿ ಬಳಸಿಕೊಂಡಿಲ್ಲ ಎನ್ನಲಾಗಿದೆ.

ದೇಶದ ಮೆಟ್ರೋ ನಗರಗಳ ಜಾಹೀರಾತು ವೆಚ್ಚದ ಶೇ.40-45 ರಷ್ಟು ಪ್ರಮುಖ ನಗರಗಳಿಂದ ಉತ್ಪತ್ತಿಯಾಗುತ್ತದೆ ಎನ್ನಲಾಗಿದೆ. ದೇಶದ ಮುದ್ರಣ ಮಾಧ್ಯಮದ ಮಾರುಕಟ್ಟೆ ಗಾತ್ರ 10,800ಕೋಟಿ ರೂಪಾಯಿಗಳಾಗಿದ್ದು, ಇದರಲ್ಲಿ ಹಿಂದಿ ದಿನಪತ್ರಿಕೆಗಳ ಪಾಲು 2000 ಕೋಟಿ ರೂಪಾಯಿಗಳಾಗಿವೆ. ಇದರಲ್ಲಿ ಉತ್ತರ ಪ್ರದೇಶ ಮತ್ತು ಉತ್ತರಖಾಂಡ್ ನ ಪಾಲು 620 ಕೋಟಿ ರೂಪಾಯಿಗಳಾಗಿವೆ.

ಉತ್ತರ ಪ್ರದೇಶ , ಮದ್ಯ ಪ್ರದೇಶ ಮತ್ತು ರಾಜಾಸ್ಥಾನದ ಲ್ಲಿ ಜಾಹೀರಾತು ಮಾರುಕಟ್ಟೆ ಹೆಚ್ಚು ಸ್ಪರ್ದಾತ್ಮಕವಾಗಿದ್ದು , ಜಾರ್ಖಂಡ್ ಮತ್ತು ಬಿಹಾರದಲ್ಲಿ ಕಡಿಮೆ ಸ್ಪರ್ದೆ ಇದೆ .ಬಿಹಾರದಲ್ಲಿ ಮುಂದಿನ ಅಕ್ಟೋಬರ್ ನಲ್ಲಿ ಚುನಾವಣೆಗಳು ನಡೆಯಲಿದ್ದು ಈ ಸಮಯದಲ್ಲಿ ಹೆಚ್ಚಿನ ಜಾಹೀರಾತುಗಳು ಹರಿದು ಬರುವುದರಿಂದ ಹಿಂದಿ ಪತ್ರಿಕೆಗಳು ಇಲ್ಲಿ ಆವೃತ್ತಿ ತರಲು ಮುಂದಾಗಿವೆ . ಹಿಂದಿ ಮಾತನಾಡುವ ಜನರಿರುವ ರಾಜ್ಯಗಳಲ್ಲಿ ಆರ್ಥಿಕ ಅಭಿವೃದ್ದಿಯಲ್ಲಿ ಹೆಚ್ಚಿನ ಪಾತ್ರ ವಹಿಸಿದ್ದು ಈ ರಾಜ್ಯಗಳಲ್ಲಿ ಸಾಕ್ಷರ ಪ್ರಮಾಣ 2002 ರಲ್ಲಿ ಶೇ62.5 ಇದ್ದುದ್ದು 2007 ರಲ್ಲಿ ಶೇ 73 ಕ್ಕೇರಿದೆ .

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X