ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇ.30ಕ್ಕೆ ಮುಂಗಾರು ಮಳೆ; ರೈತರ ಮೊಗದಲ್ಲಿ ಸಂತಸ

By Rajendra
|
Google Oneindia Kannada News

Monsoon likely to set in on May 30
ನವದೆಹಲಿ, ಮೇ.15: ಭಾರತದ ಶೇ.60ಕ್ಕೂ ಹೆಚ್ಚು ಮಂದಿ ರೈತರು ಕಾತುರದಿಂದ ಮುಂಗಾರು ಮಳೆಯ ನಿರೀಕ್ಷೆಯಲ್ಲಿದ್ದಾರೆ. ಭಾರತದಲ್ಲಿ ಸಾಮಾನ್ಯವಾಗಿ ಜೂನ್ ಮೊದಲ ವಾರದಲ್ಲಿ ಮುಂಗಾರು ಮಳೆ ಆಗಮಿಸುತ್ತದೆ. ಆದರೆ ಈ ಬಾರಿ ಮೇ.30ರಿಂದ ಆರಂಭವಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.ರೈತರ ಬೇಸಾಯ ಚಟುವಟಿಕೆಗಳು ಚುರುಕುಗೊಳ್ಳಲಿವೆ.

ಮೇ.30ರಿಂದ ನೈರುತ್ಯ ಮುಂಗಾರು ಕೇರಳ ರಾಜ್ಯದಿಂದ ಆರಂಭವಾಗಲಿದೆ. ಕಳೆದ ವರ್ಷ ಮುಂಗಾರು ಮಳೆ ಮೇ.23ರಂದು ಆರಂಭವಾಗಿತ್ತು. ಹವಾಮಾನ ಇಲಾಖೆ ಮೇ.26ಕ್ಕೆ ಮುಂಗಾರು ಮಳೆ ಆರಂಭವಾಗುತ್ತದೆ ಎಂದು ಕಳೆದ ವರ್ಷ ತಿಳಿಸಿತ್ತು. ಈ ಬಾರಿಯ ಮುಂಗಾರು ಮಳೆ ಹೆಚ್ಚು ಕಡಿಮೆ ನಾಲ್ಕು ದಿನಗಳಲ್ಲಿ ಬರುವ ಸಾಧ್ಯತೆ ಇದೆ.

ಜೂನ್ ಸೆಪ್ಟೆಂಬರ್ ವರೆಗೆ ಮುಂಗಾರು ಸಹಜ ಪ್ರಮಾಣದಲ್ಲಿರುತ್ತದೆ. ಭಾರತೀಯ ಹವಾಮಾನ ಇಲಾಖೆ 2005ರಿಂದ ಮುಂಗಾರು ಮುನ್ಸೂಚನೆಯನ್ನು ದೇಶೀಯವಾಗಿ ಅಭಿವೃದ್ಧಿಪಡಿಸಿದ ಸಂಖ್ಯಾಶಾಸ್ತ್ರದ ಮಾದರಿಯನ್ನು ಬಳಸುತ್ತಿದೆ. ಈ ಮಾದರಿಯ ಮುನ್ಸೂಚನೆ ನಾಲ್ಕು ದಿನಗಳಷ್ಟು ಹೆಚ್ಚು ಕಡಿಮೆ ವ್ಯತ್ಯಾಸದಲ್ಲಿ ಖಚಿತವಾಗಿ ಸಂಭವಿಸುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X