ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶಾಲ ಬೆಂಗಳೂರಿನಲ್ಲಿ ಭಾನುವಾರ ಪವರ್ ಕಟ್

By Shami
|
Google Oneindia Kannada News

Power cuts galore on Sunday in Bangalore
ಬೆಂಗಳೂರು, ಮೇ. 15 : ಸಿ ಸ್ಟೇಷನ್ 66/11 ಕೆ.ವಿ. ವಿದ್ಯುತ್ ಉಪಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾರ್ಯ ಕೈಗೊಂಡಿರುವುದರಿಂದ ಬೆಂಗಳೂರು ಮಹಾನಗರದ ಹಲವೆಡೆ ವಿದ್ಯುತ್ ಸರಬರಾಜಿಗೆ ಕತ್ತರಿ ಬೀಳಲಿದೆ.

ನಾಳೆ ಮೇ 16ರ ಭಾನುವಾರ ರಂದು ಬೆಳಗ್ಗೆ 10ರಿಂದ ಸಂಜೆ 4ರವರೆಗೆ ಈ ಕೆಳಗೆ ಕಾಣಿಸಿದ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ. ನಿಮ್ಮ ಬಡಾವಣೆಯ ಹೆಸರೂ ಈ ಪಟ್ಟಿಯಲ್ಲಿ ಇದೆಯೇ? ಮುಂಜಾಗ್ರತೆಗೆ ಈಗಲೇ ಪರೀಕ್ಷಿಸಿಕೊಳ್ಳಿ.

ಪ್ರದೇಶಗಳು : ಇನ್‌ಫೆಂಟ್ರಿ ರಸ್ತೆ, ವಿಧಾನಸೌಧ,ಪ್ರೆಸ್ಟೀಜ್ ಹೋಟೆಲ್, ರೈಲ್ವೆ ರಸ್ತೆ,ತಿಮ್ಮಯ್ಯ ರಸ್ತೆ, ಶಿಫಾ ಆಸ್ಪತ್ರೆ, ಮಿಲ್ಲರ್‍ಸ್ ರಸ್ತೆ, ಕಾವೇರಪ್ಪ ರಸ್ತೆ, ಚಿಕ್ಕಬಜಾರ್ ರಸ್ತೆ,ಪೊಲೀಸ್ ವಸತಿ ಗೃಹಗಳು, ಶಿವಾಜಿನಗರ, ಬೆನ್ಸನ್ ಟೌನ್, ಎಂ.ಆರ್. ಪಾಳ್ಯ,ಶಿವಾಜಿ ರಸ್ತೆ, ನಳ ರಸ್ತೆ, ಪಾಸ್‌ಬಾನ್ ಮುದ್ರಣ, ಸೇಂಟ್ ಮೇರಿಸ್ ಚರ್ಚ್, ಕನ್ನಿಂಗ್ ಹ್ಯಾಂ ರಸ್ತೆ, ಎಂಎಸ್‌ಐಎಲ್, ವೋಕ್ಹಾರ್ಟ್ ಆಸ್ಪತ್ರೆ, ಆಲ್ ಇಂಡಿಯಾ ರೇಡಿಯೊ, ಕ್ಯಾಪಿಟಲ್ ಹೋಟೆಲ್, ಎಡ್ವರ್ಡ್ ರಸ್ತೆ, ಸುಲ್ತಾನ್ ಜೀ ಗುಂಟಾ ರಸ್ತೆ, ಕನ್‌ಫಿಟ್ ರಸ್ತೆ, ಇಂಡಿಯನ್ ಎಕ್ಸ್‌ಪ್ರೆಸ್, ವಿಶ್ವೇಶ್ವರಯ್ಯ ಟವರ್, ಪೊಲೀಸ್ ಕಮಿಷನರ್ ಕಚೇರಿ.

ಒ.ಪಿ.ಎಚ್. ರಸ್ತೆ, ಮೀನಾಕ್ಷಿ ಕೋಯಿಲ್ ರಸ್ತೆ, ರಸಲ್ ಮಾರ್ಕೆಟ್, ಮುತ್ತಾಲಮ್ಮ ಕಾಯಿಲ್ ಸ್ಟ್ರೀಟ್, ಮಕನ್ ರಸ್ತೆ, ಎನ್‌ಪಿ ಸ್ಟ್ರೀಟ್, ಜೈನ್ ಟೆಂಪಲ್ ರಸ್ತೆ, ನಾರಾಯಣಪಿಳ್ಳೆ ಸ್ಟ್ರೀಟ್, ಸೇಂಟ್ ಜಾನ್ಸನ್ ಚರ್ಚ್ ರಸ್ತೆ, ಆರ್.ಎನ್. 13 ನೇ ಸ್ಟ್ರೀಟ್, ಕುಕ್ಸ್ ರಸ್ತೆ, ಕಮರ್ಷಿಯಲ್ ಸ್ಟ್ರೀಟ್, ಜುಮ್ಮಾ ಮಸೀದಿ ರಸ್ತೆ,ಡಿ.ಕೆ. ಸ್ಟ್ರೀಟ್, ಆಸ್ಪತ್ರೆ ರಸ್ತೆ, ಯೂನಿಯನ್ ಸ್ಟ್ರೀಟ್, ಪ್ಲೇಸ್ ಸ್ಟ್ರೀಟ್, ಪಾರ್ಕ್ ರಸ್ತೆ,ಲೇಡಿ ಕರ್ಜನ್ ಬೋರಿಂಗ್ ಆಸ್ಪತ್ರೆ, ಕ್ವೀನ್ಸ್ ರಸ್ತೆ, ಜಸ್ಮಾ ಭವನ ರಸ್ತೆ, ರಾಜಭವನ ರಸ್ತೆ, ಬಂಬೂ ಬಜಾರ್, ಜಯಮಹಲ್ ಬಡಾವಣೆ, ಬೆನ್ಸನ್ ಟೌನ್, ನೇತಾಜಿ ರಸ್ತೆ,ಕೋಲ್ಸ್ ರಸ್ತೆ, ಫ್ರೇಜರ್ ಟೌನ್, ಮುನಿರೆಡ್ಡಿಪಾಳ್ಯ ಮತ್ತು ಸುತ್ತಮುತ್ತಲಿನ ಪ್ರದೇಶಗಳು.

ನಂದಿನಿ ಲೇಔಟ್: ರಾಮಕೃಷ್ಣನಗರ ಲೇಔಟ್, ರೈಲ್ವೆ ಲೇಔಟ್, ಕಂಠೀರವನಗರ, ಕಂಠೀರವ ಸ್ಟುಡಿಯೋ ಪ್ರದೇಶಗಳು, ಜೈ ಭುವನೇಶ್ವರಿನಗರ, ಯಶವಂತಪುರ, ಕೈಗಾರಿಕಾ ಪ್ರದೇಶ, ಕೃಷ್ಣಾನಂದ ನಗರ, ವಿಜಯಾನಂದ ನಗರ, ನಂದಿನಿ ಲೇಔಟ್, ವಸತಿ ಗೃಹದ ಪ್ರದೇಶಗಳು, ಎಂ.ಎಫ್. ವಸತಿಗೃಹಗಳು, ಎಲ್.ಎಸ್. ವಸತಿ ಗೃಹಗಳು, ಎಲ್‌ಐಸಿ ವಸತಿಗೃಹಗಳು, ಎಟಿಎಂಸಿ ವಸತಿ ಗೃಹಗಳು, ಕಾರ್ಪೊರೇಷನ್ ಬ್ಯಾಂಕ್ ವಸತಿ ಗೃಹಗಳು, ಸರಸ್ವತಿಪುರ, ಗೆಳೆಯರ ಬಳಗ, ಜೆ.ಸಿ. ನಗರ, ಕುರುಬರಹಳ್ಳಿ, ಗಣೇಶ ಬ್ಲಾಕ್, ಜೈ ಮಾರುತಿ ನಗರ, ಗೊರಗುಂಟೆಪಾಳ್ಯ, ಸಾಕಮ್ಮಬಡಾವಣೆ, ಬಿಎಚ್‌ಇಎಲ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

ಬೆಂಗಳೂರು ನಗರವಾಸಿಗಳ ನಿತ್ಯ ಅನುಭವವನ್ನು ಆಧರಿಸಿ ಹೇಳುವುದಾದರೆ ಈ ಮೇಲ್ಕಂಡ ಪ್ರದೇಶಗಳಲ್ಲದೆ ಬೇರೆ ಬೇರೆ ಬಡಾವಣೆಗಳಲ್ಲಿ ವಿದ್ಯುತ್ ಕಣ್ಣಾ ಮುಚ್ಚಾಲೆ ಆಟ ಆಡಬಹುದು - ದಟ್ಸ್ ಕನ್ನಡ.ಕಾಂ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X