ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೂರರ ನೋಟಿಗಾಗಿ ಮಗಳ ಬಲಿ

By Mahesh
|
Google Oneindia Kannada News

Orissa crime beat
ಕಟಕ್, ಮೇ.14: ಇಲ್ಲಿನ ಮಾಲ್ ಗೋಡಾನ್ ನಲ್ಲಿ ಕೇವಲ ನೂರು ರುಪಾಯಿ ನೋಟಿಗೆ ಒಂದು ಕೊಲೆ ನಡೆದಿದೆ. 100 ರು ನೋಟು ಕಳೆದು ಹಾಕಿದ ಮಗಳ ಮೇಲೆ ಕ್ರೋಧಗೊಂಡ ಪಾಪಿ ತಂದೆ ನೀಡಿದ ಒಂದು ಕಪಾಳ ಮೋಕ್ಷ, 9 ವರ್ಷದ ಬಾಲಕಿಯ ಜೀವ ಹರಣ ಮಾಡಿದ ಘಟನೆ ನಡೆದಿದೆ. ಈ ದುರ್ಘಟನೆಯ ಬಗ್ಗೆ ಅರಿವಿಲ್ಲ ಎಂದು ಮೃತ ಬಾಲಕಿಯ ತಾಯಿ ಹೇಳಿಕೆ ನೀಡಿದ್ದಾರೆ.

ತಂದೆಯ ಹೊಡೆತದ ರಭಸಕ್ಕೆ ಬೆಚ್ಚಿದ ಬಾಲಕಿ, ಕುಸಿದು ಬಿದ್ದು ಮೂರ್ಛೆ ಹೋದಳು. ಆಮೇಲೆ ಆಸ್ಪತ್ರೆಗೆ ಸಾಗಿಸಲಾಯಿತ್ತಾದರೂ ಪ್ರಯೋಜನವಾಗಲಿಲ್ಲ ಎಂದು ಪ್ರತ್ಯಕ್ಷ ದರ್ಶಿಗಳು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ನತದೃಷ್ಟ ಬಾಲಕಿಯನ್ನು ಕೊಂದ ಅಪ್ಪನ ಹೆಸರು ಬೃಂದಬನ್ ಬೆಹೆರಾ, ವೃತ್ತಿಯಲ್ಲಿ ರಿಕ್ಷಾ ಚಾಲಕ. ಇದು ಉದ್ದೇಶರಹಿತವಾದ ಕೊಲೆಯಾದರೂ ಭಾರತೀಯ ದಂಡ ಸಂಹಿತೆ 304 ರ ಪ್ರಕಾರ ಸ್ವಯಂ ಪ್ರೇರಣೆಯಿಂದ ಪ್ರಕರಣ ದಾಖಲು ಮಾಡಬಹುದಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X