ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

18 ಹೈಕೋರ್ಟ್ ನ್ಯಾಯಮೂರ್ತಿಗಳ ಆಸ್ತಿ ಘೋಷಣೆ

By Prasad
|
Google Oneindia Kannada News

Karnataka High Court, Bengaluru
ಬೆಂಗಳೂರು, ಮೇ 13 : ನ್ಯಾಯಮೂರ್ತಿಗಳು ಕೂಡ ಆಸ್ತಿ ವಿವರವನ್ನು ಬಹಿರಂಗಪಡಿಸಬೇಕು ಮತ್ತು ನ್ಯಾಯಾಂಗದಲ್ಲಿ ಪಾರದರ್ಶಕತೆ ತರಬೇಕೆಂದು ಆಗ್ರಹಿಸಿ ನ್ಯಾಯಾಂಗ ವ್ಯವಸ್ಥೆಯಲ್ಲಿ ಬಿರುಗಾಳಿ ಎಬ್ಬಿಸಿದ್ದ ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿ ಡಿವಿ ಶೈಲೇಂದ್ರ ಹಾಕಿಕೊಟ್ಟ ದಾರಿಯಲ್ಲೇ ರಾಜ್ಯ ಹೈಕೋರ್ಟಿನ 18 ನ್ಯಾಯಮೂರ್ತಿಗಳು ನಡೆದಿದ್ದು, ತಮ್ಮ ಆಸ್ತಿ ವಿವರಗಳನ್ನು ಘೋಷಿಸಿದ್ದಾರೆ.

ಇವರ ಆಸ್ತಿ ವಿವರ ಬಹಿರಂಗದಿಂದಾಗಿ ರಾಜ್ಯದಲ್ಲಿ ಆಸ್ತಿ ವಿವರ ನೀಡಿದ ನ್ಯಾಯಮೂರ್ತಿಗಳ ಸಂಖ್ಯೆ 19ಕ್ಕೇರಿದೆ. ಈಮೊದಲು ಆಸ್ತಿ ವಿವರ ನೀಡಿ ನ್ಯಾ.ಡಿವಿ ಶೈಲೇಂದ್ರ ಸಂಚಲನ ಉಂಟುಮಾಡಿದ್ದರು. ಎಲ್ಲ ನ್ಯಾಯಮೂರ್ತಿಗಳ ಆಸ್ತಿ ವಿವರಗಳು ಕರ್ನಾಟಕ ಉಚ್ಚ ನ್ಯಾಯಾಲಯದ ಅಂತರ್ಜಾಲ ತಾಣದಲ್ಲಿ ಲಭ್ಯವಿವೆ.

ನ್ಯಾಯಮೂರ್ತಿಗಳಾದ ಮಂಜುಳಾ ಚೆಲ್ಲೂರ್, ಕೆ. ಶ್ರೀಧರ ರಾವ್, ಎನ್ ಕುಮಾರ್, ಕೆ ಭಕ್ತವತ್ಸಲ, ಮೋಹನ್ ಶಾಂತನ ಗೌಡರ್, ಎಚ್ ಬಿಲ್ಲಪ್ಪ, ಎಸ್ ಅಬ್ದುಲ್ ನಜೀರ್, ಬಿಎಸ್ ಪಾಟೀಲ್, ವಿ ಜಗನ್ನಾಥನ್, ಸಿಆರ್ ಕುಮಾರಸ್ವಾಮಿ, ಅಶೋಕ್ ಬಿ ಹಿಂಚಿಗೇರಿ, ಎಎಸ್ ಬೋಪಣ್ಣ, ಎನ್ ಆನಂದ, ಎಎನ್ ವೇಣುಗೋಪಾಲ ಗೌಡ, ಅರಳಿ ನಾಗರಾಜ್, ಎಎಸ್ ಪಾಚಾಪುರೆ, ಕೆಎನ್ ಕೇಶವ್ ನಾರಾಯಣ ಮತ್ತು ಅರವಿಂದ್ ಕುಮಾರ್ ಇವರು ಆಸ್ತಿ ವಿವರ ಬಹಿರಂಗಪಡಿಸಿದ್ದಾರೆ.

ಕೆಲ ನ್ಯಾಯಮೂರ್ತಿಗಳು ತಮ್ಮ ಹೆಂಡತಿ ಮತ್ತು ಮಕ್ಕಳ ಹೆಸರಲ್ಲಿರುವ ಚರಾಸ್ತಿ, ಸ್ಥಿರಾಸ್ತಿ, ಶೇರು, ಮ್ಯೂಚುವಲ್ ಫಂಡುಗಳಲ್ಲಿನ ಹೂಡಿಕೆ ಮುಂತಾದವುಗಳ ವಿವರಗಳನ್ನು ಕೂಡ ನೀಡಿದ್ದಾರೆ. ಹೈಕೋರ್ಟಿನ ಇನ್ನೂ 19 ನ್ಯಾಯಮೂರ್ತಿಗಳು ತಮ್ಮ ಆಸ್ತಿ ಮತ್ತು ಹೊರೆಗಳ ವಿವರಗಳನ್ನು ಇನ್ನೂ ಪ್ರಕಟಿಸಬೇಕಾಗಿದೆ. ತಮಿಳುನಾಡಿನಲ್ಲಿ ಅಕ್ರಮವಾಗಿ ಸರಕಾರಿ ಜಮೀನನ್ನು ಕಬಳಿಸಿದ್ದಾರೆಂಬ ಆರೋಪಕ್ಕೆ ಗುರಿಯಾಗಿರುವ ನ್ಯಾ. ಪಿಡಿ ದಿನಕರನ್ ಆಸ್ತಿ ಬಹಿರಂಗಪಡಿಸದವರಲ್ಲಿ ಪ್ರಮುಖರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X