ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾಗತಿಕ ಫುಟ್ಬಾಲ್ ಸಮರ 2010 ಮುನ್ನೋಟ

By Mahesh
|
Google Oneindia Kannada News

Zakumi , 	 FIFA World Cup mascot
ಜೋಹಾನ್ಸ್ ಬರ್ಗ್, ಮೇ.13: ಟ್ವೆಂಟಿ20 ವಿಶ್ವ ಕಪ್ ಕ್ರಿಕೆಟ್ ಪ್ರಸಾರದ ಮಧ್ಯೆಯಲ್ಲಿ ಆಗಾಗ ವರ್ಲ್ಡ್ ಕಪ್ ಸಾಕರ್ ನ ಕುರಿತ ಹಾಡು, ಜಾಹೀರಾತು ನೋಡಿರಬಹುದು. 19 ನೇ ಫೀಫಾ ವಿಶ್ವಕಪ್ ಜಾಗತಿಕ ಸಮರಕ್ಕೆ ದಕ್ಷಿಣ ಆಫ್ರಿಕಾ ಸಜ್ಜಾಗಿದ್ದು, ಜೂನ್11 ರಿಂದ ಜುಲೈ 11 ರವರೆಗೂ ಪಂದ್ಯಾವಳಿಗಳು ನಡೆಯಲಿವೆ.

ಮೊಟ್ಟಮೊದಲ ಬಾರಿಗೆ ಆಫ್ರಿಕನ್ ದೇಶದಲ್ಲಿ ಮಹತ್ವದ ಟೂರ್ನಿ ಆಯೋಜನೆಗೊಂಡಿರುವುದು ಈ ಬಾರಿ ವಿಶ್ವಕಪ್ ವಿಶೇಷ. ಕಳೆದ ಬಾರಿಯ ಚಾಂಪಿಯನ್ ಇಟಲಿ, ಈ ಬಾರಿ ಕೂಡ ಉತ್ತಮ ಲಯದಲ್ಲಿದ್ದು, ಪ್ರಶಸ್ತಿ ಗೆಲ್ಲುವ ಫೇವರಿಟ್ ಎನ್ನಿಸಿದೆ. ಫೀಫಾ ಶ್ರೇಯಾಂಕಿತ 208 ತಂಡಗಳಲ್ಲಿ 204 ದೇಶಗಳು ವಿಶ್ವಕಪ್ ಅರ್ಹತೆ ಪಡೆಯಲು ಸೆಣಸಾಟ ನಡೆಸಿ, ಕೊನೆಗೆ 32 ತಂಡಗಳು ಉಳಿದವು ಎಂದರೆ ಫುಟ್ಬಾಲ್ ಆಟದ ಜಾಗತಿಕ ಪ್ರಾಬಲ್ಯವನ್ನು ಊಹಿಸಬಹುದು.

ವಿಡಿಯೋ: ಫೀಫಾ ವಿಶ್ವಕಪ್ ಫುಟ್ಬಾಲ್ 2010 ಆಶಯ ಗೀತೆ

ಕೇಪ್ ಟೌನ್, ಡರ್ಬನ್, ಜೋಹಾನ್ಸ್ ಬರ್ಗ(ಎರಡು ಮೈದಾನಗಳು), ಕಿಂಬರ್ಲಿ, ಬ್ಲೊಂಫೌಂಟೇನ್, ಓರ್ಕ್ನೆ,ನೆಲ್ಸ್ ಪ್ರುಟ್, ಪೊಲ್ಕ್ವನೆ, ಪೋರ್ಟ್ ಎಲಿಜಬತ್, ರುಸ್ಟನ್ ಬರ್ಗ್ ಹಾಗೂ ಪ್ರಿಟ್ರೋರಿಯಾದಲ್ಲಿ ಪಂದ್ಯಾವಳಿಗಳು ನಡೆಯಲಿವೆ. ಜೂನ್ 11 ರಂದು ಉದ್ಘಾಟನಾ ಪಂದ್ಯದಲ್ಲಿ ಅತಿಥೇಯ ದಕ್ಷಿಣ ಆಫ್ರಿಕಾವನ್ನು ಮೆಕ್ಸಿಕೋ ತಂಡ ಎದುರಿಸಲಿದೆ. ಜಕುಮಿ (Zakumi) ಫೀಫಾ ವಿಶ್ವಕಪ್ 2010ರ ಅಧಿಕೃತ ಲಾಂಛನವಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X