ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

12 ಸಾವಿರ ಹಳ್ಳಿಗಳಿಗೆ ಎಸ್ ಬಿಐ ಜಾಲ ವಿಸ್ತರಣೆ

By Mahesh
|
Google Oneindia Kannada News

ನವದೆಹಲಿ, ಮೇ.12: ದೇಶದ ಅತೀ ದೊಡ್ಡ ಬ್ಯಾಂಕ್ ಆಗಿರುವ ಎಸ್ ಬಿಐ ದೇಶದಲ್ಲಿ 2000 ಕ್ಕಿಂತಲೂ ಜನಸಂಖ್ಯೆ ಕಡಿಮೆ ಇರುವ 11,943 ಹಳ್ಳಿಗಳಿಗೆ ಈ ಹಣಕಾಸು ವರ್ಷದಲ್ಲಿ ಬ್ಯಾಂಕಿಂಗ್ ಸೇವೆ ಒದಗಿಸಲು ಮುಂದಾಗಿದೆ. ಈ ಕುರಿತು ತನ್ನ ಯೋಜನೆಯನ್ನು ರಿಸರ್ವ್ ಬ್ಯಾಂಕಿಗೆ ಸಲ್ಲಿಸಿದೆ.

ರಿಸರ್ವ್ ಬ್ಯಾಂಕು ಈ ಹಿಂದೆ ಎಲ್ಲಾ ಬ್ಯಾಂಕ್ ಗಳೂ ತಮ್ಮ ಆಡಳಿತ ಮಂಡಳಿಯಿಂದ ಅನುಮೋದನೆಗೊಂಡ ಯೋಜನೆಗಳನ್ನು ಹಾಗೂ ಬ್ಯಾಂಕ್ ಇಲ್ಲದ ಸ್ಥಳಗಳಿಗೆ ಬ್ಯಾಂಕ್ ಸೇವೆ ನೀಡುವ ಯೋಜನೆಯನ್ನೂ ಸಲ್ಲಿಸುವಂತೆ ಕೋರಿತ್ತು. ದೇಶದಲ್ಲಿರುವ 6 ಲಕ್ಷ ಹಳ್ಳಿಗಳಲ್ಲಿ, 2,000ಕ್ಕಿಂತ ಅಧಿಕ ಜನಸಂಖ್ಯೆ ಹೊಂದಿರುವ 64,000 ಹಳ್ಳಿಗಳಲ್ಲಿ ಸರಿಯಾದ ಬ್ಯಾಂಕಿಂಗ್ ಸೌಲಭ್ಯಗಳಿಲ್ಲ. ಎಸ್ ಬಿಐ ನ ಉದ್ದೇಶಿತ ಬ್ಯಾಂಕಿಂಗ್ ಯೋಜನೆ ಅದಕ್ಕೆ ಕಷ್ಟವಾಗಲಾರದು.

ಏಕೆಂದರೆ ಎಸ್ ಬಿಐ ಈಗಾಗಲೇ ಬ್ಯಾಂಕಿಂಗ್ ಸವಲತ್ತು ಇಲ್ಲದ 1 ಲಕ್ಷ ಹಳ್ಳಿಗಳಿಗೆ ಬ್ಯಾಂಕಿಂಗ್ ಸೇವೆ ಒದಗಿಸುವಲ್ಲಿ ಸಫಲವಾಗಿದೆ. ಉದ್ದೇಶಿತ ಯೋಜನೆಯಲ್ಲಿ ಎಸ್ ಬಿಐ 512 ಹಳ್ಳಿಗಳಲ್ಲಿ ನೂತನವಾಗಿ ಬ್ಯಾಂಕ್ ಶಾಖೆ ತೆರೆಯಲಿದ್ದು, ಇತರ ಹಳ್ಳಿಗಳಲ್ಲಿ ವ್ಯಾಪಾರಿ ಬಾತ್ಮೀದಾರರ ಮೂಲಕ ಬ್ಯಾಂಕಿಂಗ್ ಸೇವೆ ನೀಡಲಿದೆ. ಈ ಸೇವೆ ಬಳಸಿಕೊಳ್ಳುವ ಗ್ರಾಹಕರು ಶುಲ್ಕ ನೀಡಬೇಕಾಗುತ್ತದೆ ಎಂದು ಬ್ಯಾಂಕಿನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಬ್ಯಾಂಕ್ ಆಫ್ ಇಂಡಿಯಾ ಜಾಲ ವಿಸ್ತರಣೆ: ಸಾರ್ವಜನಿಕ ರಂಗದ ಇತರ ಬ್ಯಾಂಕ್ ಗಳೂ ತಮ್ಮ ವ್ಯವಹಾರ ವಿಸ್ತರಣೆಗೆ ಮುಂದಾಗಿವೆ. ಬ್ಯಾಂಕ್ ಆಫ್ ಇಂಡಿಯಾ ಮುಂದಿನ ಮೂರು ವರ್ಷಗಳಲ್ಲಿ 7000 ಹಳ್ಳಿಗಳಿಗೆ ಬ್ಯಾಂಕಿಂಗ್ ಸೇವೆ ಒದಗಿಸಲು ಮುಂದಾಗಿದ್ದು ಇದರಲ್ಲಿ 2100 ಹಳ್ಳಿಗಳಿಗೆ ಮಾರ್ಚ್ 2011 ರ ಒಳಗೆ ಸೇವೆ ನೀಡಲಿದೆ. ಬ್ಯಾಂಕ್ ಆಫ್ ಬರೋಡ ಕೂಡ 2,000 ಕ್ಕಿಂತ ಅಧಿಕ ಜನಸಂಖ್ಯೆ ಇರುವ 3000 ಹಳ್ಳಿಗಳಿಗೆ ಬ್ಯಾಂಕಿಂಗ್ ಸೇವೆ ನೀಡಲು ಮುಂದಾಗಿದೆ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಕೂಡ 4,500 ಹಳ್ಳಿಗಳಿಗೆ ವಾರಕ್ಕೊಂದು ಬಾರಿ ಬ್ಯಾಂಕಿಂಗ್ ಸೇವೆ ನೀಡಲು ಯೋಜನೆ ಹಾಕಿಕೊಂಡಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X