ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾಜನತೆಗೆ ರೆಡ್ಡಿ ಬರೆದ ಶ್ವೇತಪತ್ರ

By * ಜಿ. ಜನಾರ್ದನ ರೆಡ್ಡಿ, ಬೆಂಗಳೂರು
|
Google Oneindia Kannada News

G Janardhana Reddy
ಕರ್ನಾಟಕದ ನಾನಾ ಮಾಧ್ಯಮ ವೇದಿಕೆಗಳಲ್ಲಿ ಬಿಂಬಿತವಾಗಿರುವಂತೆ ತಾವು ಕಳ್ಳರಲ್ಲ, ಸುಳ್ಳರಲ್ಲ, ಸುಲಿಗೆಕೋರರಲ್ಲ, ಡಕಾಯಿತರಂತೂ ಅಲ್ಲವೇ ಅಲ್ಲ. ನಾವು ಮಹಾತ್ಮಾ ಗಾಂಧೀಜಿ ತಿಳಿಸಿಕೊಟ್ಟ ತತ್ವಗಳಲ್ಲಿ ನಂಬಿಕೆ ಇಟ್ಟ ಮಂದಿ. ಈ ನೆಲದ ಕಾನೂನು ಮತ್ತು ನಿಯಮಾವಳಿಗಳನ್ನು ಎಂದೂ ಮೀರಿ ನಡೆದವರಲ್ಲ ಎಂದು ಜಿ. ಜನಾರ್ದನ ರೆಡ್ಡಿ ಅವರು ಸಾರಿ ಹೇಳಿದ್ದಾರೆ. ತಮ್ಮ ವಾದಕ್ಕೆ ಪೂರಕವಾಗುವ ಸರ್ವೋಚ್ಚ ನ್ಯಾಯಾಲಯದ ತೀರ್ಪುಗಳನ್ನು ಉದಾಹರಿಸಿ ಮಾಧ್ಯಮಗಳಿಗೆ, ಹಾದಿರಂಪ ಬೀದಿರಂಪ ರಂಪಮಾಡಿದ ಡಿ. ದೇವೇಗೌಡರಿಗೆ ಹಾಗೂ ಸಿದ್ದರಾಮಯ್ಯನವರಿಗೆ ಮತ್ತು ಬೌದ್ಧಿಕ ಮಟ್ಟದಲ್ಲಿ ಟೀಕಾಸ್ತ್ರಗಳನ್ನು ಎಸೆದ ಯುಆರ್ ಅನಂತಮೂರ್ತಿಯವರನ್ನು ಪರೋಕ್ಷವಾಗಿ ಉದ್ದೇಶಿಸಿ ರೆಡ್ಡಿ ಬರೆದಿರುವ ಓಲೆಯನ್ನು ಇಲ್ಲಿ ಯಥಾವತ್ತಾಗಿ ನೀಡಲಾಗಿದೆ. ಓದಿ, ಪರಾಂಬರ್ಷಿಸಿ - ಸಂಪಾದಕ.

* ಜಿ. ಜನಾರ್ದನ ರೆಡ್ಡಿ, ಬೆಂಗಳೂರು

ನನ್ನ ಆತ್ಮೀಯ ಸಮಸ್ತ ಪತ್ರಕರ್ತ ಮಿತ್ರರೇ,

ಕಳೆದ ಕೆಲವು ದಿನಗಳಿಂದ ನಾನು ತಮ್ಮ ಎದುರಿಗೆ ನನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಬರದೆ ಇರುವುದಕ್ಕೆ ಸಾಕಷ್ಟು ಕಾರಣಗಳು ಇವೆ. ದೊಡ್ಡವರು ಹೇಳುವ ಹಾಗೆ ತಾಳಿದವನು ಬಾಳಿಯಾನು ಎಂಬಂತೆ ಸತ್ಯ, ನಿಷ್ಠೆ, ಪ್ರಾಮಾಣಿಕತೆಯಲ್ಲಿ ವಿಶ್ವಾಸ ಇಟ್ಟವರು ನಾವು. ಸತ್ಯಕ್ಕೆ ಕೊನೆಗಾದರೂ ಜಯ ಲಭಿಸುತ್ತದೆ ಎಂಬ ಮಹಾತ್ಮಾಗಾಂಧಿಜೀಯವರ ತತ್ವ ಸಿದ್ದಾಂತಗಳನ್ನು ನಂಬಿದವರು ನಾವು.

ಕಳೆದ ಹಲವಾರು ತಿಂಗಳಿನಿಂದ ನನ್ನ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿ ಇಡೀ ದೇಶದಲ್ಲಿ ನನ್ನನ್ನು ಮತ್ತು ನನ್ನ ಕುಟುಂಬ ಸದಸ್ಯರನ್ನು ಖಳ ನಾಯಕರ ರೀತಿಯಲ್ಲಿ ಬಿಂಬಿಸಿದ ಮಹಾನ್ ನಾಯಕರೆಂದು ಕರೆಸಿಕೊಳ್ಳುವ ವಿವಿಧ ಪಕ್ಷದ ನಾಯಕರು, ಮಹಾನ್ ಪಂಡಿತರೆಂದು ತಮ್ಮಷ್ಟಕ್ಕೆ ತಾವೇ ತಿಳಿದುಕೊಂಡಿರುವ ಬುದ್ಧಿಜೀವಿಗಳಿಗೆ ಈಗಲಾದರೂ ಜ್ಞಾನೋದಯವಾಗಲಿದೆ ಎಂದು ನಂಬಿದ್ದೇನೆ.

ನನಗೆ ಅತ್ಯಂತ ಕಳವಳಕಾರಿ ಮತ್ತು ದುಃಖದ ಸಂಗತಿ ಏನೆಂದರೆ ಪತ್ರಿಕಾ ಮತ್ತು ದೃಶ್ಯ ಮಾಧ್ಯಮಗಳ ಮುಖಾಂತರ ತಪ್ಪು ಮಾಹಿತಿಯಿಂದ ಇಡೀ ದೇಶದ ಜನರನ್ನೇ ದಾರಿ ತಪ್ಪಿಸಲು ಕಾರಣೀಭೂತರಾದ ಮಹಾನ್ ನಾಯಕರುಗಳು, ಕೆಲವು ಬುದ್ದಿಜೀವಿಗಳಿಗೆ, ಮೊನ್ನೆ ಪ್ರಕಟವಾದ ಈ ತೀರ್ಪಿನಿಂದಾದರೂ ಜ್ಞಾನೋದಯವಾಗಲಿ. ಭವಿಷ್ಯದಲ್ಲಿ ಈ ರೀತಿ ನನ್ನ ಹಾಗೇ ಇನ್ನೊಬ್ಬ ವ್ಯಕ್ತಿಗೆ ಆಗದೇ ಇರಲಿ. ಭಗವಂತ ಇವರೆಲ್ಲರಿಗೂ ಸದ್ಬುದ್ಧಿಯನ್ನು ಕರುಣಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.

ಮುಂದೆ ಓದಿ : ನಾವು ಸುಲಿಗೆಕೋರರಾ? ದರೋಡೆಕೋರರಾ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X