ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುರುಡರಿಗೆ ದೃಷ್ಟಿ ಬರಲಿ, ಸತ್ಯಮೇವ ಜಯತೆ!

By * ಜಿ. ಜನಾರ್ದನ ರೆಡ್ಡಿ, ಬೆಂಗಳೂರು
|
Google Oneindia Kannada News

G Janardhana Reddy
ವಸ್ತುಸ್ಥಿತಿ ಹೀಗಿರುವಾಗ ನಮ್ಮ ಮೇಲೆ ಸತತವಾಗಿ ಖಾರವಾದ ಶಬ್ದಗಳಿಂದ ಪ್ರಹಾರ ನಡೆಸಿದ ನಾಯಕರುಗಳು, ವರದಿಯ ಅಂಕಿ ಅಂಶಗಳನ್ನು ಕಣ್ತೆರೆದು ನೋಡಿ ನಿಜಾಂಶವನ್ನು ಅರ್ಥಮಾಡಿಕೊಳ್ಳಲಿ ಎಂದು ತಮ್ಮ ಮುಖಾಂತರ ತಿಳಿಯ ಬಯಸುತ್ತೇನೆ.

ಈ ಐತಿಹಾಸಿಕ ತೀರ್ಪಿನಿಂದ ನಮಗೆ ಗಣಿಗಾರಿಕೆ ನಡೆಸಲು ಅನುಮತಿ ದೊರೆತದ್ದಕ್ಕಿಂತ ಹೆಚ್ಚಾಗಿ ನಾವು ಅತಿಕ್ರಮಣ ಗಣಿಗಾರಿಕೆ ನಡೆಸಿಲ್ಲ, ಅತಿಕ್ರಮಣಕೋರರಲ್ಲ, ನಾವು ಹಲವಾರು ಬಾರಿ ಹೇಳುತ್ತಾ ಬಂದಹಾಗೆ ಕಾನೂನಿನ ಚೌಕಟ್ಟಿನಲ್ಲಿ ಸರ್ಕಾರದ ನೀತಿನಿಯಮಗಳ ಅಡಿಯಲ್ಲಿ ನಾವು ಗಣಿಗಾರಿಕೆ ನಡೆಸುತ್ತಿದ್ದೇವೆಂಬುದು ಸ್ಪಷ್ಟವಾಗಿರುವುದು ನಮಗೆ ಅತ್ಯಂತ ಸಂತೋಷವಾಗಿದೆ.

ಅಂತಿಮವಾಗಿ ನನಗೆ ಸದಾ ಸಹಕಾರ ನೀಡುತ್ತ ಬಂದ ನನ್ನ ಎಲ್ಲಾ ಆತ್ಮೀಯ ಪತ್ರಕರ್ತ ಬಂಧುಗಳಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಇನ್ನಾದರೂ ನಾವು ಕಳೆದ ಹಲವಾರು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಜನಪರ, ಬಡಜನತೆಗಾಗಿ ನಡೆಸುವ ದಾಖಲೆಯ ಸಾಮೂಹಿಕ ವಿವಾಹಗಳು, ಬಳ್ಳಾರಿಯ ವೃದ್ದಾಶ್ರಮ, ಅಂಗವಿಕಲಮಕ್ಕಳಿಗೆ ತೆರೆದಿರುವ ಶಾಲೆ, ಕರ್ನಾಟಕ ಇತಿಹಾಸದಲ್ಲಿ ಬಳ್ಳಾರಿ ಎಂದೂ ಕಾಣದಂತಹ ಅಭಿವೃದ್ದಿ ನಿಮಿತ್ತ ನಾವು ಹಾಗೂ ಸಹೋದರ ಬಿ.ಶ್ರೀರಾಮುಲು ಸಾರ್ವಜನಿಕರಿಗೆ ಮಾಡುತ್ತಿರುವ ಸಹಾಯಗಳ ಕುರಿತು ಇಲ್ಲಿಯವರೆಗೆ ಈ ಕುರಿತು ಮಾತನಾಡಿದ ನಾಯಕರು, ಬುದ್ಧಿಜೀವಿಗಳು ನಮ್ಮ ಜೊತೆ ಇಂತಹ ಸಾಮಾಜಿಕ ಕಾರ್ಯಗಳಿಗೆ ಕೈ ಜೋಡಿಸಲು ಹಾಗೂ ತಾವು ಮಾಧ್ಯಮ ಸ್ನೇಹಿತರು ಸಾಮಾಜಿಕ ಕಳಕಳಿಯ ಬಗ್ಗೆ ನಮಗಿರುವ ಕಾಳಜಿಯ ಕಾರ್ಯಗಳಲ್ಲಿ ಸದಾ ತಮ್ಮ ಅಮೂಲ್ಯ ಸಲಹೆ ಸೂಚನೆಗಳನ್ನು ನೀಡುತ್ತಾ ಇರಬೇಕೆಂದು ಕೋರುತ್ತೇನೆ.

ಸತ್ಯಮೇವ ಜಯತೆ.

« ಜರ್ನಾದನ ರೆಡ್ಡಿ ಪತ್ರದ ಮೊದಲ ಭಾಗ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X