ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ವೆ ಆಫ್ ಇಂಡಿಯಾ ವರದಿಯ ಮುಖ್ಯಾಂಶಗಳು

By * ಜಿ. ಜನಾರ್ದನ ರೆಡ್ಡಿ, ಬೆಂಗಳೂರು
|
Google Oneindia Kannada News

G Janardhana Reddy
ಪುಟ 3ರಲ್ಲಿ ಆಂಧ್ರ ಮತ್ತು ಕರ್ನಾಟಕ ಅಂತಾರಾಜ್ಯ ಗಡಿ ಪ್ರದೇಶವನ್ನು ಈಗಾಗಲೇ ಗುರುತಿಸಿ ಸರ್ವೆ ಆಫ್ ಇಂಡಿಯಾ ನಕ್ಷೆಯಲ್ಲಿ ನಮೂದಿಸಲಾಗಿದೆ. ಆದರೆ ಇದಕ್ಕೆ ಎರಡೂ ರಾಜ್ಯ ಸರ್ಕಾರಗಳು ತನ್ನ ಒಪ್ಪಿಗೆಯನ್ನು ಸೂಚಿಸಿಲ್ಲ. ಈ ಎರಡೂ ಸರ್ಕಾರಗಳು ತಮ್ಮ ತಮ್ಮ ಅಭಿಪ್ರಾಯದಂತೆ ಸರಹದ್ದು ಪರಿಗಣಿಸಿ ರಾಜ್ಯ ಗಡಿಯ ಎರಡೂ ಬದಿಯಲ್ಲೂ ಗಣಿ ಗುತ್ತಿಗೆಯನ್ನು ಮಂಜೂರು ಮಾಡಿದ್ದು, ಇದರಿಂದಾಗಿ ಸರಹದ್ದಿನ ಬದಿಯ ಗಣಿ ಗುತ್ತಿಗೆದಾರರಲ್ಲಿ ಗೊಂದಲ ಮೂಡಿದೆ.

ಕರ್ನಾಟಕ ಸರ್ಕಾರ ಗಣಿ ಗುತ್ತಿಗೆ ಮಂಜೂರು ಮಾಡಿದ ಯಾವುದೇ ಪ್ರದೇಶವನ್ನು ತನ್ನದೆಂದು ಆಂಧ್ರ ಸರ್ಕಾರ ಹೇಳುತ್ತಿಲ್ಲ, ಅದೇ ರೀತಿ ಆಂಧ್ರ ಸರ್ಕಾರ ಗಣಿ ಗುತ್ತಿಗೆ ಮಂಜೂರು ಮಾಡಿದ ಪ್ರದೇಶವನ್ನು ಕರ್ನಾಟಕ ತನ್ನದೆಂದು ಹೇಳಿಲ್ಲ, ಇದು ಕೇವಲ ಅಕ್ಕಪಕ್ಕದಲ್ಲಿ ಗಣಿ ಗುತ್ತಿಗೆ ಹೊಂದಿದ ಗಣಿ ಮಾಲೀಕರ ಸರಹದ್ದಿನ ವಿವಾದವಾಗಿದೆ ಎಂದು ಇದರಿಂದ ತಿಳಿದು ಬರುತ್ತದೆ.

ವರದಿಯ 3ನೇ ಪುಟದಲ್ಲಿ ತಿಳಿಸಿರುವಂತೆ ಸ್ವಾಧೀನದಲ್ಲಿರುವ ಪ್ರದೇಶ 68.4 ಹೆಕ್ಟೇರ್. ಆದರೆ ಮಂಜೂರು ಆದದ್ದು 68.5 ಹೆಕ್ಟೇರ್.
ವರದಿಯ 4ನೇ ಪುಟದಲ್ಲಿ ಮಂಜೂರಾಗಿದ್ದು 25.98 ಹೆಕ್ಟೇರ್ ಸ್ವಾಧೀನದಲ್ಲಿರುವುದು 25 ಹೆಕ್ಟೇರ್.
ವರದಿಯ 4ನೇ ಪುಟದಲ್ಲಿ ಇನ್ನೊಂದು ಮೈನ್ಸ್‌ಗೆ ಮಂಜೂರಾಗಿದ್ದು 39.50 ಹೆಕ್ಟೇರ್ ಸ್ವಾಧೀನದಲ್ಲಿರುವುದು 38.50 ಹೆಕ್ಟೇರ್
ವರದಿಯ 5ನೇ ಪುಟದಲ್ಲಿ ತಿಳಿಸಿರುವಂತೆ ನಮ್ಮ ಪಾಲುದಾರಿಕೆಯ ಅನಂತಪುರ ಮೈನಿಂಗ್ ಕಾರ್ಪೋರೇಷನ್ (ಎ.ಎಂ.ಸಿ) ಮಂಜೂರಾಗಿದ್ದು 6.5 ಹೆಕ್ಟೇರ್ ಆದರೆ ಸ್ವಾಧೀನದಲ್ಲಿರುವುದು 6.30 ಹೆಕ್ಟೇರ್.

ಇದರಿಂದ ತಿಳಿದು ಬರುವ ವಿಷಯವೆನೆಂದರೆ ನಮ್ಮ ಓ.ಎಂ.ಸಿ ಸಂಸ್ಥೆ ಮತ್ತು ಹಾಗೂ ಅದರ ಸಹೋದರ ಸಂಸ್ಥೆ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಮಂಜೂರಾದ ಗಣಿ ಪ್ರದೇಶಕ್ಕಿಂತ ಕಡಿಮೆ ಪ್ರದೇಶ ಸ್ವಾಧೀನದಲ್ಲಿದ್ದುದು ಸ್ಪಷ್ಟವಾಗಿದೆ.

ಗಡಿ ಭಾನಗಡಿ ಮಾಡಿದವರು ನಾವಲ್ಲ, ನಾವಲ್ಲ »

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X