ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾವು ಸುಲಿಗೆಕೋರರಾ? ದರೋಡೆಕೋರರಾ?

By * ಜಿ. ಜನಾರ್ದನ ರೆಡ್ಡಿ, ಬೆಂಗಳೂರು
|
Google Oneindia Kannada News

G Janardhana Reddy
ನಮ್ಮ ಮೇಲೆ ನೂರಾರು ಎಕರೆ ಅರಣ್ಯ ಪ್ರದೇಶವನ್ನು, 40 ಕಿ.ಮೀ. ಕರ್ನಾಟಕದ ಪ್ರಾಂತ್ಯವನ್ನು ಅತಿಕ್ರಮಣ ಮಾಡಿದ ಆರೋಪ ಹೊರಿಸಲಾಗಿದೆ. ನಾವು ಆಕ್ರಮಣಕೋರರು, ಆಕ್ರಮ ಗಣಿಗಾರಿಕೆ, ಗಣಿ ಮಾಫಿಯಾದವರು, ಗಣಿ ದರೋಡೆಕೋರರು, ರೇಪ್, ಬಳ್ಳಾರಿ ಇಸ್ ಮೈನ್, ರೇಪ್ ಆಫ್ ಬಳ್ಳಾರಿ ಎಂಬ ಖಾರವಾದ ಶಬ್ದಗಳೊಂದಿಗೆ, ಹೆಡ್‌ಲೈನ್‌ಗಳೊಂದಿಗೆ ಹಲವಾರು ಬರಹಗಳು ಅನೇಕ ಪತ್ರಿಕೆ, ದೃಶ್ಯ ಮಾಧ್ಯಮಗಳಲ್ಲಿ ಪ್ರಕಟಗೊಂಡಿವೆ.

ಅಕ್ರಮ ಸಂಪಾದನೆ ಮತ್ತು ನಿರುದ್ಯೋಗ ರಾಜಕಾರಣಗಳ ಜೊತೆಗೆ ಗುರುತಿಸಿಕೊಂಡಿರುವ ಬಲ್ಡೋಟ ಎಂಬ ವ್ಯಕ್ತಿಯ ಪ್ರಚೋದನೆಯಿಂದ ಈ ಬೆಳವಣಿಗೆಗಳು ನಡೆದಿವೆ ಎಂಬುದು ಇಡೀ ಲೋಕಕ್ಕೇ ಗೊತ್ತಿದೆ. ಸಾರ್ವಜನಿಕ ಬದುಕಿನಲ್ಲಿರುವ ನಾನು ನನ್ನ ಮುಂದಿನ ಉತ್ತಮ ರಾಜಕೀಯ ಭವಿಷ್ಯವನ್ನು ಸಹಿಸಲಾಗದ ಮೈನ್ಸ್ ವೀರಪ್ಪನೆಂದು ಹೆಸರು ಪಡೆದ ವ್ಯಕ್ತಿಯಿಂದ ಆರ್ಥಿಕ ಸಹಾಯ ಪಡೆದ ನಿರುದ್ಯೋಗಿ ರಾಜಕಾರಣಿಗಳು ನನ್ನ, ನನ್ನ ಸಹೋದರರ ಹಾಗೂ ನನ್ನ ಗಣಿಗಾರಿಕೆ ಸಂಸ್ಥೆಗಳ ಮೇಲೆ ಇಲ್ಲ ಸಲ್ಲದ ಆರೋಪ ಮಾಡುವುದನ್ನೆ ಉದ್ಯೋಗವಾಗಿಸಿಕೊಂಡಿದ್ದಾರೆ.

ಈಗಿನ ಆಂಧ್ರಪ್ರದೇಶ ಸರ್ಕಾರ ರಾಜಕೀಯ ಕಾರಣಗಳಿಂದ ಕಾನೂನು ಬಾಹಿರವಾಗಿ ನಮ್ಮ ಕಂಪನಿ ಗಣಿಗಾರಿಕೆಯನ್ನು ಸ್ಥಗಿತಗೊಳಿಸಿದ್ದು, ಅದನ್ನು ಆಂಧ್ರದ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿ, ವಿಚಾರಣೆ ನಡೆದು, ಗಣಿಗಾರಿಕೆ ನಿಷೇಧದ ಆಂಧ್ರ ರಾಜ್ಯ ಸರ್ಕಾರದ ಆದೇಶವನ್ನು ಉಚ್ಚ ನ್ಯಾಯಾಲಯ ರದ್ದುಗೊಳಿಸಿದೆ. ಆ ಕುರಿತು ಆಂಧ್ರ ಸರ್ಕಾರ ಸರ್ವೋಚ್ಚನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿರುವುದು ತಮಗೆಲ್ಲ ತಿಳಿದ ವಿಷಯ.

ಮಾನ್ಯ ಸರ್ವೋಚ್ಚನ್ಯಾಯಾಲಯವು ನಿರಾಧಾರ ಆರೋಪಗಳನ್ನು ಕೊನೆಗಾಣಿಸಿ ನ್ಯಾಯ ಒದಗಿಸಲು ಅನಂತಪುರ ಜಿಲ್ಲೆಯ 6 ಗಣಿ ಗುತ್ತಿಗೆ ಪ್ರದೇಶಗಳನ್ನು ಸರ್ವೆ ನಡೆಸಲು ಹಲವಾರು ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ ಸಮಿತಿಯನ್ನು ರಚಿಸಿರುವುದೂ ತಮಗೆ ಗೊತ್ತಿರುವ ವಿಷಯ. ಆ ಸಮಿತಿಯು ಅತ್ಯಾಧುನಿಕ ಉಪಕರಣಗಳನ್ನು ಬಳಿಸಿ ನಮ್ಮ ಓಎಂಸಿಯ 3 ಗಣಿ ಗುತ್ತಿಗೆ ಪ್ರದೇಶಗಳನ್ನು ಮತ್ತು ನಮ್ಮ ಪಾಲುದಾರಿಕೆ ಒಂದು ಸಂಸ್ಥೆಯನ್ನು ಮತ್ತು ಇತರ ಎಸ್.ಕೆ. ಮೋದಿಯವರ (ಬಿ.ಐ.ಓಪಿ) ಹಾಗೂ ವೈ.ಎಂ. & ಸನ್ಸ್ ಅವರಿಗೆ ಸೇರಿದ 2 ಗುತ್ತಿಗೆ ಪ್ರದೇಶಗಳನ್ನು ಸರ್ವೆ ನಡೆಸಿವೆ. ಎಲ್ಲರಿಗೂ ತಿಳಿದ ಹಾಗೆ ನಮಗೆ ಓಬಳಾಪುರಂ ಗ್ರಾಮದಲ್ಲಿ 3 ಗಣಿ ಗುತ್ತಿಗೆ ಹಾಗೂ ಅಲ್ಲಿಂದ 5 ಕಿ.ಮಿ.ಅಂತರದ ಮಲಪನಗುಡಿ ಗ್ರಾಮದಲ್ಲಿ ಇನ್ನೊಂದು ಗಣಿ ಗುತ್ತಿಗೆ ಇದೆ.

ಮಾನ್ಯ ಸರ್ವೋಚ್ಚ ನ್ಯಾಯಾಲಯ ನೇಮಿಸಿದ ಸಮಿತಿಯು ಸರ್ವೆಯನ್ನು ನಡೆಸಿ ದಿನಾಂಕ 06.04.2010 ರಂದು ಒಂದು ವರದಿಯನ್ನು, ದಿನಾಂಕ 20.04.2010 ರಂದು ಇನ್ನೊಂದು ವರದಿಯನ್ನು ಸಮಿತಿ ನ್ಯಾಯಾಲಯಕ್ಕೆ ಸಲ್ಲಿಸಿದೆ. ಮಾನ್ಯ ಸರ್ವೋಚ್ಚನ್ಯಾಯಲಯ ನೇಮಿಸಿದ ಸಮಿತಿ ಸಲ್ಲಿಸಿರುವ ವರದಿಯಲ್ಲಿ ಕೆಲವು ಅಂಕಿ ಅಂಶಗಳನ್ನು ಕೆಳಗೆ ಸಲ್ಲಿಸಲಾಗಿದೆ.

ಅಂಕಿ ಅಂಶಗಳೇ ಮಾತನಾಡಲಿ

ಮಂ.ಪ್ರ : 25.98 ಹೆಕ್ಟೇರ್, ಗ್ರಾ. : ಓಬಳಾಪುರಂ, ಸ್ವಾ.ಪ್ರ: 25 ಹೆಕ್ಟೇರ್, ಕೊ.ಇ.ಪ್ರ : 0.98 ಹೆಕ್ಟೇರ್
ಮಂ.ಪ್ರ : 6.5 ಹೆಕ್ಟೇರ್, ಗ್ರಾ. : ಓಬಳಾಪುರಂ, ಸ್ವಾ.ಪ್ರ: 6.3 ಹೆಕ್ಟೇರ್, ಕೊ.ಇ.ಪ್ರ :0.2 ಹೆಕ್ಟೇರ್
ಮಂ.ಪ್ರ : 39.5 ಹೆಕ್ಟೇರ್, ಗ್ರಾ. : ಓಬಳಾಪುರಂ, ಸ್ವಾ.ಪ್ರ: 38.5 ಹೆಕ್ಟೇರ್, ಕೊ.ಇ.ಪ್ರ : 1 ಹೆಕ್ಟೇರ್
ಮಂ.ಪ್ರ : 68.5 ಹೆಕ್ಟೇರ್, ಗ್ರಾ. : ಓಬಳಾಪುರಂ, ಸ್ವಾ.ಪ್ರ: 68.4 ಹೆಕ್ಟೇರ್, ಕೊ.ಇ.ಪ್ರ : 0.1 ಹೆಕ್ಟೇರ್

ಮಂ.ಪ್ರ : ಮಂಜೂರಾದ ಪ್ರದೇಶ
ಗ್ರಾ. : ಗ್ರಾಮ
ಸ್ವಾ.ಪ್ರ : ಸ್ವಾಧೀನದಲ್ಲಿರುವ ಪ್ರದೇಶ
ಕೊ.ಇ.ಪ್ರ : ಮಂಜೂರಾದ ಪ್ರದೇಶಕ್ಕಿಂತ ಕೊರತೆ ಇರುವ ಪ್ರದೇಶ

ಈ ಮೇಲೆ ತೋರಿಸಿದ ವಿವರಗಳನ್ನು ನೋಡಿದಾಗ ಓ.ಎಂ.ಸಿ ಹಾಗೂ ಅನಂತಪುರ ಮೈನಿಂಗ್ ಕಾರ್ಪೋರೇಷನ್ ಸಂಸ್ಥೆ ತನಗೆ ಮಂಜೂರಾದ ಪ್ರದೇಶಕ್ಕಿಂತ ಹೆಚ್ಚಿನ ಪ್ರದೇಶದಲ್ಲಿ ಗಣಿಗಾರಿಕೆ ಮಾಡಿಲ್ಲ ಅಥವಾ ಅತಿಕ್ರಮಣ ನಡೆದಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಆದಾಗ್ಯೂ ನಮ್ಮ ಕಂಪನಿ ಅತಿಕ್ರಮಣ ಹಾಗೂ ಆಕ್ರಮ ಗಣಿಗಾರಿಕೆಯಲ್ಲಿ ತೊಡಗಿಲ್ಲ ಎಂದು ಹೇಳಲು ಆಂಧ್ರ ಸರ್ಕಾರದಲ್ಲಿ 9 ವರದಿಗಳಿವೆ.

ಸರ್ವೆ ಆಫ್ ಇಂಡಿಯಾ ವರದಿಯ ಮುಖ್ಯಾಂಶಗಳು »

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X