ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದೇಶೀಯರ ವಲಸೆ ನಿರ್ಬಂಧಕ್ಕೆ ಬ್ರಿಟನ್ ನಿರ್ಧಾರ

By Prasad
|
Google Oneindia Kannada News

David Cameron
ನವದೆಹಲಿ, ಮೇ 12 : ಬ್ರಿಟನ್ ನ ನೂತನ ಡೇವಿಡ್ ಕೆಮರೂನ್ ಸರ್ಕಾರ ವಿದೇಶೀಯರ ವಲಸೆಗೆ ಮಿತಿ ಹೇರಲು ನಿರ್ಧರಿಸಿದೆ.

ಈ ವಲಸೆ ನೀತಿಯಿಂದಾಗಿ ಬ್ರಿಟನ್ನಿಗೆ ವಲಸೆ ಬರುವ ಭಾರತೀಯ ತಂತ್ರಜ್ಞರು ಮತ್ತು ವಿದಾರ್ಥಿಗಳಿಗೆ ತೊಂದರೆ ಆಗುವುದು ಖಚಿತ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಮೂಡಿದೆ. ಆದರೆ, ವಲಸೆಗಾರರಿಂದ ಬ್ರಿಟನ್ ಗೆ ಅನುಕೂಲವಾಗುವಂತಿದ್ದರೆ ಮಾತ್ರ ವೀಸಾ ನೀಡಲು ಯೋಜಿಸಲಾಗಿದ್ದು, ಪ್ರತಿಭಾವಂತ ಮತ್ತು ಉತ್ತಮ ಜನರ ವಲಸೆಯನ್ನು ಪ್ರೋತ್ಸಾಹಿಸಲಾಗುತ್ತದೆ ಎಂದು ಸರ್ಕಾರ ಹೇಳಿದೆ.

ಬ್ರಿಟನ್ ನಲ್ಲಿ ಅಧಿಕಾರ ಹಿಡಿದಿರುವ ಕನ್ಸರ್ವೇಟಿವ್ ಮತ್ತು ಲಿಬರಲ್ ಡೆಮೊಕ್ರೆಟಿಕ್ ಪಕ್ಷಗಳ ಸಮ್ಮಿಶ್ರ ಸರ್ಕಾರ ಹೊಸ ವಲಸೆ ನೀತಿಯನ್ನು ಪ್ರಕಟಿಸಿದೆ. ಯೂರೋಪಿಯನ್ ಯೂನಿಯನ್ ನಿಂದ ಹೊರಗಿರುವ ರಾಷ್ಟ್ರಗಳ ನಾಗರಿಕರಿಗೆ ವಾರ್ಷಿಕ ಮಿತಿ ಹೇರಲು ಯೋಜಿಸಲಾಗಿದೆ.

ಲಿಬರಲ್ ಡೆಮೊಕ್ರೆಟಿಕ್ ಪಕ್ಷದ ವಲಸೆ ನೀತಿಯ ಪ್ರಕಾರ ಅಕ್ರಮ ವಲಸೆಗಾರರಿಗೆ ನೀಡಲಾಗಿದ್ದ 10 ವರ್ಷಗಳ ಕ್ಷಮೆಯನ್ನು ಕೈಬಿಟ್ಟಿದೆ. ಕನ್ಸರ್ವೆಟಿವ್ ಪಕ್ಷದ ವಲಸೆ ನೀತಿ ಪ್ರಕಾರ ವಲಸಿಗರ ಸಂಖ್ಯೆಯನ್ನು 1990ರ ಮಟ್ಟಕ್ಕೆ ಇಳಿಸಲಿದೆ. ವಲಸಿಗರಿಂದ ಸ್ಥಳೀಯರಿಗೆ ಹಾಗೂ ಸಾರ್ವಜನಿಕ ಸೇವೆಗಳ ಮೇಲೆ ಆಗುತ್ತಿರುವ ಪರಿಣಾಮವನ್ನು ಗಮನದಲ್ಲಿರಿಸಿಕೊಂಡು ವಲಸಿಗರಿಗೆ ವಾರ್ಷಿಕ ಮಿತಿ ಹೇರಲಿರುವದಾಗಿ ಪ್ರಕಟಿಸಿದೆ.

ಈ ವಲಸೆ ಮಿತಿ ಪ್ರತೀ ವರ್ಷವೂ ಬದಲಾಗಲಿದೆ ಎಂದು ಹೇಳಲಾಗಿದೆ. ಹೊಸ ವಲಸೆ ನೀತಿಯಲ್ಲಿ ವಿದ್ಯಾರ್ಥಿಗಳ ವೀಸಾ ನಿಯಮಾವಳಿಗಳನ್ನು ಬಿಗಿಗೊಳಿಸಲಾಗಿದೆ. ಯೂರೋಪಿಯನ್ ಯೂನಿಯನ್ ಹೊರಗಿನ ದೇಶಗಳಿಂದ ಮದುವೆ ಮಾಡಿಕೊಳ್ಳಲು ವಲಸೆ ಬರುವ ಎಲ್ಲರಿಗೂ ಇಂಗ್ಲಿಷ್ ಭಾಷೆ ಗೊತ್ತಿದ್ದರೆ ಮಾತ್ರ ವೀಸಾ ನೀಡಲು ನಿರ್ಧರಿಸಲಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X