ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗಳೂರು-ಹೈದರಾಬಾದ್‌ಗೆ ವೋಲ್ವೊ

By Mahesh
|
Google Oneindia Kannada News

ಮಂಗಳೂರು, ಮೇ 11: ಕರಾರಸಾ ಸಂಸ್ಥೆ ಮಂಗಳೂರು-1 ನೇ ಘಟಕದಿಂದ ಸಾರ್ವಜನಿಕರ ಅನುಕೂಲಕ್ಕಾಗಿ ಮಂಗಳೂರು ಹಾಗೂ ಹೈದರಾಬಾದ್ ನಡುವೆ ವೊಲ್ವೊ ಬಸ್ ಸಂಚಾರವನ್ನು ಸೋಮವಾರ ಆರಂಭಿಸಲಾಯಿತು. ಮಂಗಳೂರಿನಿಂದ ಹೊರಟ ಬಸ್ ಉಡುಪಿ-ಮಣಿಪಾಲ ಕುಂದಾಪುರ ಭಟ್ಕಳ ಅಂಕೋಲ ಹುಬ್ಬಳ್ಳಿ ಕೊಪ್ಪಳ ರಾಯಚೂರು ಜಡ್‌ಚರ್ಲ ಮಾರ್ಗವಾಗಿ ಹೈದರಾಬಾದ್‌ ಅನ್ನು ತಲುಪಲಿದೆ.

ಈ ಸಾರಿಗೆ ಮಂಗಳೂರು ಬಸ್ ನಿಲ್ದಾಣದಿಂದ ಮಧ್ಯಾಹ್ನ 1ಗಂಟೆಗೆ ಹೊರಟು ಹೈದರಾಬಾದ್‌ಗೆ ಬೆಳಗ್ಗೆ 7.30ಕ್ಕೆ ತಲುಪುವುದು. ಹಾಗೂ ಮರು ಪ್ರಯಾಣದಲ್ಲಿ ಹೈದರಾಬಾದ್ ನಿಂದ 12.30ಕ್ಕೆ ಹೊರಟು ಬೆ. 6.30 ಕ್ಕೆ ಮಂಗಳೂರು ಸೇರುತ್ತದೆ. ಈ ಹೊಸ ವ್ಯವಸ್ಥೆಯಿಂದಾಗಿ ಮಂಗಳೂರಿನಿಂದ ಹೈದರಾಬಾದ್ ಗೆ 1 ಗಂಟೆ ಹಾಗೂ 4 ಗಂಟೆಗೆ ಹಾಗೂ ಹೈದರಾಬಾದ್ ನಿಂದ 12.30 ಮತ್ತು 5 ಗಂಟೆಗೆ ವೊಲ್ವೋ ಸಾರಿಗೆಗಳು ಲಭ್ಯವಿದೆ ಎಂದು ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X