ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತ.ನಾಡು ದೇಗುಲಕ್ಕೆ ಅನುದಾನ ಕರವೇ ಕಿಡಿ

By Mahesh
|
Google Oneindia Kannada News

KaRaVe protest over cm BSY largesse to TN temples
ದಾವಣಗೆರೆ, ಮೇ.11: ತಮಿಳುನಾಡಿನ ದೇವಸ್ಥಾನಗಳ ಅಭಿವೃದ್ಧಿಗೆ 1 ಕೋಟಿ ರು ಅನುದಾನ ನೀಡಿರುವ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕ್ರಮವನ್ನು ಕರವೇ ಖಂಡಿಸಿ, ಪ್ರತಿಭಟನೆ ನಡೆಸಿದೆ. ಪ್ರವೀಣ್ ಕುಮಾರ್ ಶೆಟ್ಟಿ ನೇತೃತ್ವದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮೆರವಣಿಗೆ ನಡೆಸಿ, ಸಿಎಂ ವಿರುದ್ಧ ಘೋಷಣೆ ಕೂಗಿದರು.

ನಮ್ಮ ರಾಜ್ಯದ ನೂರಾರು ದೇಗುಲಗಳು, ಗುಡಿ ಗೋಪುರಗಳು ಪಾಳುಬಿದ್ದಿದೆ, ಸುಣ್ಣಬಣ್ಣ ಬಳಿದು ವರ್ಷಗಳೇ ಕಳೆದಿವೆ. ಸಂಬಂಧಪಟ್ಟ ಇಲಾಖೆಗೆ ಸೂಕ್ತ ಸಚಿವರೇ ನೇಮಕವಾಗಿಲ್ಲ, ಪುರಕ್ಕೆ ಹಿತವನ್ನು ಬಯಸುವ ಪುರೋಹಿತ, ಅರ್ಚಕರ ಪಾಡು ಹೇಳತೀರದು ಪರಿಸ್ಥಿತಿ ಹೀಗಿರುವಾಗ, ಯಡಿಯೂರಪ್ಪ ಅವರು ತಮಿಳುನಾಡಿನ ದೇಗುಲಗಳ ಉದ್ಧಾರಕ್ಕೆ ಭಾರಿ ಹಣ ನೀಡಿರುವುದು ಖಂಡನಾರ್ಹ ಎಂದು ಪ್ರವೀಣ್ ಕುಮಾರ್ ಶೆಟ್ಟಿ ಹೇಳಿದರು.

ಮುಜರಾಯಿ ಇಲಾಖೆಯ ಗಣತಿಯಂತೆ ಸುಮಾರು 24 ಸಾವಿರ ದೇಗುಲಗಳನ್ನು ಗುರುತಿಸಲಾಗಿದೆ. ಇದರಲ್ಲಿ ಸುಮಾರು 18 ಸಾವಿರ ದೇಗುಲಗಳಿಗೆ ಅರ್ಚಕರಿಲ್ಲ. ಇದರ ಬಗ್ಗೆ ಗಮನ ಹರಿಸದೆ, ರಾಜ್ಯದ ಅಭಿವೃದ್ಧಿಗೆ ಸದಾ ಕಂಟಕಪ್ರಾಯವಾದ ತಮಿಳುನಾಡಿನ ಅಭಿವೃದ್ಧಿಗೆ ಸಿಎಂ ಮುಂದಾಗಿರುವುದು ಹೀನ ಕೃತ್ಯ ಎಂದು ಪ್ರವೀಣ್ ಗುಡುಗಿದರು. ಮೇ ಮೊದಲವಾರದಲ್ಲಿ ತಮಿಳುನಾಡಿನ ಕಡಲೂರಿನ ದೇಗುಲಕ್ಕೆ ಸಿಎಂ ಪರಿವಾರ ತೆರಳಿತ್ತು. ಅಲ್ಲಿಂದ ಬಂದ ಕೂಡಲೇ ಅನುದಾನವನ್ನು ಘೋಷಿಸಿದ ಯಡಿಯೂರಪ್ಪ, ಈ ಬಗ್ಗೆ ಅರ್ಥಿಕ ಇಲಾಖೆಗೆ ಸೂಚನೆ ನೀಡಿದ್ದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X