ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗ್ರಾಪಂ ಅಖಾಡ : ಮತ ಹಾಕಿಸಿ ಬೈಕ್ ಗೆಲ್ಲಿ...

By Mrutyunjaya Kalmat
|
Google Oneindia Kannada News

Gram Panchayat Election
ಬೆಂಗಳೂರು, ಮೇ. 11 : ರಾಜ್ಯದ 15 ಜಿಲ್ಲೆಗಳ 2,833 ಗ್ರಾಮ ಪಂಚಾಯಿತಿಗಳಿಗೆ ಎರಡನೇ ಹಂತದ ಚುನಾವಣೆ ಬುಧವಾರ ಆರಂಭವಾಗಲಿದೆ. ಲೋಕಸಭೆ, ವಿಧಾನಸಭೆ ಚುನಾವಣೆಗಳನ್ನೂ ಮೀರಿಸುವಂತೆ ಮತದಾರರನ್ನು ಓಲೈಸುವ ನಾನಾ ಕಸರತ್ತುಗಳು, ಆಮಿಷಗಳು ನಡೆದಿವೆ. ಗ್ರಾಮ ಪಂಚಾಯಿತಿ ಚುನಾವಣೆಗೂ ಲಕ್ಷ ರುಪಾಯಿಗಳನ್ನು ಖರ್ಚು ಮಾಡುತ್ತಿರುವುದು ಸೋಜಿಗದ ಸಂಗತಿಯಾಗಿದೆ. ನೀವು ನಿಜವಾಗಿ ಚುನಾವಣೆಯ ವಾತಾವರಣ ಕಣ್ಣಾರೆ ನೋಡಬೇಕಾದರೆ ಕರ್ನಾಟಕ ಹಳ್ಳಿಗಳಿಗೆ ಹೋಗಬೇಕು. ಪೇಟೆಗಳಲ್ಲಿ ಕಾಣಿಸುವುದು ಬೆಂಜ್ ಕಾರು ಮತ್ತು ಸೂಟ್ ಕೇಸ್ ಗಳು ಮಾತ್ರ.

ಲೋಕಸಭೆ, ವಿಧಾನಸಭೆ, ಬಿಬಿಎಂಪಿ, ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ವಿಜಯೋತ್ಸವ ಆಚರಿಸಿಕೊಂಡು ಬಂದಿರುವ ಆಡಳಿತರೂಢ ಬಿಜೆಪಿಗೆ ಪ್ರತಿಷ್ಠೆಯ ಪ್ರಶ್ನೆಯಾದರೆ, ಸೋತು ಸೋತು ಸುಣ್ಣವಾಗಿರುವ ಕಾಂಗ್ರೆಸ್, ಗ್ರಾಮ ಮಟ್ಟದಲ್ಲಾದರೂ ಮರ್ಯಾದೆ ಉಳಿಸಿಕೊಳ್ಳಲು ತನ್ನ ಅಷ್ಟೂ ಶಕ್ತಿ, ಸಾಮರ್ಥ್ಯವನ್ನು ಪಣಕ್ಕಿಟ್ಟಿದೆ. ಎರಡನೇ ಹಂತದಲ್ಲಿ ನಡೆಯುತ್ತಿರುವ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಹುತೇಕ ಜಿಲ್ಲೆಗಳು ಉತ್ತರ ಕರ್ನಾಟಕಕ್ಕೆ ಸೇರಿರುವುದರಿಂದ ಜೆಡಿಎಸ್ ಅಷ್ಟಕಷ್ಟೆ. ನೇರವಾಗಿ ಹಣಾಹಣಿ ಇರುವುದು ಬಿಜೆಪಿ ಮತ್ತು ಕಾಂಗ್ರೆಸ್ ಮಾತ್ರ. ಉತ್ತರ ಕರ್ನಾಟಕ ಬಿಜೆಪಿ ಪರ ಎಂಬುದನ್ನು ಈಗಾಗಲೇ ಸಾಬೀತು ಮಾಡಿದೆ. ಈ ಕೋಟೆಯನ್ನು ಬೇಧಿಸಲು ಕಾಂಗ್ರೆಸ್ ಸಾಕಷ್ಟು ಬೆವರು ಹರಿಸಬೇಕಿದೆ.

ಬೆಳಗಾವಿ ಜಿಲ್ಲೆಯಲ್ಲಿ ಚುನಾವಣೆ ಭರಾಟೆ ಮುಗಿಲು ಮುಟ್ಟಿದ್ದು, ಮತದಾರರ ಓಲೈಕೆಗೆ ಅಭ್ಯರ್ಥಿ ನೀರಿನಂತೆ ಹಣ ಖರ್ಚು ಮಾಡುತ್ತಿದ್ದಾರೆ. 50 ಮತಗಳನ್ನು ಹಾಕಿಸಿದವರಿಗೆ ಒಂದು ಬಜಾಜ್ ಡಿಸ್ಕವರ್ ಬೈಕ್ ಹಾಗೂ 100 ಮತಗಳನ್ನು ಹಾಕಿಸಿದವರಿಗೆ ಒಂದು ಹೀರೋ ಹೊಂಡಾ ಬೈಕ್ ಗೆಲ್ಲುವ ಪ್ಲೇವಿನ್ ಅವಕಾಶವನ್ನು ಸುವರ್ಣ ಅವಕಾಶ ಮತದಾರರಿಗೆ ಸಿಕ್ಕಿದೆ. ಹಣ, ಹೆಂಡ, ಸೀರೆ, ರವಿಕೆ ಹಂಚುವುದು ಎಲ್ಲ ಕ್ಷೇತ್ರಗಳಲ್ಲೂ ಸಾಮಾನ್ಯವಾಗಿ ಕಂಡುಬರುವಂತ ದೃಶ್ಯವಾಗಿದೆ. ಒಟ್ಟಿನಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲೂ ಲಕ್ಷ ಅಲಕ್ಷವಾಗಿದ್ದು ವ್ಯವಸ್ಥೆಯನ್ನು ನಾಚಿಸುವಂತಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X