ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಳ್ಳಾರಿ ಗಣಿ ಒತ್ತುವರಿ ಭೂಭಾಗದ ಲೆಕ್ಕ

By * ರೋಹಿಣಿ ಬಳ್ಳಾರಿ
|
Google Oneindia Kannada News

Bellary mining encroachment statistics
ಬಳ್ಳಾರಿ, ಮೇ. 11: ಸುಪ್ರೀಂಕೋರ್ಟ್ ಸೋಮವಾರ ನೀಡಿರುವ ತೀರ್ಪಿನ ಆಧಾರದಲ್ಲಿ ಕರ್ನಾಟಕ - ಆಂಧ್ರದ ಗಡಿಯಲ್ಲಿ ನಡೆಯುತ್ತಿರುವ ಗಣಿ - ಗಡಿ ಒತ್ತುವರಿ ವಿವಾದದ ಪ್ರಕಾರ ಆರು ಗಣಿಗಳ ಸಂಪೂರ್ಣ ವಿವರ ಇಲ್ಲಿದೆ.

ಓಬಳಾಪುರಂ ಮೈನಿಂಗ್ ಕಾರ್ಪೊರೇಷನ್ - 25.92 ಹೆಕ್ಟೇರ್
ಓಬಳಾಪುರಂ ಮೈನಿಂಗ್ ಕಾರ್ಪೊರೇಷನ್ 2 - 38.98 ಹೆಕ್ಟೇರ್
ಅಂತರಗಂಗಮ್ಮ ಮೈನಿಂಗ್ ಕಾರ್ಪೊರೇಷನ್-3 - 68.50 ಹೆಕ್ಟೇರ್ (ಎಜಿಕೆ)

ಬಳ್ಳಾರಿ ಐರನ್ ಓರ್‍ಸ್ ಪ್ರೈವೇಟ್ ಲಿಮಿಟೆಡ್ - 27.12 ಹೆಕ್ಟೇರ್
ಅನಂತಪುರಂ ಮೈನಿಂಗ್ ಕಾರ್ಪೊರೇಷನ್ - 6.5 ಹೆಕ್ಟೇರ್
ವೈ. ಮಹಾಬಲೇಶ್ವರಪ್ಪ ಅಂಡ್ ಸನ್ಸ್ - 25 ಹೆಕ್ಟೇರ್

ಕರ್ನಾಟಕದ ಪಶ್ಚಿಮಕ್ಕೆ 100-150 ಮೀಟರ್ ಅಗಲ, 6 ಕಿಮೀ ಉದ್ದ ಒತ್ತುವರಿ ಆಗಿದ್ದನ್ನು ಸರ್ವೇ ಆಫ್ ಇಂಡಿಯಾ ಮೊದಲ ಸುತ್ತಿನ ವರದಿಯಲ್ಲಿ ದಾಖಲಿಸಿತ್ತು. ಎರಡನೇ ವರದಿಯಲ್ಲಿ ಕರ್ನಾಟಕ - ಆಂಧ್ರದ ಗಡಿರೇಖೆಯನ್ನು ಸ್ಪಷ್ಟವಾಗಿ ನಮೂದು ಮಾಡಬೇಕು ಎಂದು ವರದಿ ಮಾಡಿತ್ತು.

ಗಣಿ ಒತ್ತುವರಿ ಕುರಿತು ಓಬಳಾಪುರಂ ಮೈನಿಂಗ್ ಕಾರ್ಪೊರೇಷನ್ ಮತ್ತು ಬಳ್ಳಾರಿ ಐರನ್ ಓರ್‍ಸ್ ಪ್ರೈವೇಟ್ ಲಿಮಿಟೆಡ್ ಮಧ್ಯೆ ವಿವಾದ ಇತ್ತು. ಮತ್ತು ಈ ವಿವಾದದಿಂದಾಗಿ ಈ ಪ್ರದೇಶದ 10 ಹೆಕ್ಟೇರ್ ಪ್ರದೇಶದಲ್ಲಿ ರೆಡ್ಡಿ ಸಹೋದರರು ಅಕ್ರಮ ಗಣಿಗಾರಿಕೆ ನಡೆಸುತ್ತಿರುವುದು ಬಹಿರಂಗ ಆಗಿತ್ತು. ಆದರೆ, ಸುಪ್ರೀಂಕೋರ್ಟ್‌ನಲ್ಲಿ ಈ ವಿವಾದ ಪ್ರಸ್ತುತ ಚರ್ಚೆಗೆ ಬರುತ್ತಿಲ್ಲ ಎನ್ನಲಾಗುತ್ತಿದೆ.

ಅಂತರಗಂಗಮ್ಮ ಮೈನಿಂಗ್ ಕಾರ್ಪೊರೇಷನ್‌ನಿಂದ ಗಡಿ ಭಾಗದಲ್ಲಿ ಕರ್ನಾಟಕದ ಪ್ರದೇಶದಲ್ಲಿ 100-150 ಮೀಟರ್ ಅಗಲ, 6 ಕಿಮೀ ಉದ್ದಕ್ಕೆ ಒತ್ತುವರಿ ಆಗಿತ್ತು ಎಂದು ಸಾಬೀತಾಗಿದೆ. ಆದರೆ, ಸೋಮವಾರ ಕರ್ನಾಟಕ - ಆಂಧ್ರದ ಗಡಿ ಭಾಗದ ವಿವಾದಿತ ಪ್ರದೇಶದಲ್ಲಿ ಓಎಂಸಿ ಮತ್ತೆ ಗಣಿಗಾರಿಕೆ ಮುಂದುವರೆಸಬಹುದು ಎಂದು ಸುಪ್ರೀಂಕೋರ್ಟ್ ನ ಮುಖ್ಯ ನ್ಯಾಯಾಧೀಶ ಕೆಜಿ ಬಾಲಕೃಷ್ಣನ್ ಆದೇಶ ಹೊರಡಿಸಿರುವುದು ರೆಡ್ಡಿ ಸೋದರರಿಗೆ ಸಹಜವಾಗಿ ಹರ್ಷ ತಂದಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X