ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಮಾ ಕಂಪನಿಗಳ ಮೇಲೆ ಬಫೆಟ್ ಕಣ್ಣು

By Mahesh
|
Google Oneindia Kannada News

Warren Buffett
ನವದೆಹಲಿ, ಮೇ.10: ವಿಶ್ವದ ಅತ್ಯಂತ ಪ್ರಮುಖ ಬಂಡವಾಳ ಹೂಡಿಕೆದಾರ ವಾರೆನ್ ಬಫೆಟ್ ದೇಶದ ಸರ್ಕಾರೀ ಸ್ವಾಮ್ಯದ ವಿಮಾ ಕಂಪೆನಿಗಳಲ್ಲಿ ಪಾಲು ಪಡೆಯಲು ಯೋಜನೆ ಹಾಕಿಕೊಂಡಿರುವುದಾಗಿ ಮೂಲಗಳು ತಿಳಿಸಿವೆ . ಹೂಡಿಕೆ ಕಂಪೆನಿ ಬರ್ಕ್ ಶೈರ್ ಹಾಥವೇ ಯ ಮುಖ್ಯ ಕಾರ್ಯ ನಿರ್ವಾಹಕರಾಗಿರುವ ವಾರೆನ್ ಬಫೆಟ್ ಮುಂದಿನ ವರ್ಷ ಮಾರ್ಚ್ ನಲ್ಲಿ ಭಾರತಕ್ಕೆ ಭೇಟಿ ನೀಡಲಿದ್ದು ಆಗ ಕೇಂದ್ರ ಸರ್ಕಾರದ ಜತೆ ಪಾಲು ಪಡೆಯಲು ಮಾತುಕತೆ ನಡೆಸಲಿದ್ದಾರೆ ಎಂದು ಪ್ರಮುಖ ಬಿಸಿನೆಸ್ ದೈನಿಕ ಪತ್ರಿಕೆ ಪ್ರಕಟಿಸಿದೆ.

ದೇಶದ ಪ್ರಸಕ್ತ ಕಾನೂನಿನ ಪ್ರಕಾರ ಸರ್ಕಾರಿ ಸ್ವಾಮ್ಯದ ವಿಮಾ ಕಂಪೆನಿಗಳಾದ ನ್ಯೂ ಇಂಡಿಯಾ ಅಶೂರೆನ್ಸ್, ಯುನೈಟೆಡ್ ಇಂಡಿಯಾ ಅಶೂರೆನ್ಸ್ , ನ್ಯಾಷನಲ್ ಇನ್ಷುರೆನ್ಸ್ ಮತ್ತು ಒರಿಯೆಂಟಲ್ ಇನ್ಷುರೆನ್ಸ್ ಕಂಪೆನಿಗಳಲ್ಲಿ ಸರ್ಕಾರದ ಪಾಲನ್ನು ಕಡಿತ ಮಾಡಲು ಅವಕಾಶವಿಲ್ಲ . ಕಳೆದ ವಾರ ಮಾತನಾಡಿದ ಬಫೆಟ್ ಅವರು ಭಾರತದಲ್ಲಿ ಬರ್ಕ್ ಶೈರ್ ನ ಹೂಡಿಕೆಯ ಸಾಧ್ಯತೆ ಇದೆ ಎಂದು ಹೇಳಿದ್ದರು .

ಬರ್ಕ್ ಶೈರ್ ಕಂಪೆನಿ ವಿಮಾ ಮತ್ತು ಮರು ವಿಮಾ ಉದ್ಯಮದಲ್ಲಿ ಮೇಲುಗೈ ಸಾಧಿಸಿದ್ದು ಭಾರತದಲ್ಲಿ ವಿಮಾ ಉದ್ಯಮದಲ್ಲಿ ಅವಕಾಶಕ್ಕಾಗಿ ಎದುರು ನೋಡುತ್ತಿದೆ .ಒರಿಸ್ಸಾ ಮೂಲದ ಅಜಿತ್ ಜೈನ್ ಬರ್ಕ್ ಶೈರ್ ಹಾಥವೇ ಯ ಮರುವಿಮಾ ವಿಭಾಗದ ಮುಖ್ಯಸ್ಥರಾಗಿದ್ದು ಬಫೆಟ್ ರ ಉತ್ತರಾಧಿಕಾರಿ ಎಂದು ಬಿಂಬಿತರಾಗಿದ್ದಾರೆ . ಭಾರತದಲ್ಲಿ ವಿಮಾ ಕಂಪೆನಿಯ ಸ್ಥಾಪನೆ ಅಥವಾ ಪ್ರಮುಖ ಕಂಪೆನಿಯಲ್ಲಿ ಪಾಲು ಪಡೆಯಲು ಬಫೆಟ್ ಯೋಜನೆ ಹಾಕಿಕೊಂಡಿದೆ.

ಭಾರತದಲ್ಲಿ ವಿಮಾ ಉದ್ಯಮದಲ್ಲಿ ವಿದೇಶಿ ಹೂಡಿಕೆ ಮಿತಿ ಶೇ.26 ರಷ್ಟಿದೆ .ಸರ್ಕಾರ ವಿಮಾ ಉದ್ಯಮದಲ್ಲಿ ವಿದೇಶೀ ನೇರ ಬಂಡವಾಳ ಹೂಡಿಕೆ ಮಿತಿಯನ್ನು ಶೇ .49 ಕ್ಕೇರಿಸಿದರೂ ಬಫೆಟ್ ಕಂಪೆನಿಯ ಮುಖ್ಯಸ್ಥರಾಗುವುದು ಸಾಧ್ಯವಿಲ್ಲ. ಸರ್ಕಾರ ತನ್ನ 4 ವಿಮಾ ಕಂಪೆನಿಗಳಲ್ಲಿನ ಪಾಲನ್ನು ಮಾರಾಟ ಮಾಡಲು ಯೋಚಿಸಿಲ್ಲ, ನ್ಯೂ ಇಂಡಿಯಾ ಅಶೂರೆನ್ಸ್ ಕಂಪೆನಿ ದೊಡ್ಡ ಕಂಪೆನಿಯಾಗಿದ್ದು ದೇಶದ ಹಣಕಾಸು ರಾಜಧಾನಿ ಮುಂಬೈನಲ್ಲಿ ಕೇಂದ್ರ ಕಚೇರಿ ಹೊಂದಿದೆ .

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X