ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊಬೈಲ್ ಮಾರುಕಟ್ಟೆಗೆ ಚೀನಾ ಅಧಿಕೃತ ಎಂಟ್ರಿ

By Mahesh
|
Google Oneindia Kannada News

China Mobile mulls handset factory in India by 2012
ನವದೆಹಲಿ, ಮೇ.9: ಶೆಂಝೆನ್ ಮೂಲದ ಚೀನಾ ವೈರ್ ಲೆಸ್ ಟೆಕ್ನಾಲಜೀಸ್ ಭಾರತದಲ್ಲಿ 2012ರಲ್ಲಿ ತನ್ನ ಭಾರತೀಯ ಅಂಗ ಕಂಪೆನಿ ಕೂಲ್ ಪಾಡ್ ಟೆಕ್ನಾಲಜೀಸ್ ಜತೆಗೂಡಿ ಮೊಬೈಲ್ ಹ್ಯಾಂಡ್ ಸೆಟ್ ತಯಾರಿಕಾ ಕಾರ್ಖಾನೆ ಸ್ಥಾಪನೆಗೆ ಮುಂದಾಗಿದೆ. ಈ ಉದ್ದೇಶಿತ ಕಾರ್ಖಾನೆಯಲ್ಲಿ ಕಂಪೆನಿ 300 ರಿಂದ 400 ಕೋಟಿ ರುಪಾಯಿ ಬಂಡವಾಳ ಹೂಡಲಿದೆ. ಕೇಂದ್ರ ಸರ್ಕಾರ ಭದ್ರತೆಯ ಕಾರಣದಿಂದ ಚೀನಾದ ಮೊಬೈಲ್ ಹ್ಯಾಂಡ್ ಸೆಟ್ ಸೇರಿದಂತೆ ಇತರ ಉಪಕರಣಗಳನ್ನು ಆಮದು ಮಾಡಿಕೊಳ್ಳುವುದನ್ನು ನಿಷೇಧಿಸಿತ್ತು.

ನಂತರ ಚೀನಾದ ಮೊಬೈಲ್ ತಯಾರಕ ಪ್ರಮುಖ ಕಂಪೆನಿಗಳಾದ ಹ್ಯುವೈ ಮತ್ತು ಝಡ್ ಟಿ ಈ ಭಾರತದಲ್ಲಿ ಕಾರ್ಖಾನೆ ಆರಂಭಿಸಲು ಯೋಜನೆ ಹಾಕಿಕೊಂಡಿದ್ದು ಇದೀಗ ಚೀನಾ ಮೊಬೈಲ್ ಈ ಸಾಲಿಗೆ ಸೇರಿದೆ. ಕೂಲ್ ಪಾಡ್ ಭಾರತದಲ್ಲಿ ಮೊಬೈಲ್ ಹ್ಯಾಂಡ್ ಸೆಟ್ ತಯಾರಿಸುವ ಮೊದಲ ಚೀನಾದ ಕಂಪೆನಿ ಆಗಲಿದೆ. ಭಾರತ ವಿಶ್ವದಲ್ಲೇ ಅತೀ ವೇಗವಾಗಿ ಬೆಳೆಯುತ್ತಿರುವ ಮೊಬೈಲ್ ಮಾರುಕಟ್ಟೆ ಆಗಿದ್ದು ಪ್ರಸ್ತುತ 600 ಮಿಲಿಯನ್ ಗ್ರಾಹಕರನ್ನು ಹೊಂದಿದೆ.

ಪ್ರತೀ ವರ್ಷ ಭಾರತದಲ್ಲಿ 100 ಮಿಲಿಯನ್ ಗಳಿಗೂ ಅಧಿಕ ಮೊಬೈಲ್ ಹ್ಯಾಂಡ್ ಸೆಟ್ ಗಳು ಮಾರಾಟವಾಗುತ್ತಿದ್ದು ಇದರಲ್ಲಿ ನೋಕಿಯಾ, ಸ್ಯಾಮ್ ಸಂಗ್ ಮುಂಚೂಣಿಯಲ್ಲಿವೆ. ದೇಶಿ ಬ್ರಾಂಡ್ ಗಳಾದ ಮೈಕ್ರೊ ಮ್ಯಾಕ್ಸ್, ಕಾರ್ಬನ್ ಮತ್ತು ಲಾವ ಕೂಡ ಮಾರುಕಟ್ಟೆ ಪಾಲು ಪಡೆದಿವೆ. ಕೂಲ್ ಪಾಡ್ ಹ್ಯಾಂಡ್ ಸೆಟ್ ಮತ್ತು ಸಿಡಿಎಮ್‌ಎ ದೂರವಾಣಿಗಳನ್ನು ತಯಾರಿಸಲಿದ್ದು ಇದನ್ನು ರಿಲಯನ್ಸ್ ವೆಬ್ ಸ್ಟೋರ್ ಮೂಲಕ ಮಾರಾಟ ಮಾಡಲಿದೆ.

ಅಲ್ಲದೆ ಭಾರತದಲ್ಲಿ ಮುಂದಿನ ವರ್ಷ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರವನ್ನೂ ತೆರೆಯಲಿರುವುದಾಗಿ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಸಮಿ ಅಲ್ ಲವಾಟಿ ಹೇಳಿದರು . ರಿಲಯನ್ಸ್ ಕಮ್ಯುನಿಕೇಷನ್ಸ್ ನ ಮಳಿಗೆ ರಿಲಯನ್ಸ್ ವೆಬ್ ಸ್ಟೋರ್ ನೊಂದಿಗೆ ಸಹಯೋಗ ಕೂಲ್ ಪಾಡ್ ಮಾಡಿಕೊಂಡಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X