ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏರ್ ಇಂಡಿಯಾಗೆ ಪೈಲಟ್ ಗಳ ಕೊರತೆ

By Mahesh
|
Google Oneindia Kannada News

AI Express facing shortage of senior pilots
ಮುಂಬೈ, ಮೇ.9: ಸರ್ಕಾರೀ ಸ್ವಾಮ್ಯದ ವಿಮಾನಯಾನ ಸಂಸ್ಥೆ ಪೈಲಟ್ ಗಳ ತೀವ್ರ ಕೊರತೆಯನ್ನು ಎದುರಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಕಳೆದ 12 ತಿಂಗಳ ಅವಧಿಯಲ್ಲಿ ನಾಲ್ಕಕ್ಕೆ ಒಂದು ಭಾಗದಷ್ಟು ಪೈಲಟ್ ಗಳು ಉದ್ಯೋಗ ತೊರೆದಿರುವುದೇ ಇದಕ್ಕೆ ಕಾರಣ.

ಸಂಸ್ಥೆಯ 102 ಪೈಲಟ್ ಗಳಲ್ಲಿ 25 ಪೈಲಟ್ ಗಳು ಕೆಲಸ ತೊರೆದಿದ್ದಾರೆ. ಸಂಸ್ಥೆಯ 21 ವಿಮಾನಗಳಿಗೆ 76 ಪೈಲಟ್ ಗಳು ಮಾತ್ರವೇ ಇದ್ದು, ಪೈಲಟ್ ಗಳು ತಮ್ಮ ಗುತ್ತಿಗೆ ಅವಧಿ ಪೂರ್ಣಗೊಂಡ ನಂತರ ಹೊರ ಹೋಗಿದ್ದಾರೆ. ಇವರಲ್ಲಿ ಹೆಚ್ಚಿನ ಪೈಲಟ್ ಗಳು ವಿದೇಶಿಯರಾಗಿದ್ದು, ವಿದೇಶೀ ಪೈಲಟ್ ಗಳ ನೇಮಕಕ್ಕೆ ಕೇಂದ್ರ ಸಚಿವ ಪ್ರಫುಲ್ ಪಟೇಲ್ ನಿರ್ಬಂಧ ಹೇರಿದ್ದಾರೆ. ನಾಗರಿಕ ವಿಮಾನಯಾನ ಇಲಾಖೆಯ ಪ್ರಧಾನ ನಿರ್ದೇಶಕರು ಈ ಕುರಿತು ಜುಲೈ 31ರ ಗಡುವನ್ನು ನೀಡಿದ್ದರು.

ಈ ಹಿನ್ನೆಲೆಯಲ್ಲಿ ವಿದೇಶಿ ಪೈಲಟ್ ಗಳು ಕೆಲಸ ತೊರೆದಿದ್ದಾರೆ ಎನ್ನಲಾಗಿದೆ. ಏರ್ ಇಂಡಿಯಾ ಎಕ್ಸ್ ಪ್ರೆಸ್ 14 ಅಂತಾರಾಷ್ಟ್ರೀಯ ನಗರಗಳಿಗೆ ವಾರದಲ್ಲಿ 204 ಹಾರಾಟಗಳನ್ನು ನಡೆಸುತ್ತಿದೆ. 2008-09ರಲ್ಲಿ ಸಂಸ್ಥೆ 2.2 ಮಿಲಿಯನ್ ಪ್ರಯಾಣಿಕರನ್ನು ಸಾಗಾಟ ಮಾಡಿದ್ದು 2009-10 ರಲ್ಲಿ 2.5 ಮಿಲಿಯನ್ ಪ್ರಯಾಣಿಕರನ್ನು ಹೊತ್ತೋಯ್ದಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X