ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ಶಾಲೆಗಳನ್ನು ಮುಚ್ಚುವುದಿಲ್ಲ: ಎಂಕೆ

By Mahesh
|
Google Oneindia Kannada News

M Karunanidhi
ಚೆನ್ನೈ, ಮೇ.7: ಕರ್ನಾಟಕದ ಜತೆಗಿನ ಸಂಬಂಧ ಹದಗೆಡಿಸಲು ಮಾಧ್ಯಮಗಳು ಸೃಷ್ಟಿಸಿದ ಜಾಲದಲ್ಲಿ ಬಹುಶಃ ಯಡಿಯೂರಪ್ಪ ಸಿಕ್ಕಿಕೊಂಡಿದ್ದಾರೆ. ಭಾಷಾ ಅಲ್ಪಸಂಖ್ಯಾತರನ್ನು ನಾವು ಎಂದು ಕಡೆಗಣಿಸಿ ನೋಡಿಲ್ಲ. ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚುವ ಪ್ರಸ್ತಾಪ ನಮ್ಮ ಸರ್ಕಾರದ ಮುಂದಿಲ್ಲ ಎಂದು ತಮಿಳುನಾಡಿನ ಮುಖ್ಯಮಂತ್ರಿ ಎಂ ಕರುಣಾನಿಧಿ ಗುಡುಗಿದ್ದಾರೆ.

ಸಾಮಾನ್ಯ ಶಾಲಾ ಪದ್ಧತಿ ಅನುಸಾರವಾಗಿ ಎಲ್ಲ ಭಾಷೆಗಳನ್ನು ಕಲಿಯುವ ಅವಕಾಶವನ್ನು ನೀಡಿದ್ದೇವೆ. ಮಾಧ್ಯಮಗಳ ಮುಂದೆ ಹೇಳಿಕೆ ನೀಡುವ ಮೊದಲು ತಮಿಳುನಾಡು ಸರಕಾರದ ಜತೆ ಯಡಿಯೂರಪ್ಪ ಮಾತುಕತೆ ಮಾಡಬೇಕಿತ್ತು. ನಾವು ತಮಿಳಿನ ಮೇಲೆ ಇತರ ಭಾಷೆಗಳ ಆಕ್ರಮಣಕ್ಕೆ ಅವಕಾಶ ನೀಡುವುದಿಲ್ಲ. ಅದೇ ರೀತಿ ಇತರ ಭಾಷೆಗಳಿಗೆ ತೊಂದರೆಯಾಗುವಂತೆ ತಮಿಳನ್ನು ಪ್ರಚುರಪಡಿಸುವುದಿಲ್ಲ. ಇದು ನಮ್ಮ ನೀತಿ ಎಂದು ಕರುಣಾನಿಧಿ ಅವರು ಸದನದಲ್ಲಿ ಉತ್ತರಿಸಿದರು.

ತಮಿಳುನಾಡಿನಲ್ಲಿರುವ 53 ಕನ್ನಡ ಮಾಧ್ಯಮ ಶಾಲೆಗಳಲ್ಲಿ 3,900 ವಿದ್ಯಾರ್ಥಿಗಳು ವಿದ್ಯಾಭ್ಯಾಸ ನಡೆಸುತ್ತಿದ್ದಾರೆ. ಈ ಶಾಲೆಗಳನ್ನು ಮುಚ್ಚುವ ಯಾವುದೇ ಪ್ರಸ್ತಾಪ ನಮ್ಮ ಮುಂದಿಲ್ಲ. ಸರಕಾರವು ಇಂತಹ ಶಾಲೆಗಳಿಗೆ ಎಲ್ಲಾ ಅಗತ್ಯ ಸಹಕಾರಗಳನ್ನು ನೀಡಲಿವೆ ಎಂದು ತಮಿಳುನಾಡಿನ ಶಿಕ್ಷಣ ಸಚಿವ ತೆನ್ನರಸು ಹೇಳಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X