ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ತೆರಿಗೆ ವಂಚನೆ ಎಚ್ ಪಿಗೆ ನೋಟಿಸ್
ಗುಪ್ತಚರ ಕಂದಾಯ ನಿರ್ದೇಶನಾಲಯ ಈ ನೋಟೀಸ್ ಜಾರಿ ಮಾಡಿದ್ದು ಕಂಪೆನಿ ಸಿಂಗಪುರ, ಮತ್ತು ಅಮೆರಿಕಾದಿಂದ ಆಮದು ಮಾಡಿಕೊಳ್ಳಲಾದ ಕಂಪ್ಯೂಟರ್ ಮತ್ತು ಬಿಡಿ ಭಾಗಗಳಿಗೆ ಕಡಿಮೆ ಬೆಲೆ ನಮೂದಿಸಿದೆ ಎಂದು ಹೇಳಲಾಗಿದೆ.
ಇಲಾಖೆಯ ದೆಹಲಿ ಮತ್ತು ಬೆಂಗಳೂರಿನ ಅಧಿಕಾರಿಗಳು 2008ರ ಸೆಪ್ಟೆಂಬರ್ ನಿಂದ ತನಿಖೆ ನಡೆಸುತ್ತಿದ್ದು ಕಳೆದ 5 ವರ್ಷಗಳಿಂದ ಕಂಪೆನಿ ತೆರಿಗೆ ತಪ್ಪಿಸಿದೆ ಎಂದು ಆರೋಪಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಕಂಪೆನಿಯ ವಕ್ತಾರರು ಕಂಪೆನಿಯ ವ್ಯವಹಾರಗಳು ಪಾರದರ್ಶಕವಾಗಿದ್ದು ಈ ವಿಷಯವನ್ನು ನ್ಯಾಯಾಲಯದ ಮೂಲಕ ಬಗೆಹರಿಸಿಕೊಳ್ಳಲಾಗುವುದು ಎಂದರು.
ಕಂಪೆನಿ ಈ ತನಿಖೆ ಕೈಗೆತ್ತಿಕೊಂಡ ನಂತರ ಸ್ವಯಂ ಪ್ರೇರಿತವಾಗಿ 79 ಕೋಟಿ ರೂಪಾಯಿಗಳನ್ನು ಪಾವತಿಸಿದೆ. ಕಂದಾಯ ಗುಪ್ತಚರ ವಿಭಾಗ ದ ಅಧಿಕಾರಿಗಳು ಕಂಪೆನಿಯ ದೆಹಲಿ, ಗುರ್ ಗಾಂವ್, ಮುಂಬೈ ಹಾಗೂ ಬೆಂಗಳೂರಿನ ಕಛೇರಿಗಳಲ್ಲಿ ತನಿಖೆ ನಡೆಸಿದ್ದು ಹಿರಿಯ ಅಧಿಕಾರಿಗಳನ್ನೂ ಪ್ರಶ್ನಿಸಿದ್ದಾರೆ.
Comments
ಆದಾಯ ತೆರಿಗೆ ಐಟಿ ವಾಣಿಜ್ಯ ಎಚ್ ಪಿ ಎಲೆಕ್ಟ್ರಾನಿಕ್ ಸಿಟಿ ಬೆಂಗಳೂರು ಕ್ರೈಂ ವಂಚನೆ hp electronic city finance news crime beat income tax
Story first published: Friday, May 7, 2010, 11:39 [IST]