ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಯಕ್ ವಿರುದ್ಧ ಪುಟ್ಟಸ್ವಾಮಿ ಧಮಕಿ

By Mrutyunjaya Kalmat
|
Google Oneindia Kannada News

SR Nayak
ಬೆಂಗಳೂರು, ಮೇ. 7 : ರಾಜಕೀಯ ನಾಯಕರಂತೆ ಸರಕಾರವನ್ನು ಟೀಕಿಸುವುದನ್ನು ನಿಲ್ಲಿಸದಿದ್ದರೆ ನಿಮ್ಮ ಪದಚ್ಯುತಿ ಮಾಡುವಂತೆ ರಾಷ್ಟ್ರಪತಿ ಮತ್ತು ರಾಜ್ಯಪಾಲರಿಗೆ ದೂರು ನೀಡುತ್ತೇನೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ ಬಿಜೆ ಪುಟ್ಟಸ್ವಾಮಿ ಅವರು ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಎಸ್ ಆರ್ ನಾಯಕ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಆಯೋಗದ ಅಧ್ಯಕ್ಷರಿಗೆ ಸಂವಿಧಾನ ನೀಡಿರುವ ಕೆಲಸದಂತೆ ಮೊಕದ್ದಮೆ ವಿಚಾರಣೆ ನಡೆಸಿ ತೀರ್ಪು ನೀಡಬೇಕು. ಅದನ್ನು ಬಿಟ್ಟು ರಾಜಕಾರಣಿಯಂತೆ ಮತ್ತು ವಿರೋಧ ಪಕ್ಷಗಳ ನಾಯಕರಂತೆ ಹೇಳಿಕೆ ನೀಡಬಾರದು. ಇದು ಅವರ ವೃತ್ತಿಗೆ ಶೋಭೆ ತರುವುದಿಲ್ಲ ಎಂದರು.

ಮೂರು ದಶಕಗಳ ಕಾಲ ಹೋರಾಟದ ಮೂಲಕ ಜನಮನ್ನಣೆ ಗಳಿಸಿರುವ ಒಬ್ಬ ಮುಖ್ಯಮಂತ್ರಿಯನ್ನು ಬಹಿರಂಗ ಚರ್ಚೆಗೆ ಬರುವಂತೆ ಆಹ್ವಾನಿಸಿರುವುದು ಮತ್ತು ಮುಖ್ಯಮಂತ್ರಿಯನ್ನು ಅತ್ಯಂತ ಕೀಳು ಮಟ್ಟದಲ್ಲಿ ಟೀಕಿಸುತ್ತಿರುವುದು ನಾಯಕ್ ಅವರಿಗೆ ಇರುವ ದ್ವೇಷವನ್ನು ತೋರಿಸುತ್ತದೆ ಎಂದು ಪುಟ್ಟಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.

ನನ್ನ ಮೊದಲ ಪತ್ನಿ ಮತ್ತು ಮಕ್ಕಳ ಸಹಮತದಿಂದ ವಿಜಯಲಕ್ಷ್ಮಿಯನ್ನು ಮದುವೆಯಾದದ್ದು ನಿಜ. ಮತ್ತೆ ಬೇರ್ಪಟ್ಟಿದ್ದೂ ಹೌದು. ವಿಜಯಲಕ್ಷ್ಮಿಗೆ ನಾನು ವಂಚನೆ ಮಾಡಿದ್ದೇನೆ ಎನ್ನುವುದು ಸುಳ್ಳು. ನಮ್ಮ ವೈವಾಹಿಕ ಸಂಬಂಧ ಕೇವಲ ಮಾತುಕತೆ ಮೂಲಕವೇ ಮುರಿದು ಬಿದ್ದಿದೆ ಎಂದು ಪುಟ್ಟಸ್ವಾಮಿ ಹೇಳಿದ್ದಾರೆ. ಆ ಮದ್ಯೆ ವಿಜಯಲಕ್ಷ್ಮಿ ಅವರು, ಗುರುವಾರ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ದೂರನ್ನು ಸಲ್ಲಿಸಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X