ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಣ್ಣೀರ ಕೋಡಿ ಹರಿಸಿದ ಕಸಬ್

By Mrutyunjaya Kalmat
|
Google Oneindia Kannada News

Ajmal Amir Kasab
ಮುಂಬೈ, ಮೇ. 6 : ಮುಂಬೈ ವಿಶೇಷ ನ್ಯಾಯಾಲಯ ಗಲ್ಲು ಶಿಕ್ಷೆ ಘೋಷಣೆ ಮಾಡುತ್ತಿದ್ದಂತೆಯೇ ಉಗ್ರ ಅಜ್ಮಲ್ ಕಸಬ್ ಗಳಗಳನೆ ಅಳಲಾರಂಭಿಸಿದ.

ಮುಂಬೈ ಭಯೋತ್ಪಾದನೆಯಲ್ಲಿ 166 ಮಂದಿ ಪ್ರಾಣ ತೆಗೆದ ಈ ನೀಚನಿಗೆ ಘಟನೆಯಲ್ಲಿ ವೀರಮರಣವನ್ನಪ್ಪಿದ ಕುಟುಂಬಗಳಿಗೆ ಆಗಿರುವ ಅನ್ಯಾಯ, ನೋವು, ದುಖಃವನ್ನು ಈ ದುಷ್ಟ ತುಂಬಿ ಕೊಡಲು ಸಾಧ್ಯವೇ? ನೇಣಿಗೆ ತನ್ನ ಕುತ್ತಿಗೆ ಬೀಳಲಿದೆ ಎನ್ನುವುದು ಖಚಿತವಾದಾಗ ಪ್ರಾಣ ಕಿಮ್ಮತ್ತು ಅರಿವಾಗಿದೆ.

ಪಾಕಿಸ್ತಾನದ ಈ ಬಿಳಿಯಾನೆ ಭಾರತದಲ್ಲಿದ್ದು ಇದೀಗ 17 ತಿಂಗಳು ಕಳೆದಿದೆ. ಈತನಿಗಾಗಿ ಮಹಾರಾಷ್ಟ್ರ ಸರಕಾರ ಬರೋಬ್ಬರಿ 35 ಕೋಟಿ ರುಪಾಯಿಗಳನ್ನು ಖರ್ಚು ಮಾಡಿದೆ. ಸಮುದ್ರದ ಮೂಲಕ ಮುಂಬೈ ಪ್ರವೇಶಿಸಿದ ಕಸಬ್ ಒಳಗೊಂಡ ಉಗ್ರರ ತಂಡ ಮನಬಂದಂತೆ ಅಮಾಯಕರ ಮೇಲೆ ಗುಂಡು ಹಾರಿಸಿ ಪ್ರಾಣ ತೆಗೆದು ಇಂಥವನಿಗೆ ಕೂಡಾ ಅಳು ಬರುವುದೆ?

ಕಸಬ್ ಸುರಿಸುತ್ತಿರುವುದು ಮೊಸಳೆ ಕಣ್ಣೀರು. ಆತನನ್ನು ನಂಬಬೇಡಿ. ನೀವು ನೀಡಿರುವ ಶಿಕ್ಷೆ ಭಯೋತ್ಪಾದನೆಯಲ್ಲಿ ಮಡಿದವರ ಆತ್ನಕ್ಕೆ ಶಾಂತಿ ಸಿಗಲಿದೆ. ಭಾರತದ ವಿರುದ್ದ ಹೋರಾಟಕ್ಕಿಳಿದರೆ, ಶಿಕ್ಷೆ ಖಚಿತ ಎನ್ನುವುದನ್ನು ಜಗತ್ತಿಗೆ ಸಾರಿದ್ದೀರಿ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಉಜ್ವಲ್ ನಿಕ್ಕಂ ನ್ಯಾಯಮೂರ್ತಿಗಳಲ್ಲಿ ವಿನಂತಿಸಿದರು.

ಅಜ್ಮಲ್ ಅಮೀರ್ ಕಸಬ್ ಗೆ ಗಲ್ಲು! ಎಂದು?
ಕಸಬ್ ನನ್ನು ನೇಣಿಗೇರಿಸುವವರಾದರೂ ಯಾರು?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X