ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾಲಪ್ಪ ಪರ ನಿಂತರೆ ಜೋಕೆ : ಸಂಘ

By Mrutyunjaya Kalmat
|
Google Oneindia Kannada News

Yeddyurappa
ಬೆಂಗಳೂರು, ಮೇ 6 : ಕಳಂಕಿತ ಸಚಿವ ಹರತಾಳು ಹಾಲಪ್ಪ ಬೆಂಬಲಕ್ಕೆ ನಿಲ್ಲದಿರುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಕೆ ಎಸ್ ಈಶ್ವರಪ್ಪ ಅವರಿಗೆ ಸಂಘ ಪರಿವಾರ ತಾಕೀತು ಮಾಡಿದೆ.

ಸ್ನೇಹಿತನ ಪತ್ನಿ ಮೇಲೆ ಅತ್ಯಾಚಾರ ಎಸಗಿದ ಆರೋಪ ಬಂದ ತಕ್ಷಣ ಸಚಿವ ಸ್ಥಾನಕ್ಕೆ ಹಾಲಪ್ಪ ಅವರಿಂದ ರಾಜೀನಾಮೆ ಪಡೆದದ್ದು ಹಾಗೂ ಪ್ರಕರಣವನ್ನು ಸಿಐಡಿ ತನಿಖೆಗೆ ಆದೇಶಿಸಿದ ಸರಕಾರ ಕ್ರಮ ಸರಿಯಾಗಿದೆ. ಆದರೆ, ಗಂಭೀರ ಸ್ವರೂಪದ ಆರೋಪ ಹಾಲಪ್ಪ ಮೇಲಿರುವುದರಿಂದ ಅವರ ರಕ್ಷಣೆಗೆ ಸರಕಾರ ಹಾಗೂ ಪಕ್ಷ ನಿಂತರೆ ಅದಕ್ಕೆ ತಕ್ಕ ಬೆಲೆ ತೆರಬೇಕಾದೀತು. ಅತ್ಯಾಚಾರ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಸರಕಾರ ರಕ್ಷಣೆಗೆ ನಿಂತಿದೆ ಎಂಬ ಆಪಾದನೆ ಬಂದೀತು ಎಂದು ಸಂಘ ಪರಿವಾರ ಮುಖಂಡರು ಯಡಿಯೂರಪ್ಪ, ಈಶ್ವರಪ್ಪ ಅವರಿಗೆ ಎಚ್ಚರಿಕೆ ನೀಡಿದ್ದಾರೆ.

ಹಾಲಪ್ಪ ಪರ ವಹಿಸಿ ದಿನಕ್ಕೊಂದು ಹೇಳಿಕೆ ನೀಡಬಾರದು. ಈ ರೀತಿ ಹೇಳಿಕೆ ನೀಡುವುದರಿಂದ ಕೆಸರಿನ ಮೇಲೆ ಕಲ್ಲು ಹಾಕುವುದು ಬೇಡ. ಹಾಲಪ್ಪ ಪ್ರಕರಣ ಒಂದೂವರೆ ತಿಂಗಳ ಹಿಂದೆಯೇ ಗೊತ್ತಿತ್ತು ಎಂದು ಈಶ್ವರಪ್ಪ, ಆದರೆ ಆಗಲೇ ಏಕೆ ಕ್ರಮಕೈಗೊಳ್ಳಲಿಲ್ಲ. ಆಗ ಎಚ್ಚತ್ತುಕೊಂಡಿದ್ದರೆ ಇದೀಗ ಸರಕಾರ ಮತ್ತು ಮುಜುಗರಕ್ಕೊಳಗಾಗುತ್ತಿರಲಿಲ್ಲ ಎಂದು ಸಂಘ ಅಸಮಾಧಾನ ವ್ಯಕ್ತಪಡಿಸಿದೆ.

ಸುಮಾರು ಎರಡು ಗಂಟೆಗೂ ಅಧಿಕ ನಡೆದ ಸಭೆಯಲ್ಲಿ, ಹಾಲಪ್ಪ ದೋಷಿ ಎಂದು ಸಾಬೀತಾಗಿದರೆ ಅವರನ್ನು ಪಕ್ಷದಿಂದ ಉಚ್ಚಾಟಿಸುತ್ತೇವೆ. ದೋಷ ಮುಕ್ತರಾದರೆ ಪಕ್ಷದ ಸ್ಥೈರ್ಯ ಮತ್ತಷ್ಟು ಹೆಚ್ಚಲಿದೆ. ಅಲ್ಲದೇ ಪ್ರತಿಪಕ್ಷದ ಪಿತೂರಿ ಬಯಲಿಗೆ ಬರುತ್ತದೆ. ಹಾಲಪ್ಪ ಅವರನ್ನು ಈಗಲೇ ಉಚ್ಚಾಸಿದರೆ ಪ್ರತಿಪಕ್ಷಗಳ ಕೈಮೇಲಾಗುತ್ತದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಸಮರ್ಥಿಸಿಕೊಂಡಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X