ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಚಿವ ಕಾಗೇರಿ ಅವರಿಗೆ ಅಭಿನಂದನೆ

By Rajendra
|
Google Oneindia Kannada News

Vishweshwar Hegade Kageri
ಬೆಂಗಳೂರು, ಮೇ.6: ಮೇ.20ರಂದು ಪ್ರಕಟವಾಗಬೇಕಿದ್ದ ಎಸ್ಸ್ಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶಗಳನ್ನು ಎರಡು ವಾರ ಮುನ್ನವೇ ಅಂದರೆ ಮೇ.6ರಂದು ಪ್ರಕಟಿಸಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ದಟ್ಸ್ ಕನ್ನಡ ಅಂತರ್ ಜಾಲ ತಾಣ ಅಭಿನಂದಿಸುತ್ತದೆ.

ಫಲಿತಾಂಶಗಳನ್ನು ಶೀಘ್ರವಾಗಿ ಪ್ರಕಟಿಸಿರುವ ಕಾರಣ ವಿದ್ಯಾರ್ಥಿಗಳು, ಪೋಷಕರು ಅತೀವ ಸಂತಸ ವ್ಯಕ್ತಪಡಿಸಿದ್ದಾರೆ. ಶಿಕ್ಷಣ ಸಚಿವ ಕಾಗೇರಿ, ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ನಿರ್ದೇಶಕ ಎಂ ಎನ್ ಬೇಗ್ ಹಾಗೂ ಪರೀಕ್ಷಾ ಮಂಡಳಿಯ ಹಿರಿಯ ಕಿರಿಯ ಅಧಿಕಾರಿಗಳಿಗೆ ದಟ್ಸ್ ಕನ್ನಡ ಓದುಗರು ಬುಧವಾರ ರಾತ್ರಿಯಿಂದಲೇ ಇ-ಮೇಲ್ ಹಾಗೂ ದೂರವಾಣಿ ಮೂಲಕ ಅಭಿನಂದನೆಗಳ ಸುರಿಮಳೆಗರೆಯುತ್ತಿದ್ದಾರೆ.

ಪರೀಕ್ಷಾ ಫಲಿತಾಂಶಗಳು ಶೀಘ್ರವಾಗಿ ಹೊರಬಿದ್ದಿರುವ ಕಾರಣ ವಿದ್ಯಾರ್ಥಿಗಳು ಕಾಲೇಜು ಶಿಕ್ಷಣಕ್ಕೆ ಪ್ರವೇಶ ಪಡೆಯಲು ಅನುಕೂಲವಾಗಿದೆ. ತಮ್ಮ ಮುಂದಿನ ಗುರಿ ನಿರ್ದೇಶಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಸಾಕಷ್ಟು ಸಮಯಾವಕಾಶವೂ ದೊರೆತಂತಾಗಿದೆ. ಗ್ರಾಮೀಣ ಕರ್ನಾಟಕದಲ್ಲಿ ಕಣ್ಣಾಮುಚ್ಚಾಲೆ ಆಡುವ ವಿದ್ಯುತ್ ಅಭಾವದ ನಡುವೆಯೂ ಗ್ರಾಮೀಣ ವಿದ್ಯಾರ್ಥಿಗಳು ಇಂಟರ್ನೆಟ್ ಮೂಲಕ ಪರೀಕ್ಷಾ ಫಲಿತಾಂಶ ತಿಳಿದುಕೊಳ್ಳಲು ಆಸಕ್ತಿ ತೋರಿಸುತ್ತಿರುವುದು ಬೆರಗು ಉಂಟುಮಾಡುತ್ತಿದೆ. ಫಲಿತಾಂಶಗಳಿಗೆ ಇಲ್ಲಿ ಕ್ಲಿಕ್ ಮಾಡಿ.

ಪಿಯೂಸಿ ಫಲಿತಾಂಶ : ಎರಡನೇ ಪಿಯೂಸಿ ಫಲಿತಾಂಶಗಳನ್ನು ಕರ್ನಾಟಕ ಪಿಯೂ ಮಂಡಳಿ ಇಂದು ಸಂಜೆ ಪ್ರಕಟಣೆ ಮಾಡುತ್ತಿದೆ. ಸಂಜೆ 4 ಗಂಟೆಗೆ ಶಿಕ್ಷಣ ಸಚಿವ ಅರವಿಂದ ನಿಂಬಾವಳಿ ಮತ್ತು ಪಿಯೂ ಮಂಡಲಿಯ ನಿರ್ದೇಶಕ ಎಸ್ ಶಂಕರನಾರಾಯಣ ಅವರು ಸುದ್ದಿಗೋಷ್ಠಿ ನಡೆಸುತ್ತಿದ್ದು ಇಂಟರ್ ನೆಟ್ಟಿನಲ್ಲಿ ಫಲಿತಾಂಶಗಳು ದೊರಕುವ ಸಮಯವನ್ನು ಪ್ರಕಟಿಸುತ್ತಾರೆ. ಇತ್ತೀಚಿನ ವರದಿಗಳಿಗಾಗಿ ವಿದ್ಯಾರ್ಥಿಗಳು ದಟ್ಸ್ ಕನ್ನಡ ತಾಣವನ್ನು ಸಂಜೆ 5 ಗಂಟೆ ನಂತರ ಭೇಟಿ ಮಾಡಬಹುದಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X